

ಬಂಟ್ವಾಳ: ತಾಲೂಕಿನ ಸಜೀಪ ಮಾಗಣೆಯ ಪ್ರಧಾನ ದೇವಾಲಯ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರಾಗಿ ಪ್ರಧಾನ ಅರ್ಚಕ ಮಹೇಶ್ ಭಟ್, ದೇವಿಪ್ರಸಾದ್ ಪೂಂಜ ಬರಂಗರೆ, ಸುಧೀರ್ ಕುಮಾರ್, ಕೆ.ಕಾನ್ಸಲೆ, ಕೆ.ಮೋಹನದಾಸ್ ಪೂಜಾರಿ, ನವೀನ್ ಕುಮಾರ್, ಅಣ್ಣುನಾಯ್ಕ ನಗ್ರಿ, ಸುಜಾತಾ ಗಣೇಶ್ ಶೆಟ್ಟಿ, ಬೇಬಿ ಯೋಗೀಶ್ ಪೂಜಾರಿ ನೇಮಕಗೊಂಡಿದ್ದಾರೆ. ನೂತನ ವ್ಯವಸ್ಥಾಪನಾ ಸಮಿತಿ ಸೋಮವಾರ ದೇವಳದಲ್ಲಿ ಅಧಿಕಾರ ಸ್ವೀಕರಿಸಿದೆ.
ದೇವಳದ ಆಡಳಿತಾಧಿಕಾರಿಯಾಗಿದ್ದ ತಾರನಾಥ ಸಾಲಿಯಾನ್ ಪಿ., ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಸಜೀಪಮುನ್ನೂರು ಮೂರ್ತೆದಾರರ ಸೇ.ಸ.ಸಂಘ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಉಪಸ್ಥಿತರಿದ್ದರು.