ಕಾರ್ಗಿಲ್ ವಿಜಯೋತ್ಸವ ಸ್ವಾಭಿಮಾನದ ಸಂಕೇತ

KARGIL
Published on

ನರಗುಂದ: ಕಾರ್ಗಿಲ್ ವಿಜಯೋತ್ಸವ ದೇಶದ ಸ್ವಾಭಿಮಾನದ ಸಂಕೇತವಾಗಿದೆ. ದೇಶದ ಪ್ರತಿಯೊಬ್ಬ ನಾಗರಿಕರು ಈ ವಿಜಯೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ದೇಶಾಭಿಮಾನ ಮತ್ತು ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದು ಉಪನ್ಯಾಸಕಿ ಎಸ್.ಎ. ಬಾರಕೇರ ಹೇಳಿದರು.

ಪಟ್ಟಣದ ಶ್ರೀ ಯಡೆಯೂರ ಸಿದ್ಧಲಿಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಲೇಜ್‌ನ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಎಂ.ವಿ. ವಿಶ್ವಕರ್ಮ ಮಾತನಾಡಿ, ಜನ್ಮ ಕೊಟ್ಟ ತಾಯಿ, ಆಶ್ರಯ ನೀಡಿದ ದೇಶಕ್ಕಿಂತ ದೊಡ್ಡ ವಸ್ತು ಈ ಜಗತ್ತಿನಲ್ಲಿ ಯಾವುದು ಇಲ್ಲ ಎಂಬುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.

ಉಪನ್ಯಾಸಕ ಎಂ.ಪಿ. ಕ್ಯಾತನಗೌಡ್ರ, ವಿ.ಎಸ್. ಪಾರ್ವತಿ, ಸೌಮ್ಯಾ ಹರಪನಹಳ್ಳಿ, ದಿವ್ಯಾ ಕೊಣ್ಣೂರ, ಜ್ಯೋತಿ ಅವರಾದಿ, ಇತರರಿದ್ದರು. ಚೈತ್ರಾ ಸೂಡಿ ಪ್ರಾರ್ಥಿಸಿದರು. ಹನುಮಂತಗೌಡ ಹಾಲಗೌಡ್ರ, ವೀರೇಶ ಜವಳಿಮಠ, ಯಶೋಧಾ ಕರಮಳ್ಳಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net