More

    LIVE: ನೆರವೇರಿತು ರಾಮಮಂದಿರದ ಶಿಲಾನ್ಯಾಸ: ರಾಮ ಪರಿವರ್ತನೆಯ ಪ್ರತಿಪಾದಕ – ಪ್ರಧಾನಿ ಮೋದಿ

    ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದ ಐತಿಹಾಸಿಕ ದಿನ ಇಂದು. ದೇಶಕ್ಕೆ ದೇಶವೇ ದಶಕಗಳಿಂದ ಕಾಯುತ್ತಿದ್ದ ಐತಿಹಾಸಿಕ ಕಾರ್ಯಕ್ರಮ ಇಂದು ಸಂಪನ್ನಗೊಂಡಿದ್ದು, ರಾಮಮಂದಿರ ನಿರ್ಮಾಣದ ಕನಸು ನನಸಾಗುವುದಕ್ಕೆ ಚಾಲನೆ ಸಿಕ್ಕಿದೆ. ಅಯೋಧ್ಯೆ ಶ್ರೀರಾಮಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದ ನೇರ ಪ್ರಸಾರದ ಅಪ್ಡೇಟ್ಸ್​ ನ ಮುಖ್ಯಾಂಶಗಳು ಇಲ್ಲಿವೆ. 

    2.08 PM: ಶ್ರೀರಾಮಚಂದ್ರ ಪರಿವರ್ತನೆಯ ಪ್ರತಿಪಾದಕ. ಶ್ರೀರಾಮನು ವಿರೋಧದ ಬದಲಾಗಿ ನಮಗೆ ಬೋಧ, ಶೋಧಗಳ ದಾರಿ ತೋರಿಸಿದ. ಆತನ ಜೀವನಾದರ್ಶಗಳನ್ನು ಪಾಲಿಸುತ್ತ ನಾವೆಲ್ಲರೂ ಸ್ವಾವಲಂಬಿ ಭಾರತವನ್ನು ನಿರ್ಮಿಸೋಣ. ಯುಗಯುಗಗಳ ತನಕ ಈ ರಾಮಮಂದಿರ ಜಗತ್ತಿಗೆ ಮಾನವತೆಯ ಮಾರ್ಗದರ್ಶನ ಮಾಡಲಿದೆ. ಸದ್ಯ ನಾವೆಲ್ಲರೂ ಮುನ್ನಡೆಯಬೇಕು. ಭಾರತವೂ ಮುನ್ನಡೆಯಬೇಕು. ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮಾಡಬೇಕು. ಎಲ್ಲರಿಗೂ ಆರೋಗ್ಯ ನೀಡುವಂತೆ ಶ್ರೀರಾಮಚಂದ್ರ, ಸೀತಾದೇವಿಯರಲ್ಲಿ ಕೇಳಿಕೊಳ್ಳುತ್ತೇವೆ. – ಪ್ರಧಾನಿ ನರೇಂದ್ರ ಮೋದಿ.

    2.00 PM:  ಅನೇಕತೆಯಲ್ಲಿ ಏಕತೆಯನ್ನು ತಂದುಕೊಡಬಲ್ಲವನು ರಾಮ. ಪ್ರತಿಯೊಂದು ಸಮುದಾಯ, ದೇಶದವರೂ ರಾಮ. ರಾಮಾಯಣದ ಜತೆಗೆ ನಂಟು ಹೊಂದಿದ್ದಾರೆ. ಭಾರತದಲ್ಲೇ ಒಂದೊಂದು ರಾಜ್ಯದಲ್ಲಿ ಒಂದೊಂದು ರಾಮಾಯಣದ ಕಥೆ ಸಿಗುತ್ತದೆ. ವಿದೇಶಗಳಲ್ಲೂ ರಾಮಕಥಾ ವಿವರಣೆ, ರಾಮಾಯಣದ ವಿವರಣೆ ಸಿಗುತ್ತದೆ. ನಮ್ಮ ಅರಿವು, ಜೀವನಾದರ್ಶಗಳು ಜಗತ್ತಿನಾದ್ಯಂತ ಹೇಗೆ ಪಸರಿಸಿದೆ ನೋಡಿ. ಅಯೋಧ್ಯಾ ಕೇಂದ್ರ ಸ್ಥಾನವಾಗಿ ಎಲ್ಲೆಲ್ಲಿ ರಾಮ, ರಾಮಾಯಣ ಪಸರಿಸಿಕೊಂಡಿದೆಯೋ ಅವೆಲ್ಲವನ್ನೂ ಜೋಡಿಸುವ ಸರ್ಕೀಟ್ ರಚನೆಯಾಗಲಿದೆ – ಪ್ರಧಾನಿ ನರೇಂದ್ರ ಮೋದಿ.

