ಕಾಸರಗೋಡು: ಸಾಹಿತಿ, ಭಾಷಾಂತರಕಾರ ಕೆ.ವಿ.ಕುಮಾರನ್ ಅವರಿಗೆ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ವತಿಯಿಂದ ಗುರುನಮನ ಹಾಗೂ ಕನ್ನಡ ಭವನ ಅಭಿನಂದನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ವಿದ್ಯಾನಗರದಲ್ಲಿ ನಡೆಯಿತು.
ಹಲವು ಕನ್ನಡ ಕಾದಂಬರಿಗಳನ್ನು ಮಲಯಾಳಕ್ಕೆ ಭಾಷಾಂತರಿಸಿರುವ ಕೆ.ವಿ ಕುಮಾರನ್ ಅವರಿಗೆ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಿದ ಹಿನ್ನೆಲೆಯಲ್ಲಿ ಅವರ ಮನೆಗೆ ತೆರಳಿ ಅಭಿನಂದಿಸಲಾಯಿತು.
ಕನ್ನಡ ಭವನ ಗ್ರಂಥಾಲಯದ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕೆ.ರಾಧಾಕೃಷ್ಣ ಉಳಿಯತ್ತಡ್ಕ ಅಭಿನಂದನಾ ಭಾಷಣ ಮಾಡಿದರು. ಕಸಾಪ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂಘದ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ, ಕೇಂದ್ರೀಯ ವಿವಿಯ ಪ್ರೊ.ಮುತ್ತು ಸ್ವಾಮಿ, ಮುತ್ತುಕುಮಾರ್, ಲೇಖಕ ನಾರಾಯಣ ಅಮ್ಮಂಗೋಡು ಮುಖ್ಯ ಅತಿಥಿಗಳಾಗಿದ್ದರು. ಗೀತಾ ಚಂದ್ರಮೋಹನ್, ಗೀತಾ ಕುಮಾರನ್, ಪತ್ರಕರ್ತ ಪ್ರದೀಪ್ ಬೇಕಲ್, ಜಗನ್ನಾಥ ಶೆಟ್ಟಿ, ಜಯ ಮಣಿಯಂಪಾರೆ ಉಪಸ್ಥಿತರಿದ್ದರು.