More

    ಶ್ರೀಕೃಷ್ಣನ ಆಶೀರ್ವಾದವಿದ್ದರೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ: ರಾಜಕೀಯ ಪ್ರವೇಶದ ಸುಳಿವು ನೀಡಿದ ಕಂಗನಾ

    ಬೆಂಗಳೂರು: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ತೀಕ್ಷ್ಣ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಅದು ರಾಜಕೀಯ ಅಥವಾ ಸಾಮಾಜಿಕವಾಗಿರಲಿ ಪ್ರತಿ ವಿಷಯದಲ್ಲೂ ತಮ್ಮ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಾರೆ. ಕಂಗನಾಗೆ ರಾಜಕೀಯ ಪ್ರವೇಶದ ಬಗ್ಗೆ ಪದೇ ಪದೇ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಇಲ್ಲಿಯವರೆಗೂ ಆಕೆ ಅದನ್ನು ನಿರಾಕರಿಸುತ್ತಲೇ ಬಂದಿದ್ದಾರೆ. ಆದರೆ ಈ ಬಾರಿ ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

    ಕಂಗನಾ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ?  
    ತೇಜಸ್ ಚಿತ್ರದ ಬಿಡುಗಡೆಯ ನಂತರ ಕಂಗನಾ ಗುಜರಾತ್‌ನ ಪ್ರಸಿದ್ಧ ಪ್ರವಾಸಿ ತಾಣವಾದ ದ್ವಾರಕಾದ ಜಗತ್ ಮಂದಿರಕ್ಕೆ ತೆರಳಿದರು. ಇತ್ತೀಚಿನ ದಿನಗಳಲ್ಲಿ ‘ತೇಜಸ್’ ಚಿತ್ರಕ್ಕಾಗಿ ಸುದ್ದಿಯಲ್ಲಿದ್ದರು ಕಂಗನಾ. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸೋತಿತು. ಇದೇ ವೇಳೆ ನಟಿ ಮಾನಸಿಕ ನೆಮ್ಮದಿಗಾಗಿ ದೇವರ ಮೊರೆ ಹೋಗಿದ್ದಾರೆ. ಸದ್ಯ ಸೋಶಿಯಲ್​​​ ಮೀಡಿಯಾದಲ್ಲಿ ದ್ವಾರಕಾಧೀಶ ದೇವಸ್ಥಾನದ ದರ್ಶನದ ಕೆಲವು ಫೋಟೋಗಳು ಮತ್ತು ರೀಲ್ಸ್​​​​ ಹಂಚಿಕೊಂಡಿದ್ದಾರೆ.

    ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಕಂಗನಾ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ್ದಾರೆ. ತಮ್ಮ ಮುಂದಿನ ಚಿತ್ರ ‘ತನು ವೆಡ್ಸ್ ಮನು ಭಾಗ 3’ ಅನ್ನು ಕಂಗನಾ ಅವರೇ ನಿರ್ದೇಶಿಸಲಿದ್ದು, ಅದರಲ್ಲಿ ಪ್ರಮುಖ ಪಾತ್ರವನ್ನು ಸಹ ನಿರ್ವಹಿಸಲಿದ್ದಾರೆ ಎಂದು ಸಹ ಹೇಳಿದರು. ಇದಲ್ಲದೇ ಚುನಾವಣೆಗೆ ಸ್ಪರ್ಧಿಸುವ ಬಗ್ಗೆಯೂ ಕಂಗನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಕೃಷ್ಣನ ಆಶೀರ್ವಾದವಿದ್ದರೆ ನಾನೂ ಕೂಡ ಚುನಾವಣೆಗೆ ಸ್ಪರ್ಧಿಸಬಹುದು ಎಂದು ಕಂಗನಾ ಹೇಳಿದ್ದಾರೆ.

    ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡಿದ ಕಂಗನಾ
    ಕಂಗನಾ ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಸೀರೆಯಲ್ಲಿ ಕಂಗನಾ ಸೊಗಸಾಗಿ ಕಾಣುತ್ತಿದ್ದಾರೆ. ಎಷ್ಟೋ ದಿನಗಳ ಕಾಲ ಅಶಾಂತಳಾಗಿದ್ದನ್ನು ಹೇಳಿದ್ದು, ಈಗ ದೇವರ ದರ್ಶನ ಪಡೆದು ಮನಸ್ಸಿಗೆ ನೆಮ್ಮದಿ ಸಿಕ್ಕಿತು ಎಂದು ಸಹ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

    “ಕೆಲವು ದಿನಗಳಿಂದ ನನ್ನ ಹೃದಯ ತುಂಬಾ ಕಲಕಿತ್ತು, ದ್ವಾರಕಾಧೀಶನನ್ನು ಭೇಟಿ ಮಾಡಕೇಂದು ನನಗೆ ಅನಿಸಿತು. ಶ್ರೀಕೃಷ್ಣನ ಈ ದಿವ್ಯ ನಗರಿಯಾದ ದ್ವಾರಕೆಗೆ ಬಂದ ಕೂಡಲೇ ಇಲ್ಲಿನ ಮಣ್ಣು ನೋಡಿದೊಡನೆಯೇ ನನ್ನ ಚಿಂತೆಗಳೆಲ್ಲ ಕಳಚಿ ಬಿದ್ದಂತೆ ಭಾಸವಾಯಿತು. ನನ್ನ ಮನಸ್ಸು ಸ್ಥಿರವಾಯಿತು ಮತ್ತು ನಾನು ಅನಂತ ಆನಂದವನ್ನು ಅನುಭವಿಸಿದೆ. ಓ ದ್ವಾರಕಾ ಸ್ವಾಮಿಯೇ, ನಿನ್ನ ಆಶೀರ್ವಾದ ಹೀಗೆ ಇರಲಿ, ಹರೇ ಕೃಷ್ಣ ” ಎಂದು ಬರೆದು ಕಂಗನಾ ಪೋಸ್ಟ್ ಮಾಡಿದ್ದಾರೆ.

    ಇಂದು ಕೂಡ ಚಾಲಕರಿಗೆ ಸಮಾಧಾನದ ಸುದ್ದಿ…ನಿಮ್ಮ ನಗರದಲ್ಲಿ ಪೆಟ್ರೋಲ್-ಡೀಸೆಲ್ ಇತ್ತೀಚಿನ ದರ ಎಷ್ಟಿದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts