ವಿದ್ಯಾರ್ಥಿಗಳಿಂದ ಸದೃಢ ಸಮಾಜ ನಿರ್ಮಾಣ : ಸುಂದರ ಗೌಡ ಶೆಟ್ಲಬೈಲು ಅಭಿಪ್ರಾಯ

New Project (4)
Published on

ಕಡಬ: ಕಡಬ ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಮತ್ತು ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಜಂಟಿಯಾಗಿ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮ ಹನುಮಾನ್ ನಗರದ ಯಾದವಶ್ರೀ ಸಭಾಂಗಣದಲ್ಲಿ ನಡೆಸಲಾಯಿತು.

ನಿವೃತ್ತ ಯೋಧ ಸುಂದರ ಗೌಡ ಶೆಟ್ಲಬೈಲು ಮಾತನಾಡಿ, ಸದೃಢ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವವಾದದ್ದು. ವಿದ್ಯಾರ್ಥಿಗಳು ದೇಶ ಸೇವೆಯಿಂದ ವಂಚಿತರಾಗಬಾರದು ಎಂದರು.

ಪ್ರೌಢ ವಿಭಾಗದ ಮೇಲ್ವಿಚಾರಕಿ ಪುಲಸ್ತ್ಯಾ ರೈ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಾರ್ಥಕ್ ಮಾತಾನಾಡಿದರು. ನಿವೃತ್ತ ಯೋಧ ಸುಂದರ ಗೌಡ ಶೆಟ್ಲ ಬೈಲು ಅವರನ್ನು ಸನ್ಮಾನಿಸಲಾಯಿತು. ವಿದ್ಯಾಭಾರತಿ ಜಿಲ್ಲಾಮಟ್ಟದ ಕರಾಟೆ ಸ್ಪರ್ಧೆಯಲ್ಲಿ ವಿಜೇತರಾದವರನ್ನು ಆಭಿನಂದಿಸಲಾಯಿತು. ಸರಸ್ವತೀ ಆಂಗ್ಲ ಮಾಧ್ಯಮ ಶಾಲೆ ಸಂಚಾಲಕ ಅಜಿತ್ ರೈ ಆರ್ತಿಲ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯಶಿಕ್ಷಕ ವಸಂತ ಕೆ., ಪ್ರೌಢ ವಿಭಾಗದ ಮುಖ್ಯಶಿಕ್ಷಕಿ ಶೈಲಶ್ರೀ ರೈ ಎಸ್.ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಯಕ್ಷಿತ್ ಸ್ವಾಗತಿಸಿ, ತನ್ವಿ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಲಕ್ಷ್ಮೀಶ ಗೌಡ ಆರಿಗ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕಿಯರಾದ ಸೌಮ್ಯಾ ಕೆ.ಎ., ಹರಿಪ್ರಿಯಾ ಹರಿದಾಸ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net