'ನಟ, ರಾಜಕಾರಣಿ ಯಾರನ್ನು ಮದುವೆಯಾಗ್ತೀರಿ?': ಪ್ರೇಕ್ಷಕನ ಪ್ರಶ್ನೆಗೆ ಕಂಗನಾ ಹೇಳಿದ್ದೇನು?

kangana ranouth
Published on

ಮುಂಬೈ: ನಟಿ, ರಾಜಕಾರಣಿ ಕಂಗನಾ ರಣಾವತ್ ತನ್ನ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತನ್ನ ಸುತ್ತಲಿನ ವಿವಾದಗಳು ಮತ್ತು ನಕಾರಾತ್ಮಕ ಪ್ರಚಾರದಿಂದಾಗಿ ಯಾರನ್ನೂ ಹುಡುಕಲು ಸಾಧ್ಯವಾಗುತ್ತಿಲ್ಲ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.

ಖಾಸಗಿ ವಾಹಿನಿಯ ಸಂಭಾಷಣೆಯಲ್ಲಿ ಆಕೆಯನ್ನು ಒಬ್ಬ ನಟ ಅಥವಾ ರಾಜಕಾರಣಿ ಯಾರನ್ನು ಮದುವೆಯಾಗಲು ಬಯಸುತ್ತೀರಿ ಎಂದು ಪ್ರೇಕ್ಷಕರು ಪ್ರಶ್ನಿಸಿದರು.

ಅದಕ್ಕೆ ಉತ್ತರಿಸಿದ ಕಂಗನಾ, ಈಗ, ಇದರ ಬಗ್ಗೆ ನಾನು ಏನು ಹೇಳಲಿ? ಮದುವೆಯಾಗಬೇಕು, ಮಕ್ಕಳಿರಬೇಕು ಎಂಬ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯವಿದೆ. ಪ್ರತಿಯೊಬ್ಬರಿಗೂ ಸಹವರ್ತಿ ಇರಬೇಕು ಎಂದು ನಾನು ಭಾವಿಸುತ್ತೇನೆ. ಆದರೆ, ನನ್ನ ಇಮೇಜ್ ತುಂಬಾ ಹಾನಿಗೊಳಗಾಗಿದೆ. ಜನರು ನನ್ನ ಸುತ್ತ ಇರಲೂ ಭಯಪಡುತ್ತಾರೆ. ನನ್ನ ಮನೆಯಲ್ಲಿ ನನ್ನ ಅಳಿಯಂದಿರಿಗೆ ಸಮನ್ಸ್ ಬಂದಿದ್ದರಿಂದ ತಪ್ಪಿಸಿಕೊಂಡು ಓಡಿಹೋದರು. ಇಂಥ ಪರಿಸ್ಥಿತಿಯಲ್ಲಿ ಹೇಗೆ ಮದುವೆಯಾಗುವುದು ಎಂದರು.

ಮೀಟೂ ಚಳುವಳಿಯ ಬಗ್ಗೆ ಕೇಳಿದಅಗ 'ನಾನು ಸದ್ಯಕ್ಕೆ ಒಬ್ಬಂಟಿಯಾಗಿದ್ದೇನೆ, ಅದೇ ಸಮಸ್ಯೆ ಎಂದು ಹೇಳಿದರು.

ಇನ್ನು ಕಂಗನಾ ಅಭಿನಯದ ದಿ.ಇಂದಿರಾ ಗಾಂಧಿಯವರ ಬದುಕಿಗೆ ಸಂಬಂಧಿಸಿದ ಎಮರ್ಜೆನ್ಸಿ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಅವಧಿಯನ್ನು ಆಧರಿಸಿದ ಚಿತ್ರ ಇದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net