ಮಾತೆ-ಮಾತೃಭೂಮಿ ಮೇಲೆ ಗೌರವ - ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಂದೇಶ

PTR_19 OCT_2
Published on


ವಿಟ್ಲ: ಮಾತೆ ಹಾಗೂ ಮಾತೃಭೂಮಿಯ ಮೇಲೆ ಪ್ರತಿಯೊಬ್ಬರಿಗೂ ವಿಶೇಷವಾದ ಗೌರವವಿರಬೇಕು. ಎಲ್ಲರೂ ಒಂದಾಗಿ ಬಾಳುತ್ತಿರುವುದು ಭಾರತದ ಸಂಸ್ಕೃತಿಯಾಗಿದೆ. ಪ್ರತಿಯೊಬ್ಬರೂ ಶಕ್ತಿ ಸಾಮರ್ಥ್ಯ ಮೀರಿ ಭಾರತದ ಸೇವೆ ನಡೆಸುವುದು ಸಂತಸದ ಕಾರ್ಯವಾಗಿದೆ. ಶ್ರೀ ರಾಮಚಂದ್ರನ ಆದರ್ಶಗಳನ್ನು ಕನ್ಯಾನ ಭಾರತ ಸೇವಾಶ್ರಮ ಪರಿಪಾಲನೆ ಮಾಡುತ್ತಿದೆ. ಆಶ್ರಮದ ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗುತ್ತಿದ್ದು, ಇನ್ನಷ್ಟು ಅಭಿವೃದ್ಧಿಯನ್ನು ಕಾಣುವಂತಾಗಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕನ್ಯಾನ ದೇಲಂತಬೆಟ್ಟು ಭಾರತ ಸೇವಾಶ್ರಮದಲ್ಲಿ ಕರ್ನಾಟಕ ಬ್ಯಾಂಕ್ ಹಾಗೂ ದಾನಿಗಳ ನೆರವಿನೊಂದಿಗೆ ಕಾರ್ಯಕರ್ತರ ವಸತಿಗಾಗಿ ನಿರ್ಮಾಣವಾದ ಶಿರ್ಡಿಧಾಮ ವಸತಿ ಸಂಕೀರ್ಣವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಕರ್ಣಾಟಕ ಬ್ಯಾಂಕ್ ನಿಕಟಪೂರ್ವ ನಿರ್ದೇಶಕ ಮಹಾಬಲೇಶ್ವರ ಎಂ. ಎಸ್. ಮಾತನಾಡಿದರು. ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು ವಹಿಸಿದ್ದರು.


ಕರ್ಣಾಟಕ ಬ್ಯಾಂಕ್ ಚೀಫ್ ಮ್ಯಾನೇಜರ್ ಶ್ರೀಹರಿ ಪಿ., ಮಂಗಳೂರು ಲೆಕ್ಕಪರಿಶೋಧಕ ಎಸ್. ಶ್ರೀನಿವಾಸ ಕಾಮತ್, ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ ಭಟ್ ಎಸ್., ಕರ್ಣಾಟಕ ಬ್ಯಾಂಕ್ ನಿವೃತ್ತ ಡೆಪ್ಯುಟಿ ಜನರಲ್ ಮ್ಯಾನೇಜರ್ ಬಿ. ಕೆ. ರಾಮಕೃಷ್ಣ ರಾವ್, ಈಶ್ವರಮಂಗಲ ಗಜಾನನ ವಿದ್ಯಾಸಂಸ್ಥೆ ಪ್ರಾಂಶುಪಾಲ ಶಾಮಣ್ಣ ಕಾವು, ಕೋಶಾಽಕಾರಿ ಡಾ.ಕೆ ಸುಬ್ರಹ್ಮಣ್ಯ ಭಟ್, ಸದಸ್ಯರಾದ ಡಾ. ಆರ್ ಎನ್ ಶಾಸ್ತ್ರಿ, ಕುಮಾರಸ್ವಾಮಿ ವಿ, ಡಿ. ಶಿವರಾಮ ರಾವ್, ಎನ್. ಶಂಕರನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದರು.


ವರಲಕ್ಷ್ಮಿ ಪ್ರಾರ್ಥಿಸಿದರು. ಆಶ್ರಮದ ಅಧ್ಯಕ್ಷ ಯು. ಮಹಾಲಿಂಗ ಭಟ್ ಸ್ವಾಗತಿಸಿದರು. ಕಾರ್ಯದರ್ಶಿ ಈಶ್ವರ ಭಟ್ ಪ್ರಸ್ತಾವನೆಗೈದು, ವಂದಿಸಿದರು. ಸಮರೇಂದ್ರನಾಥ್ ಭಟ್ಟಾಚಾರ್ಯ ಕಾರ್ಯಕ್ರಮ ನಿರೂಪಿಸಿದರು.


ಕೆಲಸ ಸರಿಯಾದ ದಿಕ್ಕಿನಲ್ಲಿ ಮಾಡಿದಾಗ ಸಂತೋಷವನ್ನು ನೀಡುವ ಜತೆಗೆ ಸಮಾಜಕ್ಕೆ ಸಹಕಾರವಾಗುತ್ತದೆ. ಸಮಾಜದ ಜತೆಗೆ ಹೋದ ಕಾರಣ ಕರ್ಣಾಟಕ ಬ್ಯಾಂಕ್ ೧೦೦ ವರ್ಷವೂ ಲಾಭದಲ್ಲಿ ನಡೆದಿದೆ. ಸಮಾಜಕ್ಕೆ ಬೇಕಾದ ಮೂಲಸೌಕರ್ಯ ನೀಡುವ ಕೆಲಸ ಪ್ರತಿ ಹಂತದಲ್ಲಿ ಬ್ಯಾಂಕ್‌ನಿಂದ ಮಾಡಲಾಗಿದೆ. ಆರ್ಥಿಕವಾಗಿ ಶೈಕ್ಷಣಿಕವಾಗಿ ಸದೃಢವಾಗಿರುವ ಪರಿಣಾಮ ವೃದ್ಧಾಶ್ರಮಗಳು ಹೆಚ್ಚಾಗುತ್ತಿದೆ. ಭಾರತದ ಸಂಸ್ಕೃತಿಯ ಉಳಿಸುವ ಅನಿವಾರ್ಯತೆಯಿದೆ.
|ಮಹಾಬಲೇಶ್ವರ ಎಂ. ಎಸ್.

ಕರ್ಣಾಟಕ ಬ್ಯಾಂಕ್ ನಿಕಟಪೂರ್ವ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net