More

    ಮಣಿಕರ್ಣಿಕಾ ನಿರ್ದೇಶಿಸಲು ಕಂಗನಾ ತೀರ್ಮಾನ

    ‘ಮಣಿಕರ್ಣಿಕಾ – ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರವು ಬಿಡುಗಡೆಯಾಗಿ ಜನವರಿ 25ಕ್ಕೆ ಎರಡು ವರ್ಷಗಳಾಗಿವೆ. ಎರಡನೇ ವರ್ಷದ ವಾರ್ಷಿಕೋತ್ಸವ ಸಂದರ್ಭದಲ್ಲಿ ಮಣಿಕರ್ಣಿಕಾ – ದಿ ಲೆಜೆಂಡ್ ಆಫ್ ದಿಡ್ಢಾ’ ಎಂಬ ಚಿತ್ರ ಘೋಷಿಸಿರುವ ಕಂಗನಾ, ಆ ಚಿತ್ರವನ್ನು ತಾವೇ ನಿರ್ದೇಶಿಸುವ ಬಗ್ಗೆ ತೀರ್ಮಾನಿಸಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ನಾನು ನಿರ್ದೇಶಿಸಿದ ಮೊದಲ ಚಿತ್ರವೇ (ಮಣಿಕರ್ಣಿಕಾ) ನೂರು ಕೋಟಿ ಕ್ಲಬ್ ಸೇರಿತ್ತು. ಹಾಗಾಗಿ, ಈ ಚಿತ್ರವನ್ನು ನಾನೇ ನಿರ್ದೇಶಿಸಬೇಕು ಎಂಬುದು ಎಲ್ಲರ ಆಸೆ. ಸದ್ಯಕ್ಕೆ ಕೈ ತುಂಬಾ ಕೆಲಸಗಳಿವೆ. ಒಂದಿಷ್ಟು ಚಿತ್ರಗಳನ್ನು ಒಪ್ಪಿದ್ದೇನೆ. ಆದರೆ, ನನಗಿಂಥ ಸಮರ್ಥರು ಸಿಗುವವರೆಗೂ ಆ ಚಿತ್ರವನ್ನು ನಾನೇ ನಿರ್ದೇಶಿಸುವ ಯೋಚನೆ ಇದೆ’ ಎಂದು ಹೇಳಿಕೊಂಡಿದ್ದಾರೆ ಕಂಗನಾ.

    ಇನ್ನು, ‘ಮಣಿಕರ್ಣಿಕಾ’ ನಿರ್ದೇಶಕರಾಗಿದ್ದ ಕ್ರಿಶ್ ಬದಲು ಚಿತ್ರವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದರ ಕುರಿತು ಮಾತನಾಡಿರುವ ಅವರು, ‘ನಾನು ಆ ಚಿತ್ರದ ನಿರ್ದೇಶಕಿಯಾದಾಗ ಯಾವುದೇ ವಿವಾದವಿರಲಿಲ್ಲ. ