More

    ರಜೆಯ ಮೂಡ್​ನಲ್ಲಿ ವಿಜಯ್-ರಶ್ಮಿಕಾ, ಮತ್ತೆ ವೈರಲ್ ಆದ ಫೋಟೋಗಳು

    ಬೆಂಗಳೂರು: ಮನರಂಜನಾ ಉದ್ಯಮದಿಂದ ಅನೇಕ ವದಂತಿಗಳು ಕೇಳಿಬರುತ್ತಲೇ ಇರುತ್ತವೆ. ಅದರಲ್ಲೂ ಬಹುತೇಕ ಅಭಿಮಾನಿಗಳು ಸಿನಿ ಕ್ಷೇತ್ರದ ರೂಮರ್​​​​ ಲವ್ ಬರ್ಡ್ಸ್ ಮೇಲೆ ಕಣ್ಣಿಟ್ಟಿರುತ್ತಾರೆ. ಸದ್ಯ ರಶ್ಮಿಕಾ-ವಿಜಯ್ ಎಲ್ಲೇ ಕಾಣಿಸಿಕೊಂಡರೂ ಸುದ್ದಿಯಲ್ಲಿರುತ್ತಾರೆ. ಅವರಿಬ್ಬರೂ ಪ್ರೀತಿ ಮಾಡುತ್ತಿದ್ದಾರೆ ಎಂಬ ಸುದ್ದಿ ಅನೇಕ ವರ್ಷಗಳಿಂದ ಕೇಳಿಬರುತ್ತಲೇ ಇದೆ. ರಶ್ಮಿಕಾ ತನ್ನ ಗೆಳೆಯ ವಿಜಯ್ ದೇವರಕೊಂಡ ಜೊತೆ ಒಟ್ಟಿಗೆ ಇರುವುದು ಆಗಾಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ.

    ಇದೀಗ ಮತ್ತೊಮ್ಮೆ ರಶ್ಮಿಕಾ-ವಿಜಯ್ ದೇವರಕೊಂಡ ಒಟ್ಟಿಗೆ ಕಾಣಿಸಿಕೊಂಡಿದ್ದು, ಈಗ ಸಾಮಾಜಿಕ ಮಾಧ್ಯಮ ಬಳಕೆದಾರರೇ ಇದನ್ನು ಬಹಿರಂಗಪಡಿಸಿದ್ದಾರೆ. ರಶ್ಮಿಕಾ ಕೆಲವು ಫೋಟೋಗಳನ್ನು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ಈ ಫೋಟೋಗಳು ಆಕೆಯ ಹೊಸ ವರ್ಷಾಚರಣೆಯ ಫೋಟೋಗಳು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಅವರು ಉದ್ದೇಶಪೂರ್ವಕವಾಗಿ ಇದನ್ನು ತಡವಾಗಿ ಹಂಚಿಕೊಂಡಿದ್ದಾರಂತೆ. ತನ್ನ ಗೆಳೆಯ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ವಿದೇಶದಲ್ಲಿ ಹೊಸ ವರ್ಷ ಆಚರಿಸಿದ್ದಾರೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ವಿಜಯ್ ತಮ್ಮ ಇನ್‌ಸ್ಟಾಗ್ರಾಮ್‌ನಿಂದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ಆಹಾರವನ್ನು ಸೇವಿಸುತ್ತಾ ಮುಕ್ತವಾಗಿ ನಗುವುದನ್ನು ನೋಡಬಹುದು. ಪೋಸ್ಟ್‌ನಲ್ಲಿ ಅಭಿಮಾನಿಯೊಬ್ಬರು, ಈ ಫೋಟೋಗಳನ್ನು ನೋಡಿ ‘ರಶ್ಮಿಕಾ ತೆಗೆದ ಫೋಟೋಗಳಿವು’ ಎಂದು ಕಾಮೆಂಟ್​​​ ಮಾಡಿದ್ದಾರೆ. ಮತ್ತೊಬ್ಬರು ‘ರಶ್ಮಿಕಾ ಅವರ ಪೋಸ್ಟ್ ನಾಳೆ ಇದೇ ಆಗಿರುತ್ತದೆ’ ಎಂದೆಲ್ಲಾ ಹೇಳಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಫೆಬ್ರವರಿಯಲ್ಲಿ ಇಬ್ಬರು ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕೆಲವು ಸಮಯದಿಂದ ಕೇಳಿಬರುತ್ತಿದೆ. ಹಾಗಾಗಿ ಇದನ್ನು ತಿಳಿಯಲು ಅಭಿಮಾನಿಗಳು ಕೂಡ ಈ ಬಗ್ಗೆ ಕಾತರದಿಂದ ಕಾಯುತ್ತಿದ್ದಾರೆ. ಅಲ್ಲದೆ, ರಶ್ಮಿಕಾ ತಮ್ಮ ಫೋಟೋವನ್ನು ಹಂಚಿಕೊಂಡ ತಕ್ಷಣ, ಈ ಜೋಡಿ ಒಟ್ಟಿಗೆ ವಿಹಾರ ಮಾಡುತ್ತಿದೆ ಎಂದು ಜನರಿಗೆ ಮನವರಿಕೆಯಾಗಿದ್ದು, ಇದೀಗ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 

    Divya Ayodhya: ದಿವ್ಯ ಅಯೋಧ್ಯ ಆ್ಯಪ್‌ ಬಿಡುಗಡೆ; ಇದರಲ್ಲಿ ಏನೆಲ್ಲಾ ಸೌಲಭ್ಯಗಳು ಸಿಗಲಿವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts