

ವಿಟ್ಲ: ದೇಶ ಪ್ರೇಮವೆಂದರೆ ಗಡಿಯಲ್ಲಿ ಶಸ ಹಿಡಿದು ಹೋರಾಡುವುದು ಮಾತ್ರ ಅಲ್ಲ. ಪ್ರತಿಯೊಂದು ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಅದು ದೇಶ ಕಟ್ಟುವ ಕೆಲಸ ಎಂದು ನಿವತ್ತ ಯೋಧ ರಮೇಶ್ ರಾವ್ ಮಂಚಿ ಹೇಳಿದರು.
ಕೇಂದ್ರ ಸಮಾನ ಇಲಾಖೆ ಮಂಗಳೂರು ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಕನ್ಯಾನ ಆಶ್ರಯದಲ್ಲಿ ಕನ್ಯಾನ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಡೆದ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಮಾತನಾಡಿ, ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರು ಮತ್ತು ಅವರ ಕುಟುಂಬದ ತ್ಯಾಗ ಮತ್ತು ಬಲಿದಾನವನ್ನು ನೆನಪು ಮಾಡಿಕೊಳ್ಳುವುದು ಹಾಗೂ ಮುಂದಿನ ಪೀಳಿಗೆಯಲ್ಲಿ ದೇಶಪ್ರೇಮವನ್ನು ಉದ್ದೀಪಿಸುವುದು ಇಂಥ ಕಾರ್ಯಕ್ರಮಗಳ ಉದ್ದೇಶ ಎಂದರು.
ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ನಿವತ್ತ ಯೋಧ ರಮೇಶ್ ರಾವ್ ಮಂಚಿ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಉಪನ್ಯಾಸಕ ರಾಜೇಂದ್ರ ರಾವ್ ಸ್ವಾಗತಿಸಿದರು. ಕ್ಷೇತ್ರ ಪ್ರಚಾರ ಅಧಿಕಾರಿ ಜಿ. ತುಕಾರಾಮ ಗೌಡ ಪ್ರಾಸ್ತಾವನೆಗೈದರು.