ಕರೊನಾ ಗೆದ್ದ ಬೆನ್ನಲ್ಲೇ ಕುಟುಂಬದವರೊಂದಿಗೆ ಗೋಲ್ಡನ್​ ಟೆಂಪಲ್​ಗೆ ತೆರಳಿ ಆಶೀರ್ವಾದ ಪಡೆದ ಕಂಗನಾ

kangana
Published on

ಚಂಡೀಗಢ: ಬಾಲಿವುಡ್​ ನಟಿ ಕಂಗನಾ ರಣಾವತ್​ಗೆ ಕೆಲ ದಿನಗಳ ಹಿಂದೆ ಕರೊನಾ ಸೋಂಕು ತಗುಲಿದ್ದು ನಟಿ ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಸೋಂಕನ್ನು ಗೆದ್ದ ಬೆನ್ನಲ್ಲೇ ನಟಿ ಕುಟುಂಬದ ಸದಸ್ಯರೊಂದಿಗೆ ಗೋಲ್ಡನ್​ ಟೆಂಪಲ್​ಗೆ ತೆರಳಿ ಆಶೀರ್ವಾದ ಪಡೆದು ಬಂದಿದ್ದಾರೆ.

ಗೋಲ್ಡನ್​ ಟೆಂಪಲ್​ನಲ್ಲಿರುವ ಫೋಟೋಗಳನ್ನು ಕಂಗನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಾನು ಉತ್ತರದವಳೇ ಆಗಿದ್ದರು ಇದುವರೆಗೆ ಗೋಲ್ಡನ್​ ಟೆಂಪಲ್​ಗೆ ಭೇಟಿ ನೀಡಲು ಆಗಿರಲಿಲ್ಲ. ನನ್ನ ಕುಟುಂಬದವರೆಲ್ಲ ಸಾಕಷ್ಟು ಬಾರಿ ಇಲ್ಲಿಗೆ ಬಂದು ಹೋಗಿದ್ದಾರೆ. ನಾನು ಮೊದಲನೇ ಬಾರಿಗೆ ಭೇಟಿ ನೀಡಿದೆ. ದೇವಸ್ಥಾನದ ಸೌಂದರ್ಯ ನನಗೆ ದಿಗಿಲಾಗುವಂತೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ನೀಲಿ ಬಣ್ಣದ ಸಲ್ವಾರ್ ಧರಿಸಿ ದೇವಸ್ಥಾನದಲ್ಲಿ ಕಾಣಿಸಿಕೊಂಡ ನಟಿಯ ಬಗ್ಗೆ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿಮಗೆ ಸಲ್ವಾರ್​ ತುಂಬಾ ಚೆನ್ನಾಗಿ ಕಾಣಿಸುತ್ತದೆ ಎಂದು ಕಾಮೆಂಟ್​ ಮಾಡಲಾರಂಭಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net