ಹೈದರಾಬಾದ್: ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟನೆಯ ಪ್ಯಾನ್ ಇಂಡಿಯಾ ‘ಪುಪ್ಪ 2’ (Pushpa 2) ಚಿತ್ರ ಇದೀಗ ತೆರೆಗೆ ಬರಲು ಸಿದ್ಧಗೊಳ್ಳುತ್ತಿದೆ. ಬಹಳ ದಿನಗಳಿಂದ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲು ಮೀನ-ಮೇಷ ಎಣಿಸುತ್ತಿದ್ದ ಚಿತ್ರ ತಯಾರಕರು, ಸಾಕಷ್ಟು ಭಾರೀ ಚರ್ಚೆ ನಡೆಸಿ, ಇದೀಗ ಅಂತಿಮವಾಗಿ ಇದೇ ವರ್ಷದ ಡಿಸೆಂಬರ್ 05ರಂದು ತೆರೆಗೆ ತರಲು ನಿರ್ಧರಿಸಿದ್ದಾರೆ. ಈ ಮೊದಲು ಡಿ.06 ಎನ್ನಲಾಗಿತ್ತು. ಆದ್ರೆ, ಇದರಲ್ಲಿ ಕೊಂಚ ಬದಲಾವಣೆ ತಂದ ಚಿತ್ರತಂಡ ರಿಲೀಸ್ ಡೇಟ್ ಅನ್ನು ಒಂದು ದಿನ ಹಿಂದಕ್ಕೆ ಹಾಕಿದೆ. ಈ ಮಧ್ಯೆ ಪುಷ್ಪ 2 ಚಿತ್ರದ ವಿಶೇಷ ಸಾಂಗ್ ಚಿತ್ರೀಕರಣಕ್ಕೆ ಮತ್ತೊಮ್ಮೆ ತೊಡಕು ಉಂಟಾಗಿದೆ.
ಇದನ್ನೂ ಓದಿ: ಪೆಟ್ರೋಲ್ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ
ವಿದೇಶಿ ನೆಲದಲ್ಲಿ ಈಗಾಗಲೇ ಬುಕ್ಕಿಂಗ್ನಲ್ಲಿ ಸದ್ದು ಮಾಡುತ್ತಿರುವ ಅಲ್ಲು ಅರ್ಜುನ್ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದೇ ಆದರೂ ವಿಶೇಷ ಹಾಡಿನ ಶೂಟಿಂಗ್ ಮಾತ್ರ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಇದಕ್ಕೆ ಕಾರಣ ನಾಯಕಿಯರ ಸಮಸ್ಯೆ! ಹೌದು, ಚಿತ್ರದ ಭಾಗ 01ರಲ್ಲಿ ‘ಉ ಅಂಟಾವ ಮಾಮ, ಊಹು ಅಂಟಾವ’ ಹಾಡಿಗೆ ನಟಿ ಸಮಂತಾ ಭರ್ಜರಿ ಹೆಜ್ಜೆ ಹಾಕುವ ಮೂಲಕ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದರು. ಈ ಹಾಡು ಅಂದು ಭರ್ಜರಿ ಹಿಟ್ ಕೂಡ ಆಗಿತ್ತು. ಇದೀಗ ಇದೇ ರೀತಿಯ ಸಾಂಗ್ ಚಿತ್ರದ ಎರಡನೇ ಭಾಗದಲ್ಲಿಯೂ ಇದೆ. ಆದರೆ, ಇಲ್ಲಿ ನಾಯಕಿಯರ ಒಪ್ಪಿಗೆ ಕೊಂಚ ಸಮಸ್ಯೆಯಾಗಿ ಚಿತ್ರತಂಡಕ್ಕೆ ಕಾಡುತ್ತಿದೆ ಎಂಬುದು ಗಮನಾರ್ಹ.
ದುಬಾರಿ ಮೊತ್ತದ ಪೇಮೆಂಟ್
ಈ ಹಿಂದೆ ಜಾಹ್ನವಿ ಕಪೂರ್, ದಿಶಾ ಪಟಾನಿ ಸೇರಿದಂತೆ ಕೆಲವು ನಟಿಯರನ್ನು ಸಂಪರ್ಕಿಸಲಾಯಿತು. ಆದರೆ, ಇವರಾರು ವಿಶೇಷ ಹಾಡಿನಲ್ಲಿ ಹೆಜ್ಜೆ ಹಾಕಲು ಒಪ್ಪಲಿಲ್ಲ. ಇದರಿಂದ ಚಿತ್ರದ ರಿಲೀಸ್ ಡೇಟ್ ಕೂಡ ಮುಂದಕ್ಕೆ ಹೋಯಿತು. ಈ ಹಿನ್ನಲೆಯಲ್ಲಿ ಇತ್ತೀಚೆಗಷ್ಟೇ ಚಿತ್ರತಂಡ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್ರನ್ನು ಆಯ್ಕೆ ಮಾಡಿಕೊಂಡಿತ್ತು. ಇದಕ್ಕೆ ನಟಿಯೂ ಕೂಡ ಮೊದಲು ಒಪ್ಪಿಗೆ ಸೂಚಿಸಿದ್ದರು. ಆದರೆ, ಇದೀಗ ಬಿಜಿ ವೇಳಾಪಟ್ಟಿ ಹಾಗೂ ದುಬಾರಿ ಮೊತ್ತದ ಪೇಮೆಂಟ್ ಕೇಳಿದ ಹಿನ್ನಲೆ ಅವರನ್ನು ಈ ಪ್ರಾಜೆಕ್ಟ್ನಿಂದ ಕೈಬಿಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಯಾರು ಆ ಕನ್ನಡತಿ?
ಶ್ರದ್ಧಾ ಕಪೂರ್ ಹೆಸರು ಹೊರಗುಳಿದ ಕಾರಣ ಚಿತ್ರತಂಡ ಸೌತ್ ಸೆನ್ಸೇಷನ್ ಆಗಿರುವ ಕನ್ನಡತಿ, ನಟಿ ಶ್ರೀಲೀಲಾ ಮೊರೆ ಹೋಗಿದ್ದು, ವಿಶೇಷ ಹಾಡಿಗೆ ಹೆಜ್ಜೆ ಹಾಕುವಂತೆ ಕೇಳಿಕೊಂಡಿದೆ ಎನ್ನಲಾಗಿದೆ. ಇದಕ್ಕೆ ಶ್ರೀಲೀಲಾ ಒಪ್ಪಿಗೆ ನೀಡಿದ್ದಾರಾ? ಎಂಬುದನ್ನು ಸದ್ಯ ಕಾದು ತಿಳಿಯಬೇಕಿದೆ. ಅಕಸ್ಮಾತ್ ನಟಿ ಒಪ್ಪಿದ್ದೇ ಆದರೆ ಆ ಹಾಡಿಗೆ ನಟಿಯ ಭರ್ಜರಿ ಕುಣಿತ ಹೊಸ ಕಳೆ ತರುವುದರಲ್ಲಿ ಅನುಮಾನವೇ ಇಲ್ಲ ಎಂದೇ ಹೇಳಬಹುದು,(ಏಜೆನ್ಸೀಸ್).
ಪೆಟ್ರೋಲ್ ಹಾಕಿಸಿಕೊಳ್ಳುವವರು ಈ ಮಿಸ್ಟೇಕ್ಸ್ ಎಂದಿಗೂ ಮಾಡ್ಬೇಡಿ! ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