    1.50 PM: ಈ ದಿನ ಕೋಟ್ಯಂತರ ರಾಮಭಕ್ತರ ಸಂಕಲ್ಪದ ದಿನ. ರಾಮಮಂದಿರ ದೇಶದ ಹೊಸ ಪ್ರತೀಕವಾಗಲಿದೆ. ರಾಮಮಂದಿರ ಪೂರ್ಣಗೊಂಡ ಬಳಿಕ ಪ್ರತಿ ಕ್ಷೇತ್ರದಲ್ಲೂ ಅವಕಾಶಗಳು ಸೃಷ್ಟಿಯಾಗಲಿವೆ. ರಾಮಮಂದಿರ ದೇಶವನ್ನು ಒಗ್ಗೂಡಿಸುವ ರಾಷ್ಟ್ರೀಯ ಭಾವೈಕ್ಯತೆಯ ಪ್ರತೀಕವಾಗಿ ಮೂಡಿಬರಲಿದೆ. ಹೊಸ ಇತಿಹಾಸ ರಚನೆಯಷ್ಟೇ ಅಲ್ಲ, ಇತಿಹಾಸವನ್ನು ಶುದ್ಧಗೊಳಿಸಲಿದೆ.  ಸ್ವಾತಂತ್ರ್ಯ ಸಂಗ್ರಾಮದಲ್ಲಿ ಎಲ್ಲರೂ ಮಹಾತ್ಮ ಗಾಂಧಿಯವರನ್ನು ಬೆಂಬಲಿಸಿದಂತೆ ಇಂದು ಶ್ರೀರಾಮಮಂದಿರ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಿದ್ದಾರೆ. ಶ್ರೀರಾಮ ಎಂದು ಬರೆದ ಕಲ್ಲುಗಳಿಂದ ಸೇತುವೆ ನಿರ್ಮಿಸಿದಂತೆ ರಾಮಮಂದಿರವೂ ನಿರ್ಮಾಣವಾಗಲಿದೆ – ಪ್ರಧಾನಿ ನರೇಂದ್ರ ಮೋದಿ

    1.45 PM: ಶ್ರೀರಾಮ ಭಾರತದ ಗೌರವ, ಶ್ರೀರಾಮ ಮರ್ಯಾದಾ ಪುರುಷತ್ತೋಮ. ರಾಮ ಎಲ್ಲರ ಮನಸ್ಸಿನಲ್ಲಿದ್ದಾನೆ. ರಾಮನ ಅಸ್ತಿತ್ವಕ್ಕೆ ಧಕ್ಕೆ ಉಂಟುಮಾಡುವ ಕೆಲಸ ನಡೆಯಿತು. ರಾಮ ನಮ್ಮ ಸಂಸ್ಕೃತಿಯೊಂದಿಗೆ ಜೋಡಿಕೊಂಡಿದ್ದಾನೆ. ನಿರಂತರ ಹೋರಾಟದ ನಂತರ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿದೆ. ರಾಮಮಂದಿರ ನಿರ್ಮಾಣವಾದರೆ ದೇಶದ ಪೂರ್ಣ ಅರ್ಥ ವ್ಯವಸ್ಥೆ ಬದಲಾಗಲಿದೆ – ಪ್ರಧಾನಿ ನರೇಂದ್ರ ಮೋದಿ.

    1.40 PM: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೇಗೆ ಹಲವು ತಲೆಮಾರಿನ ಜನರು ಹೋರಾಡಿದ್ದಾರೋ, ಬಲಿದಾನ ಮಾಡಿದ್ದಾರೋ ಅದೇ ರೀತಿಯ ಅಭಿಯಾನ ರಾಮಮಂದಿರದ್ದೂ ಆಗಿತ್ತು. ರಾಮಮಂದಿರ ನಿರ್ಮಾಣಕ್ಕೆ ಅನೇಕರು ತಪಸ್ಸಿನಂತೆ ಕೆಲಸ ಮಾಡಿದ್ದಾರೆ. ರಾಮಮಂದಿರ ಅಭಿಯಾನದಲ್ಲಿ ಸಮರ್ಪಣೆ ಇತ್ತು, ಬಲಿದಾನ ಇತ್ತು. ಸಂಘರ್ಷವೂ ಇತ್ತು. ಇವರೆಲ್ಲರಿಗೂ ನಾನು ಶಿರಬಾಗಿ ನಮಿಸುವೆ – ಪ್ರಧಾನಿ ನರೇಂದ್ರ ಮೋದಿ.

    1.30 PM: ಪ್ರಧಾನಿ ನರೇಂದ್ರ ಮೋದಿ- ಜೈ ಶ್ರೀರಾಮ ಘೋಷಣೆಯ ಈ ಧ್ವನಿ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಎಲ್ಲರಿಗೂ ಅಭಿನಂದನೆಗಳು. ಇಂದು ಇಡೀ ದೇಶ ರೋಮಾಂಚಿತವಾಗಿದೆ. ಎಲ್ಲವೂ ರಾಮಮಯ. ಎಲ್ಲರ ಮನಸ್ಸೂ ಬೆಳಗುತ್ತಿದೆ. ಇಡೀ ಭಾರತ ಬಾವುಕವಾಗಿದೆ. ಬಹುಕಾಲದ ನಿರೀಕ್ಷೆ ಇಂದು ಕೊನೆಯಾಗಿದೆ.

    1.20 PM:  ಆರೆಸ್ಸೆಸ್​ ಮುಖ್ಯಸ್ಥ ಮೋಹನ ಭಾಗವತ್​: ದೇಶಾದ್ಯಂತ ಇಂದು ಆನಂದದ ಲಹರಿ ಇದೆ. ಸ್ವಾವಲಂಬಿ ಭಾರತವನ್ನು ನಿರ್ಮಿಸುವುದಕ್ಕೆ ಈಗ ಆತ್ಮವಿಶ್ವಾಸ ಇಮ್ಮಡಿಯಾಗಿದೆ ಈ ಕಾರ್ಯಕ್ರಮದ ಮೂಲಕ. ಇದು ಕೋಟ್ಯಂತರ ಜನರ ಕನಸು. ಅನೇಕರು ಇದಕ್ಕಾಗಿ ಪ್ರಾಣ ಬಲಿದಾನ ಮಾಡಿದ್ದಾರೆ. ಇನ್ನೂ ಅನೇಕರು ಇಲ್ಲಿಗೆ ಬಂದು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದಾರೆ. ಸದ್ಯದ ಕೋವಿಡ್ ಸನ್ನಿವೇಶದಿಂದ ಅನೇಕರಿಗೆ ನೇರವಾಗಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿಲ್ಲ. ಆದರೆ, ಈ ಕಾರ್ಯನೆರವೇರಿದ್ದಕ್ಕೆ ಎಲ್ಲರೂ ಆನಂದದಿಂದ ಇದ್ದಾರೆ.

