More

    ಎಲ್​ಎಸಿ ಬಳಿ ಚೀನಾದ ಉಪಟಳ: ರೋಬೋಟಿಕ್ಸ್​ ಸೇರಿ ಆಧುನಿಕ ಯುದ್ಧ ತಂತ್ರಗಾರಿಕೆ ಕುರಿತು ಭಾರತದ ಚಿಂತನೆ

    ನವದೆಹಲಿ: ಲಡಾಖ್​ ಬಳಿಯ ವಾಸ್ತವ ಗಡಿರೇಖೆ ಬಳಿ ಚೀನಾದ ಉಪಟಳ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ಮತ್ತು ಘಾತುಕ ಶಸ್ತ್ರಾಸ್ತ್ರ ತಂತ್ರಜ್ಞಾನವನ್ನು ಹೊಂದುವ ನಿಟ್ಟಿನಲ್ಲಿ ಭಾರತ ಚಿಂತನೆ ನಡೆಸಿದೆ. ಈ ಸಂಬಂಧ ಹಿರಿಯ ಲೆಫ್ಟಿನೆಂಟ್​ ಜನರಲ್​ ಒಬ್ಬರ ನೇತೃತ್ವದಲ್ಲಿ ಗಂಭೀರವಾದ ಅಧ್ಯಯನಕ್ಕೆ ಮುಂದಡಿ ಇಟ್ಟಿದೆ.

    ಡ್ರೋನ್​ಗಳ ಸಮೂಹವನ್ನು ಹೊಂದುವುದು, ರೋಬಾಟಿಕ್ಸ್​, ಲೇಸರ್​ಗಳು ಮತ್ತು ಮಾರಕ ಯುದ್ಧಸಾಮಗ್ರಿಗಳಿಂದ ಹಿಡಿದು ಕೃತಕ ಬುದ್ಧಿಮತ್ತೆ, ಬಿಗ್​ ಡೇಟಾ ಅನಾಲಿಸಿಸ್​ ಹಾಗೂ ಅಲ್ಗಾರದಂ ಯುದ್ಧತಂತ್ರದವರೆಗೆ ಆಧುನಿಕ ಬಗೆಯ ಯುದ್ಧತಂತ್ರಜ್ಞಾನಗಳ ಬಳಕೆ ಕುರಿತು ಇವರು ಅಧ್ಯಯನ ನಡೆಸುತ್ತಿದ್ದಾರೆ.
    ಚೀನಾ ಈಗಾಗಲೆ ಸಾಂಪ್ರದಾಯಿಕ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಕ್ರಮ ಕೈಗೊಂಡಿದೆ. ಇದಕ್ಕಾಗಿ ಅದು ನಾನ್​ ಕೈನೆಟಿಕ್​ ಮತ್ತು ನಾನ್​ ಕಂಬಾಟ್​ ಯುದ್ಧರೀತಿಯ ಕುರಿತು ಅತ್ಯಾಧುನಿಕ ರೀತಿಯ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಂಡಿದೆ.

    ಅಷ್ಟೇ ಅಲ್ಲ, ಅದು ಈಗಾಗಲೆ ಕೃತಕ ಬುದ್ಧಿಮತ್ತೆ ಆಧಾರಿತ ಮಾರಕವಾದ ಸ್ವಾಯತ್ತ ಯುದ್ಧ ಸಾಮಗ್ರಿಗಳು ಸೇರಿ ಭವಿಷ್ಯದಲ್ಲಿನ ಯುದ್ಧಪದ್ಧತಿಗಳನ್ನು ಅಳವಡಿಸಿಕೊಳ್ಳಲು ಅದು ಆರಂಭಿಸಿದೆ. ಈ ಯುದ್ಧಸಾಮಗ್ರಿಗಳು ಮಿಲಿಟರಿಯ ಘಾತುಕ ದಾಳಿಯ ಸಾಮರ್ಥ್ಯಕ್ಕೆ ಪೂರಕವಾಗಿ ಅಭಿವೃದ್ಧಿ ಹೊಂದುತ್ತಿವೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ದಿನಸಿ, ತರಕಾರಿ ಮಾರಾಟಗಾರರನ್ನು ಕೋವಿಡ್​-19 ಟೆಸ್ಟ್​ಗೆ ಒಳಪಡಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ

    ಹೊಸ ಬಗೆಯ ಯುದ್ಧಪದ್ಧತಿಗಳನ್ನು ಹೊಂದುವ ಬಗ್ಗೆ ಭಾರತೀಯ ಸೇನಾಪಡೆ 2018ರಲ್ಲಿ ಆಸಕ್ತಿ ಮೂಡಿತು. ಇದಕ್ಕಾಗಿ ಅದು ಬಲಿಷ್ಠವಾದ ಏಕೀಕೃತ ಯುದ್ಧ ಸಮೂಹಗಳನ್ನು (ಐಬಿಜಿ) ರಚಿಸುವುದು, ಸೈಬರ್​ ಯುದ್ಧಪದ್ಧತಿಯ ವಿಸ್ತರಣೆಯಿಂದ ಹಿಡಿದು ಅಗತ್ಯಬಿದ್ದಾಗ ಮೈಕ್ರೋಉಪಗ್ರಹಗಳ ಉಡಾವಣೆವರೆಗೆ, ಲೇಸರ್​ಗಳು, ಕೃತಕ ಬುದ್ಧಿಮತ್ತೆ ಮತ್ತು ರೋಬಾಟಿಕ್ಸ್​ ಆಧಾರಿತ ಶಸ್ತ್ರಾಸ್ತ್ರಗಳನ್ನು ಹೊಂದಲು ಅದು ಬಯಕೆ ವ್ಯಕ್ತಪಡಿಸಿತು ಎಂದು ಹೇಳಲಾಗಿದೆ.

    ಕಳೆದ ವರ್ಷದ ಜನವರಿಯಲ್ಲಿ ಭಾರತೀಯ ಸೇನಾಪಡೆಯ ಮುಖ್ಯಸ್ಥರಾಗಿದ್ದ ಬಿಪಿನ್​ ರಾವತ್​ ಅವರು ಇಂಥ ಯುದ್ಧತಂತ್ರಗಾರಿಕೆ, ಪದ್ಧತಿ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿ, ಇದಕ್ಕಾಗಿ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.

    ಯುದ್ಧತಂತ್ರಗಾರಿಕೆಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಆದ್ದರಿಂದ, ಕೈಗಾರಿಕಾ ವಲಯವನ್ನು ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಬಳಸಿಕೊಳ್ಳುವ ಬಗ್ಗೆಯೂ ಚಿಂತನೆ ನಡೆಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದರು.

    ರಾತ್ರೋರಾತ್ರಿ 70ಕ್ಕೂ ಹೆಚ್ಚು ರೌಡಿಶೀಟರ್​ಗಳ ಮನೆ ಮೇಲೆ ದಾಳಿ, ಅಪಾರ ಪ್ರಮಾಣದ ಮಾರಕಾಸ್ತ್ರ ವಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts