ಕರಾವಳಿಯಲ್ಲಿ ಗೋಚರಿಸಿದ ಮತ್ಸ್ಯಕನ್ಯೆ!

IMG-20210524-WA0039
Published on

ಅರ್ಧ ದೇಹ ಮತ್ಸ್ಯ ರಚನೆಯನ್ನು ಹೋಲುವ ಸುಂದರ ಅಂಗಸೌಷ್ಟವದ ಮತ್ಸ್ಯಕನ್ಯೆಯ ಪಾತ್ರ ಪೌರಾಣಿಕ ಹಾಗೂ ಜಾನಪದ ಕತೆಗಳ ಮೂಲಕ ವಿಶ್ವದೆಲ್ಲೆಡೆ ಪ್ರಸಿದ್ಧ.

ಆದರೆ ಲಾಕ್​ಡೌನ್ ಅವಧಿಯ ವಿರಾಮ ಬಳಸಿಕೊಂಡು ಪತಿಯ ನೆರವಿನೊಂದಿಗೆ ಸಿದ್ಧಗೊಂಡ ಮಂಗಳೂರಿನ ಮತ್ಸ್ಯಕನ್ಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿದ್ದಾರೆ. ಈಕೆಯ ಹೆಸರು ಪ್ರಿಯಾ ಪವನ್ ಬಾಳಿಗಾ. ಮೂಲ ಕತೆಯಲ್ಲಿ ಇರುವಂತೆ ಈಕೆ ಸಮುದ್ರದಲ್ಲಿ ಕಾಣಿಸಿಕೊಂಡಿಲ್ಲ. ಮೇಕಪ್ ಆರ್ಟಿಸ್ಟ್ ಆಗಿರುವ ಪ್ರಿಯಾ ಟೈಮ್​ಪಾಸ್​​ಗೆಂದು ತಮ್ಮನ್ನು ತಾವೇ ಮತ್ಸ್ಯಕನ್ಯೆ ರೂಪದಲ್ಲಿ ಸಿದ್ಧಪಡಿಸಿಕೊಂಡಿದ್ದಾರೆ. ಸಮುದ್ರ ನೀಲಿಯ ಮೊಗ, ಸಮುದ್ರದ ಚಿಪ್ಪುಗಳಿಂದಲೇ ತಯಾರಿಸಿದ ಕಿರೀಟ, ಹಸಿರು, ನೀಲಿ, ನೇರಳೆ, ಗುಲಾಬಿ ಬಣ್ಣಗಳ ವಿಶಿಷ್ಟ ಸಂಯೋಜನೆ ಹಾಗೂ ದೇಹ ಭಾಷೆಯ ಮೂಲಕ ಪ್ರಿಯಾ ಕಾಣಿಸಿಕೊಂಡಿದ್ದಾರೆ.

ಸೆಲ್ಪ್ ಮೇಕಪ್​ನ ಥೀಮ್ ಫ್ಯಾಂಟಸಿ ಮೇಕಪ್ ಪ್ರಯೋಗಕ್ಕೆ ಜನಮೆಚ್ಚುಗೆ ಲಭಿಸಿದೆ ಎಂದು ಪ್ರಿಯಾ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಈ ರೀತಿ ಮೇಕ್ ಓವರ್ ಮಾಡುವುದು ಭಾರತೀಯರ ತ್ವಚೆಗೆ ಸವಾಲಿನ ಕೆಲಸ ಎನ್ನುವುದು ಅವರ ಅಭಿಪ್ರಾಯ. ಪ್ರಿಯಾ ಧರಿಸಿದ ಕಿರೀಟದಲ್ಲಿ ಬಳಸಿದ ವೈವಿಧ್ಯಮಯ ಸಮುದ್ರ ಚಿಪ್ಪುಗಳನ್ನು ಪತಿ ಪವನ್ ಬಾಳಿಗಾ ಸಸಿಹಿತ್ಲು, ಕಾಪು, ಮುಲ್ಕಿ ಮುಂತಾದ ಸಮುದ್ರ ತೀರಗಳಲ್ಲಿ ಹುಡುಕಾಟ ನಡೆಸಿ ಸಂಗ್ರಹಿಸಿಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net