ಕೊನೆಗೂ ತುಳು ಭಾಷೆಯಲ್ಲಿ ಬಿಡುಗಡೆಯಾಗಲು ಸಜ್ಜಾದ ಕಾಂತಾರ; ಡಿಸೆಂಬರ್​ನಲ್ಲಿ ತೆರೆಗೆ

Kanthara
Published on

ಬೆಂಗಳೂರು: ಕಾಂತಾರ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ, ಇದೀಗ ತುಳು ಅವತರಣಿಕೆಯ ಟ್ರೈಲರ್ ಬಿಡುಗಡೆಯಾಗಿದೆ. ಇದೀಗ ತುಳು ಭಾಷೆಯಲ್ಲಿ ಟ್ರೈಲರ್ ನೋಡಿದ ಮಂದಿ, ಸಂಪೂರ್ಣ ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.

ಕಾಂತಾರ ಸಿನಿಮಾ ದೈವಗಳ ಕಥೆ ಹೊಂದಿತ್ತು. ಕರಾವಳಿ ಭಾಗದ ಹಿನ್ನೆಲೆಯಿಂದ ರೂಪುಗೊಂಡ ಈ ಸಿನಿಮಾ, ಬಿಡುಗಡೆಯಾದ ಆರಂಭದಿಂದಲೂ ತುಳು ಭಾಷೆಗೆ ಡಬ್​ ಆಗಬೇಕು ಎಂಬ ಆಗ್ರಹ ಆರಂಭವಾಗಿತ್ತು. ಅಂತೆಯೇ ಸಿನಿಮಾ ತಂಡ ಕೂಡ ತುಳು ಭಾಷೆಗೆ ಡಬ್ಬಿಂಗ್ ಆಗುತ್ತಿರುವ ಮಾಹಿತಿ ಹಂಚಿಕೊಂಡಿತ್ತು.

ಕನ್ನಡ ಭಾಷೆಯಲ್ಲಿ ಮಾತ್ರ ನಿರ್ಮಾಣವಾಗಿದ್ದ ಕಾಂತಾರ ಸಿನಿಮಾ, ನೋಡ ನೋಡುತ್ತಿದ್ದಂತೆಯೇ ಹಿಂದಿ, ಮಲಯಾಳಂ, ತಮಿಳು, ತೆಲುಗು ಭಾಷೆಗೆ ಡಬ್​ ಆಗಿ, ಪ್ಯಾನ್ ಇಂಡಿಯಾ ಸಿನಿಮಾವಾಗಿ ದೊಡ್ಡ ಮಟ್ಟದ ಯಶಸ್ಸು ಸಂಪಾದಿಸಿತ್ತು. ಆದರೆ ತುಳು ಭಾಷೆಯಲ್ಲಿ ಮಾತ್ರ ತೆರೆ ಕಂಡಿರಲಿಲ್ಲ. ಇದೀಗ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದ್ದಂತೆ, ತುಳು ಭಾಷೆಯಲ್ಲೂ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ.

ಡಿಸೆಂಬರ್ 2 ರಂದು ದೇಶದಾದ್ಯಂತ ಕಾಂತಾರ ಸಿನಿಮಾ ತುಳು ಭಾಷೆಯಲ್ಲಿ ಬಿಡುಗಡೆಯಾಗುವುದಾಗಿ ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ. ಅಂತೆಯೇ ನವೆಂಬರ್ 25 ರಿಂದ ಹೊರದೇಶಗಳಲ್ಲಿ ಕಾಂತಾರ ತುಳು ಅವತರಣಿಕೆ ಬಿಡುಗಡೆಯಾಗುತ್ತಿದೆ.

ತುಳು ರಂಗಭೂಮಿಯ ಹಿರಿಯ, ಜನಪ್ರಿಯ ಕಲಾವಿದ ಡಾ.ದೇವದಾಸ್ ಕಾಪಿಕಾಡ್, ಅಚ್ಯುತ್ ಕುಮಾರ್ ಅವರ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ತುಳು ಸಿನಿಮಾ ನಟ ಅರ್ಜುನ್ ಕಾಪಿಕಾಡ್ ರಿಷಬ್ ಶೆಟ್ಟಿ ಪಾತ್ರಕ್ಕೆ ಧ್ವನಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net