    1.10 PM: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ: “5 ಶತಮಾನಗಳ ಸಂಘರ್ಷ ಇಂದು ಕೊನೆಗೊಂಡಂತಾಗಿದೆ. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ, ಸಂವಿಧಾನದ ಚೌಕಟ್ಟಿನೊಳಗೆ ಬಹುದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ. ಇಂತಹ ಸಮರ್ಥ ನಾಯಕತ್ವವನ್ನು ಪ್ರಧಾನಿ ಮೋದಿಯವರು ಒದಗಿಸಿದ್ದು, ಜಗತ್ತು ಭಾರತದ ಕಡೆಗೆ ನೋಡತೊಡಗಿದೆ. ಶಾಂತಿಯುತವಾಗಿ, ಸೌಹಾರ್ದಯುತವಾಗಿ ಈ ಬಿಕ್ಕಟ್ಟನ್ನು ಬಗೆಹರಿಸಿದ್ದಾರೆ. ದೇಶದ ಕೋಟ್ಯಂತರ ಜನರ ಕನಸು ನನಸಾಗಿದೆ. ಭವ್ಯ ರಾಮಮಂದಿರ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ಕಾರ್ಯಕ್ರಮ ಇಂದು ಸಂಪನ್ನಗೊಂಡಿದೆ. ಆ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಚಾಲನೆ ಸಿಕ್ಕಿದೆ. ರಾಮಮಂದಿರ ನಿರ್ಮಾಣದ ಉಸ್ತುವಾರಿ ಟ್ರಸ್ಟ್​ನದ್ದಾದರೆ, ಇಡೀ ಅವಧಪುರಿಯ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಿದೆ. ಆ ಮೂಲಕ ಜಗತ್ತಿನ ಅತ್ಯಂತ ಸಮೃದ್ಧಿಯ ನಗರವನ್ನಾಗಿ ಅವಧಪುರಿಯನ್ನು ರೂಪಿಸೋಣ.

    12.55 PM: ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದ ಬಳಿಕ ಸಭಾ ಕಾರ್ಯಕ್ರಮ ಶುರುವಾಗಿದ್ದು ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್​, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್​, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮತ್ತು ಇತರೆ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದಾರೆ.

    12.45 PM: ಶ್ರಾವಣ ಮಾಸ, ಕೃಷ್ಣಪಕ್ಷದ ದ್ವಿತೀಯ ತಿಥಿಯ ಅಭಿಜಿನ್ ಮುಹೂರ್ತದಲ್ಲಿ ಶಿಲಾನ್ಯಾಸ ಕಾರ್ಯ ನೆರವೇರಿಸಿದ ಪ್ರಧಾನಿ, ಇದೇ ವೇಳೆ ನೆರೆದಿದ್ದ ಭಕ್ತರು ರಾಮರಕ್ಷಾ ಸ್ತೋತ್ರ ಪಠಿಸಿದರು. 32 ಸೆಕೆಂಡ್​ಗಳ ಮುಹೂರ್ತದಲ್ಲಿ ನಡೆಯಿತು ಶಿಲಾನ್ಯಾಸ ಕಾರ್ಯ.

    12.35 PM:  ಭೂಮಿ ಪೂಜೆ ನೆರವೇರಿಸುತ್ತಿರುವ ಪುರೋಹಿತರು ಶಿಲಾನ್ಯಾಸಕ್ಕೆ ಬಳಸುತ್ತಿರುವ ಇಟ್ಟಿಗೆಗಳ ವಿವರವನ್ನು ನೀಡಿದ್ರು- 1989ರಲ್ಲಿ ಜಗತ್ತಿನಾದ್ಯಂತ ಭಕ್ತರು ಕಳುಹಿಸಿದ ಇಟ್ಟಿಗೆಗಳ ಪೈಕಿ 9 ಇಟ್ಟಿಗೆಗಳನ್ನು ಇಲ್ಲಿ ಇರಿಸಲಾಗಿದೆ. ಒಟ್ಟು 2.75 ಲಕ್ಷ ಇಟ್ಟಿಗೆಗಳು ಇಲ್ಲಿ ಸಂಗ್ರಹವಾಗಿದೆ. ಅದರಲ್ಲಿ ಜೈ ಶ್ರೀರಾಮ್ ಎಂದು ಬರೆದಿರುವ 100 ಇಟ್ಟಿಗೆಗಳನ್ನೂ ತೆಗೆದುಕೊಳ್ಳಲಾಗಿದೆ. 

    12.30 PM: ಬೆಂಗಳೂರಿನ ರಾಜಾಜಿನಗರದ ಶ್ರೀರಾಮಮಂದಿರದಲ್ಲಿ ವಿಶೇಷ ಪೂಜೆ…

    12.15 PM: ಪ್ರಧಾನಿ ನರೇಂದ್ರ ಮೋದಿಯವರು ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸುತ್ತಿರುವ ದೃಶ್ಯಗಳು

    12.10 PM: ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಸೈಟ್​ನಲ್ಲಿ ಭೂಮಿಪೂಜೆ ಕಾರ್ಯಕ್ರಮ ಶುರು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿಬೆನ್ ಪಟೇಲ್​, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಸೇರಿ ಗಣ್ಯರು ಪೂಜೆಯಲ್ಲಿ ಭಾಗಿ.

