More

    ಕನ್ನಡ ಭಾಷೆ ಅಭಿವೃದ್ಧಿಗೆ ಶ್ರಮಿಸುತ್ತಿದೆ ಕಸಾಪ

    ಕಂಪ್ಲಿ: ಕನ್ನಡ ಭಾಷೆ ಅಕ್ಷಯವಾಗಿದ್ದು ಬಳಸಿದಷ್ಟು ಬಳಕೆಗೊಳ್ಳುತ್ತದೆ. ನಿತ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಅತಿ ಹೆಚ್ಚಾಗಿ ಬಳಸುವಲ್ಲಿ ಕನ್ನಡಿಗರು ಜಾಗೃತಿ ತೋರಬೇಕು ಎಂದು ಬಳ್ಳಾರಿಯ ಡಾ.ಎ.ಪಿ.ಜೆ.ಅಬುಲ್ ಕಲಾಂ ವಸತಿ ಶಾಲೆ ಉಪನ್ಯಾಸಕ ಬಸರಕೋಡ್ ನಾಗರಾಜ ಹೇಳಿದರು.

    ಕನ್ನಡಿಗರ ಆಸ್ಮೀತೆಯ ಪ್ರತೀಕ

    ಇಲ್ಲಿನ ಗಂಗಾ ಸಂಕೀರ್ಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಹಮ್ಮಿಕೊಂಡಿದ್ದ ಕಸಾಪ 109ನೇ ಸಂಸ್ಥಾಪನಾ ದಿನ ಸಮಾರಂಭದಲ್ಲಿ ಮಾತನಾಡಿದರು. ಕನ್ನಡ ನಾಡು, ನುಡಿ, ಜಲ, ಗಡಿ, ಸಂಸ್ಕೃತಿ, ಪರಂಪರೆಯ ಅಭಿವೃದ್ಧಿ ಮತ್ತು ಪೋಷಣೆಗಾಗಿ ಕಸಾಪ ಶತಮಾನದಿಂದಲೂ ಟೊಂಕ ಕಟ್ಟಿ ಶ್ರಮಿಸುತ್ತಾ ಬಂದಿದ್ದು, ಕನ್ನಡಿಗರ ಆಸ್ಮೀತೆಯ ಪ್ರತೀಕವಾಗಿದೆ ಎಂದರು.

    ಇದನ್ನೂ ಓದಿ:ಕನ್ನಡಿಗರ ಅಸ್ಮಿತೆ ಕಸಾಪ
    ಜೈನ್ ಸೇವಾ ಟ್ರಸ್ಟ್ ಅಧ್ಯಕ್ಷ ಶಾಂತಿಲಾಲ್ ಸಿಂಘ್ವಿ ಸಮಾರಂಭಕ್ಕೆ ಚಾಲನೆ ನೀಡಿ, ಪ್ರತಿಯೊಬ್ಬ ಕನ್ನಡಿಗರು ಕಸಾಪ ಸದಸ್ಯರಾಗುವ ಮೂಲಕ ಕಸಾಪವನ್ನು ಬಲಪಡಿಸಬೇಕು ಎಂದು ಹೇಳಿದರು.

    ಕನ್ನಡ ನಾಡು ನುಡಿಗಾಗಿ ಸೇವೆಗೈದ ಕನ್ನಡ ಹಿತರಕ್ಷಕ ಸಂಘದ ಅಧ್ಯಕ್ಷ ಬೂದಗುಂಪಿ ಅಂಬಣ್ಣ, ಸಿರಿಗನ್ನಡ ಬಳಗದ ಸಂಸ್ಥಾಪಕ ಅಧ್ಯಕ್ಷ ಎಚ್.ಎನ್.ನಟರಾಜ ಇವರನ್ನು ಕಸಾಪ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಗೌರವಿಸಲಾಯಿತು.

    ಕವಿಗೋಷ್ಠಿಯಲ್ಲಿ ಸ್ಥಳೀಯ ಕವಿಗಳಾದ ಎ.ಶಂಕರ್, ಎಸ್.ಶಾಮಸುಂದರರಾವ್, ಎಸ್.ರಾಜಾ, ಎಚ್.ಎನ್.ನಟರಾಜ್, ಜಿ.ಪ್ರಕಾಶ ಕವಿತೆಗಳನ್ನು ವಾಚಿಸಿದರು. ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಚಿತ್ರಗಾರ್ ಅಧ್ಯಕ್ಷತೆವಹಿಸಿದ್ದರು. ಅಕ್ಕಿಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ, ಗಣ್ಯವರ್ತಕ ಬಳ್ಳಾರಿ ನಿರಂಜನಗುಪ್ತಾ, ಕೃಷ್ಣ ಎಸ್.ಪೋಳ, ಸಾಹಿತ್ಯ ಸಿರಿ ಪ್ರತಿಷ್ಠಾನದ ಅಧ್ಯಕ್ಷ ಜಿ.ಪ್ರಕಾಶ, ಜೆಸಿಐ ಕಂಪ್ಲಿ ಸೋನಾದ ಅಧ್ಯಕ್ಷ ಸಂತೋಷ್ ಕೊಟ್ರಪ್ಪ ಸೋಗಿ, ಪರಿಷತ್ ಪದಾಧಿಕಾರಿಗಳಾದ ಬಂಗಿ ದೊಡ್ಡ ಮಂಜುನಾಥ, ಎಸ್.ಡಿ.ಬಸವರಾಜ, ಡಾ.ಎ.ಸಿ.ದಾನಪ್ಪ, ಬಡಿಗೇರ ಜಿಲಾನ್‌ಸಾಬ್, ಯು.ಎಂ.ವಿದ್ಯಾಶಂಕರ್, ಎಲಿಗಾರ ವೆಂಕಟರೆಡ್ಡಿ. ವೀರಮ್ಮ ನಾಗರಾಜ, ಅಕ್ಕಿಶ್ವೇತಾ, ಎಸ್.ವಿಜಯಲಕ್ಷ್ಮೀ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts