ತೆರೆಮರೆಯಲ್ಲಿ.. ನಟಿಯರ ಕೈಲಾದ ಸಹಾಯ...

Actress
Published on

ಕಾವೇರಿ ಹೋರಾಟವಾಗಲಿ, ಡಬ್ಬಿಂಗ್ ಚಳವಳಿ ಇರಲಿ ... ಕನ್ನಡ ನಾಡು, ನುಡಿ, ಜಲ, ನೆಲ ಸಮಸ್ಯೆ ಉದ್ಭವಿಸಿದಾಗ ಹೀರೋಗಳು ಒಗ್ಗಟ್ಟಾಗಿ ಬರುತ್ತಾರೆ, ಹೀರೋಯಿನ್​ಗಳು ಮಾತ್ರ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಎಂಬ ಆರೋಪ ಇದೆ. ಈಗ ಲಾಕ್​ಡೌನ್ ವಿಷಯವನ್ನೇ ತೆಗೆದುಕೊಳ್ಳಿ. ರಾಗಿಣಿ, ಸಂಜನಾ ಗಲ್ರಾನಿ, ಹರ್ಷಿಕಾ ಪೂಣಚ್ಛ ಸೇರಿದಂತೆ ಬೆರಳಣಿಕೆಯಷ್ಟು ನಟಿಯರು ರಸ್ತೆಗಿಳಿದು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ, ಮಿಕ್ಕಂತೆ ಬಹಳಷ್ಟು ನಟಿಯರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ, ಎಲ್ಲರೂ ಸುಮ್ಮನಿಲ್ಲ ಎಂಬುದು ನಿಜ. ಕೆಲವರು ತೆರೆಮರೆಯಲ್ಲಿಯೇ ತಮಗೆಷ್ಟು ಸಾಧ್ಯವೋ ಅಷ್ಟು ಕೆಲಸ ಮಾಡುತ್ತಿದ್ದಾರೆ.

ಸಣ್ಣ ಕೆಲಸಗಳಿಂದಲೇ ಸಂಜನಾ ಆನಂದ

ಕೋವಿಡ್ ಹಿನ್ನೆಲೆಯಲ್ಲಿ ನಟಿ ಸಂಜನಾ ಆನಂದ್ ಮನೆಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಡಾನ್ಸ್ ಸೇರಿ ಹಲವು ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಅವರು, ಕೋವಿಡ್ ಕಷ್ಟಕಾಲದಲ್ಲಿ ಸಣ್ಣಪುಟ್ಟ ಸಹಾಯದಲ್ಲಿ ನಿರತ ರಾಗಿದ್ದಾರೆ. ಈ ಬಗ್ಗೆ ಹೇಳಿಕೊಳ್ಳುವ ಅವರು, ‘ಕರೊನಾ ಇರುವುದರಿಂದ ನಾನು ಮನೆಯಿಂದ ಹೊರಬಂದಿಲ್ಲ. ಆದರೆ, ನಾನಿದ್ದಲ್ಲಿಂದಲೇ ಕೈಲಾದ ಸಹಾಯ ಮಾಡುತ್ತಿದ್ದೇನೆ. ನಮ್ಮ ಅಪಾರ್ಟ್​ವೆುಂಟ್​ನಲ್ಲಿನ ಕೆಲವರಿಗೆ ಸಹಾಯ ಮಾಡಿದ್ದೇನೆ. ಅದನ್ನು ಹೇಳಿಕೊಳ್ಳುವುದೂ ಸಮಂಜಸವಲ್ಲ. ಸೋಷಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಸಂಖ್ಯೆ ಹೆಚ್ಚಿರುವುದರಿಂದ ಸ್ನೇಹಿತರ, ಆಪ್ತರ ಸಮಸ್ಯೆಗಳನ್ನು ಸ್ಟೇಟಸ್ ಹಾಕಿಕೊಂಡಿದ್ದೆ. ಬೆಡ್, ಔಷಧ ಅವಶ್ಯಕತೆ ಇದೆ ಎಂದು ಶೇರ್ ಮಾಡಿಕೊಂಡಿದ್ದೆ. ಕೆಲವರಿಗೆ ಅದರ ಉಪ ಯೋಗವಾಗಿದೆ’ ಎನ್ನುತ್ತಾರೆ ಸಂಜನಾ.

ನಗರದ ಹಲವೆಡೆ ಕಾವ್ಯಾ ಕೆಲಸ

ಇತ್ತೀಚೆಗಷ್ಟೇ ಪ್ಲಾಸ್ಮಾ ದಾನ ಮಾಡಿ ಇತರರಿಗೂ ಮಾದರಿಯಾಗಿದ್ದ ನಟಿ ಕಾವ್ಯಾ ಶಾಸ್ತ್ರಿ, ಕರೊನಾ ಲಾಕ್​ಡೌನ್ ಸಮಯದಲ್ಲಿ ಮನೆಯಲ್ಲಿ ಕೂರದೆ, ಕೈಲಾದ ಒಂದಷ್ಟು ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಪೈಕಿ ಹೇಳುವುದಾದರೆ, ರಾಜಧಾನಿಯ ಹಲವು ಪ್ರದೇಶಗಳಿಗೆ ತೆರಳಿ ಅಲ್ಲಿನ ಜನರಿಗೆ ಆಹಾರದ ಕಿಟ್ ವಿತರಣೆ ಮಾಡುತ್ತಿದ್ದಾರೆ. ಕೊಳಗೇರಿ ಪ್ರದೇಶದಲ್ಲಿ ವಾಸಿಸುವವರಿಗೂ ತಮ್ಮ ಕಾರ್​ನಲ್ಲಿಯೇ ಕಿಟ್ ಕೊಂಡೊಯ್ದು ಹಂಚುತ್ತಿದ್ದಾರೆ. ‘ಕರೊನಾ ಕಷ್ಟ ಕಾಲದಲ್ಲಿ ಸಾಕಷ್ಟು ಜನ ಸಂಕಷ್ಟದಲ್ಲಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸುವ ಮೂಲಕ ನನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ’ ಎನ್ನುತ್ತಾರವರು.

ಲೀಲಾ ಟ್ರಸ್ಟ್​ನಿಂದ ಶ್ರೀಲೀಲಾ ಸೇವೆ

‘ಕಿಸ್’ ಬೆಡಗಿ ಶ್ರೀಲೀಲಾ ನಟ ನೆಯ ಜತೆಗೆ ಆನ್​ಲೈನ್​ನಲ್ಲಿಯೇ ಓದು ಮುಂದುವರಿಸಿದ್ದಾರೆ. ಇದೆಲ್ಲದರ ನಡುವೆ ತೆರೆಮರೆಯಲ್ಲಿ ಕರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೂ ಶ್ರೀಲೀಲಾ ಸ್ಪಂದಿಸುತ್ತಿದ್ದಾರೆ. ‘ನನ್ನ ಹೆಸರಿನ ಲೀಲಾ ಟ್ರಸ್ಟ್ ಮೂಲಕ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ ಬಂದಿದ್ದೇನೆ. ಅದರಿಂದ ಪ್ರಚಾರ ಪಡೆಯಬೇಕೆಂಬ ಉದ್ದೇಶ ನನಗಿಲ್ಲ. ಹಾಗಾಗಿ ಆ ಕೆಲಸ ಗೌಪ್ಯವಾಗಿಯೇ ನಡೆಯುತ್ತಿತ್ತು. ಕೊಳಚೆ ಪ್ರದೇಶದ ಜನರಿಗೆ ಆಹಾರದ ಕಿಟ್​ಗಳನ್ನು ನೀಡಿದ್ದೇನೆ. ಮಳೆಗಾಲ ಶುರುವಾದ ಹಿನ್ನೆಲೆಯಲ್ಲಿ ಒಂದಷ್ಟು ಜನರಿಗೆ ಮನೆಗಳನ್ನೂ ನಿರ್ವಿುಸಿಕೊಟ್ಟಿದ್ದೇನೆ. ಮುಂದೆಯೂ ಆ ಕೆಲಸ ಚಾಲ್ತಿಯಲ್ಲಿರ ಲಿದೆ’ ಎಂಬುದು ಶ್ರೀಲೀಲಾ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net