    12.05 PM: ರಾಮಲಲ್ಲಾಗೆ ಸಾಷ್ಟಾಂಗ ಪ್ರಣಾಮ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ. ಪೂರ್ಣವರದಿಗೆ ಮುಂದಿನ ಲಿಂಕ್ ಕ್ಲಿಕ್ಕಿಸಿ –  VIDEO: ಶ್ರೀರಾಮಲಲ್ಲಾನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ…

    12.00 PM: ಭೂಮಿ ಪೂಜೆ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮೊದಲು ಪ್ರಸ್ತಾವಿತ ಶ್ರೀರಾಮಮಂದಿರ ನಿರ್ಮಾಣ ಸ್ಥಳದ ಆವರಣದಲ್ಲಿ ಪಾರಿಜಾತದ ಗಿಡವನ್ನು ನೆಟ್ಟ ಪ್ರಧಾನಿ ನರೇಂದ್ರ ಮೋದಿ.

    11.55 AM: ಹನುಮಾನ್ ಗಡಿಯಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿಯವರಿಗೆ ಬೆಳ್ಳಿ ಕಿರೀಟಿ ತೊಡಿಸಿ ಸನ್ಮಾಸಿದ ದೇಗುಲ ಸಮಿತಿ.

    11.40 AM: ಹನುಮಾನ್ ಗಡಿ ತಲುಪಿದ ಪ್ರಧಾನಿ ಮೋದಿ.

    11.30 AM: ಪ್ರಧಾನಿ ನರೇಂದ್ರ ಮೋದಿಯವರು ಹೆಲಿಕಾಫ್ಟರ್ ಮೂಲಕ ಲಖನೌನಿಂದ ಹೊರಟು ಅಯೋಧ್ಯೆಗೆ ತಲುಪಿದ್ದು, ಸಾಕೇತ್ ಮೈದಾನದಲ್ಲಿ ಇಳಿದಿದ್ದಾರೆ. ಅಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಇತರೆ ಪ್ರಮುಖರು ಪ್ರಧಾನಿಯವರನ್ನು ಬರಮಾಡಿಕೊಂಡರು.

    11.10 AM: ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಸೈಟ್​ನ ಭೂಮಿ ಪೂಜೆ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು.

    11.00 AM:  ರಾಮಜನ್ಮಭೂಮಿ ಸೈಟ್​ನಲ್ಲಿ ಕಾರ್ಯಕ್ರಮದ ಸ್ಥಳದಲ್ಲಿನ ಚಿತ್ರಣ- ಯೋಗ ಗುರು ಬಾಬಾ ರಾಮದೇವ್​, ಸ್ವಾಮಿ ಅವಧೇಶಾನಂದ ಗಿರಿ, ಚಿದಾನಂದ ಮಹಾರಾಜ್ ಮತ್ತು ಇತರೆ ಗಣ್ಯರು ಈಗಾಗಲೇ ಹಾಜರಿದ್ದಾರೆ. 

    10.50 AM:  ಪತಂಜಲಿ ಯೋಗಪೀಠದ ಬೃಹತ್ ಗುರುಕುಲ

    ಶ್ರೀರಾಮ ಮಂದಿರದ ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪತಂಜಲಿ ಯೋಗಪೀಠದ ಸಂಸ್ಥಾಪಕ ಬಾಬಾ ರಾಮದೇವ್ ಅವರು ಇಂದು ದೊಡ್ಡ ಗುರುಕುಲದ ಯೋಜನೆಯನ್ನು ಘೋಷಿಸಿದ್ದಾರೆ. ಪೂರ್ಣವರದಿಗೆ ಮುಂದಿನ ಲಿಂಕ್ ಕ್ಲಿಕ್ಕಿಸಿ – ಅಯೋಧ್ಯೆಯಲ್ಲಿ ಪತಂಜಲಿ ಯೋಗಪೀಠದ ಬೃಹತ್ ಗುರುಕುಲ: ಯೋಜನೆ ಘೋಷಿಸಿದ ಬಾಬಾ ರಾಮದೇವ್

    ಪ್ರಧಾನಿ ಮೋದಿಗೆ ಬೆಳ್ಳಿ ಕಿರೀಟ

    ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಸ್ಥಳದಲ್ಲಿ ಶ್ರೀರಾಮಮಂದಿರದ ಭೂಮಿಪೂಜೆ, ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆಳ್ಳಿ ಕಿರೀಟದ ಉಡುಗೊರೆ. ಪೂರ್ಣವರದಿಗೆ ಮುಂದಿನ ಲಿಂಕ್ ಕ್ಲಿಕ್ಕಿಸಿ ಪ್ರಧಾನಿ ಮೋದಿಗೆ ಹನುಮಗಡಿ ದೇಗುಲದವರಿಂದ ಬೆಳ್ಳಿ ಕಿರೀಟ ಉಡುಗೊರೆ..

    10.40 AM: ಉತ್ತರ ಪ್ರದೇಶದ ರಾಜಧಾನಿ ಲಖನೌ ತಲುಪಿದ ಪ್ರಧಾನಿ ನರೇಂದ್ರ ಮೋದಿ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಅಯೋಧ್ಯೆಗೆ ಪ್ರಯಾಣ ಮಾಡಲಿದ್ದಾರೆ ಪ್ರಧಾನಿ

    10.35 AM: ರಾಮಜನ್ಮಭೂಮಿ ಸ್ಥಳಕ್ಕೆ ತಲುಪಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯಪಾಲೆ ಆನಂದಿಬೆನ್ ಪಟೇಲ್​, ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷೆ ಉಮಾ ಭಾರತಿ. ಅಯೋಧ್ಯೆ ಎಲ್ಲರನ್ನೂ ಒಗ್ಗೂಡಿಸಿದೆ. ಈಗ ಈ ದೇಶದಲ್ಲಿ ಯಾವ ಭೇದ ಭಾವ ಇಲ್ಲ ಎಂದು ಜಗತ್ತಿನ ಎದುರು ವಿಶ್ವಾಸದೊಂದಿಗೆ ಹೇಳಬಹುದು ಎಂದ ಸಾಧ್ವಿ ಉಮಾಭಾರತಿ.

    10.25 AM: ಸ್ವಾಭಿಮಾನಿ ಭಾರತ ನಿರ್ಮಾಣದ ಕಡೆಗೆ ಮೊದಲ ಹೆಜ್ಜೆ- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಗೆ ಹೊರಟ ಸಂದರ್ಭದ ಫೋಟೋ ಟ್ವೀಟ್ ಮಾಡಿ ಅಪ್ಡೇಟ್ ಮಾಡಿದ ಸಂದೇಶ.

    ಕಾಂಗ್ರೆಸ್ಸಿನವರಿಗೇಕೆ ನೆನಪಾದ್ರು ರಾಜೀವ್ ಗಾಂಧಿ?

    ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಶಿಲಾನ್ಯಾಸಕ್ಕೆ ಇನ್ನು ಕೆಲವೇ ಗಂಟೆಗಳು ಉಳಿದಿವೆ. ಇಂಥ ಹೊತ್ತಲ್ಲಿ ಕಾಂಗ್ರೆಸ್ಸಿಗರಿಗೆ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಸುದ್ದಿಗೋಷ್ಠಿ ನೆನಪಾಗಿದೆ! ಅಯೋಧ್ಯೆ ರಾಮಮಂದಿರ ಕ್ರೆಡಿಟ್ ನಮಗೂ ಒಂಚೂರು ಸಿಗಲಿ, ಚುನಾವಣಾ ರಾಜಕೀಯಕ್ಕೆ ಬೇಕಾಗುವುದೆಂಬ ಪ್ರಯತ್ನದಲ್ಲಿದ್ದಾರೆ ಕಾಂಗ್ರೆಸ್ಸಿಗರು! ಪೂರ್ಣವರದಿಗೆ ಮುಂದಿನ ಲಿಂಕ್ ಕ್ಲಿಕ್ಕಿಸಿ – ಶಿಲಾನ್ಯಾಸದ ಟೈಮಲ್ಲಿ ಕಾಂಗ್ರೆಸ್ಸಿಗರಿಗೆ ನೆನಪಾಯ್ತು ರಾಜೀವ್​ ಗಾಂಧಿಯವರ ಸುದ್ದಿಗೋಷ್ಠಿ!

    9.45 AM: ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಸ್ಥಳದಲ್ಲಿರುವ ರಾಮಲಲ್ಲಾ ದೇವರು. ಪ್ರಧಾನಿ ನರೇಂದ್ರ ಮೋದಿಯವರು ಇದೇ ರಾಮಲಲ್ಲಾ ದೇವರಿಗೆ ಪೂಜೆ ಸಲ್ಲಿಸಿ ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಲಿದ್ದಾರೆ.

    ರಾಮಜನ್ಮಭೂಮಿ ಸ್ಥಳದಲ್ಲಿರುವ ರಾಮಲಲ್ಲಾ..

    ಅಯೋಧ್ಯೆಯ ರಾಮಜನ್ಮಭೂಮಿ ಸ್ಥಳದಲ್ಲಿರುವ ರಾಮಲಲ್ಲಾ ದೇವರು. ಪ್ರಧಾನಿ ನರೇಂದ್ರ ಮೋದಿಯವರೂ ಈ ರಾಮಲಲ್ಲಾ ದೇವರಿಗೇ ಪೂಜೆ ಸಲ್ಲಿಸಲಿದ್ದಾರೆ.

    Posted by Vijayavani on Tuesday, August 4, 2020

    ರಘುಪತಿ ಲಡ್ಡು ಪ್ರಸಾದಕ್ಕೆ ಕರ್ನಾಟಕದ ಘಮಲು

    ಇಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆಯ ಸಂದರ್ಭದಲ್ಲಿ ತಯಾರಿಸಲಾಗುವ ಪ್ರಸಾದದಕ್ಕೂ ಕರ್ನಾಟಕಕ್ಕೂ ತೀರಾ ಹತ್ತಿರದ ಸಂಬಂಧವಿದೆ. ಪೂರ್ಣವರದಿಗೆ ಮುಂದಿನ ಲಿಂಕ್ ಕ್ಲಿಕ್ಕಿಸಿರಾಮಮಂದಿರದ ‘ರಘುಪತಿ ಲಡ್ಡು’ವಿನಲ್ಲಿ ಕರ್ನಾಟಕದ ಘಮಲು..

    9.40 AM: ಮಹಾರಾಷ್ಟ್ರದಲ್ಲಿರುವ ನಾಗಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಯ ಎದುರು ಕಂಗೊಳಿಸುತ್ತಿದೆ ರಂಗೋಲಿ

    9.30 AM: ದೆಹಲಿಯಿಂದ ಲಖನೌಗೆ ವಿಶೇಷ ವಿಮಾನದ ಮೂಲಕ ಹೊರಟ ಪ್ರಧಾನಿ ನರೇಂದ್ರಮೋದಿ

    ಪ್ರಧಾನಿ ನೆಡಲಿದ್ದಾರೆ ‘ದೇವ ವೃಕ್ಷ’
    ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದ ಭೂಮಿಪೂಜೆಗೂ ಮುನ್ನ ಅಲ್ಲಿಯೇ ಒಂದು ಗಿಡವನ್ನು ನೆಡಲಿದ್ದಾರೆ. ಹೌದು. ಅದುವೇ ಕೃಷ್ಣಪ್ರಿಯ ಪಾರಿಜಾತ. ದೇವ ವೃಕ್ಷವೆಂದೇ ಕರೆಯಲ್ಪಡುವ ಈ ಗಿಡವನ್ನು ನೆಡುವ ಮೂಲಕ ಭೂಮಿ ಪೂಜೆಯ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಲಿದ್ದಾರೆ. ಪೂರ್ಣವರದಿಗೆ ಮುಂದಿನ ಲಿಂಕ್ ಕ್ಲಿಕ್ಕಿಸಿ – ಸಮುದ್ರಮಥನದಲ್ಲಿ ಹುಟ್ಟಿದ ‘ದೇವ ವೃಕ್ಷ’ ರಾಮಮಂದಿರದ ಅಂಗಳದಲ್ಲಿ….

    ರಾಮಜನ್ಮಭೂಮಿಗೆ ಪ್ರಧಾನಿ ಮೋದಿ ಭೇಟಿ ವಿಶೇಷ
    ಅಯೋಧ್ಯೆಗೆ ಕಳೆದ 50 ವರ್ಷಗಳ ಅವಧಿಯಲ್ಲಿ ಪ್ರಧಾನಮಂತ್ರಿಗಳು ಭೇಟಿ ನೀಡಿದ್ದಾರಾದರೂ, ಅವರೆಲ್ಲರೂ ರಾಮಜನ್ಮಭೂಮಿಸ್ಥಳಕ್ಕೆ ಭೇಟಿ ನೀಡಿಲ್ಲ. ರಾಮಜನ್ಮಭೂಮಿ ಸ್ಥಳಕ್ಕೆ ಭೇಟಿ ನೀಡ್ತಾ ಇರುವ ಮೊದಲ ಪ್ರಧಾನಿ ನರೇಂದ್ರ ಮೋದಿ. ಅಲ್ಲದೆ, ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲೂ ಅವರು ಭಾಗಿಯಾಗ್ತಾ ಇರುವುದು ವಿಶೇಷ. ಪೂರ್ಣವರದಿಗೆ ಮುಂದಿನ ಲಿಂಕ್ ಕ್ಲಿಕ್ಕಿಸಿ – ರಾಮಜನ್ಮಭೂಮಿಗೆ ಭೇಟಿ ನೀಡ್ತಿರೋ ಮೊದಲ ಪ್ರಧಾನಿ ನರೇಂದ್ರ ಮೋದಿ!

    9.25 AM: ಇದು ಐತಿಹಾಸಿಕ ದಿನ. ದೀರ್ಘಾವಧಿಗೆ ಈ ದಿನ ಸ್ಮರಣೀಯವಾಗಿ ಉಳಿಯಲಿದೆ. ರಾಮಮಂದಿರ ನಿರ್ಮಾಣವಾಗುವುದೆಂಬ ವಿಶ್ವಾಸವಿದೆ. ಅದೇ ರೀತಿ ಭಾರತದಲ್ಲಿ ರಾಮರಾಜ್ಯವೂ ಸ್ಥಾಪನೆಯಾಗಲಿದೆ ಎಂದ ಯೋಗ ಗುರು ಬಾಬಾ ರಾಮದೇವ್​. 

    ರಾಮಮಂದಿರ ಹೀಗೆ ಕಾಣಿಸಲಿದೆ..
    ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲು ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಶ್ರೀರಾಮಮಂದಿರ ಹೇಗೆ ಕಾಣಿಸಲಿದೆ ಎಂಬ ಪರಿಕಲ್ಪನೆಯ ಚಿತ್ರಗಳನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಟ್ವೀಟ್ ಮಾಡಿದೆ. ಪೂರ್ಣವರದಿಗೆ ಮುಂದಿನ ಲಿಂಕ್ ಕ್ಲಿಕ್ಕಿಸಿ – PHOTOS: ನಿರ್ಮಾಣ ಪೂರ್ಣಗೊಂಡ ನಂತರದಲ್ಲಿ ರಾಮಮಂದಿರ ಹೀಗೆ ಕಾಣಿಸಲಿದೆ..

    7.45 AM: ಪ್ರಧಾನಿಯವರ ಭೇಟಿಗೂ ಮೊದಲು ಅಯೋಧ್ಯೆಯ ಹನುಮಾನ್ ಗಡಿ ದೇವಸ್ಥಾನದ ಸ್ಯಾನಿಟೈಸೇಷನ್ ನಡೆಸುತ್ತಿರುವ ಆರೋಗ್ಯ ಸೇವಾ ಸಿಬ್ಬಂದಿ

    ಮನಸೆಳೆಯುತ್ತಿದೆ ಮರಳುಚಿತ್ರ ಕಲಾವದಿ ಸುದರ್ಶನ್ ಪಟ್ನಾಯಕ್ ಅವರು ಬಿಡಿಸಿದ ಈ ಚಿತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts