

ಮಡಿಕೇರಿ: ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸದಸ್ಯೆಯಾಗಿ ಜಿಲ್ಲಾ ಬಿಜೆಪಿಯ ಹಿರಿಯ ಮುಖಂಡರಾದ ಮನೆಯಪಂಡ ಕಾಂತಿ ಸತೀಶ್ ಆಯ್ಕೆಯಾಗಿದ್ದಾರೆ.
ವೀರಾಜಪೇಟೆಯ ಕಾಂತಿ ಸತೀಶ್ ಕೊಡಗು ಬಿಜೆಪಿ ಮಹಿಳಾ ಮೋರ್ಛಾದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು. ಅಂತೆಯೇ, ಕೊಡಗು ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ಪಂಚಾಯತ್ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಹಾಗೂ ವೀರಾಜಪೇಟೆ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಕೂಡ ಕಾಂತಿ ಸತೀಶ್ ಕಾರ್ಯ ನಿರ್ವಹಿಸಿ ದ್ದರು.
ಇದೀಗ ಲೋಕಸಭಾ ಸದಸ್ಯ ಯದುವೀರ್ ಕಷ್ಣದತ್ತ ಒಡೆಯರ್ ಅಧ್ಯಕ್ಷರಾಗಿರುವ ಕೇಂದ್ರ ಸರ್ಕಾರಗಳ ಯೋಜನೆಗಳ ಅನುಷ್ಟಾನ ಸಂಬಂಧಿತ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ.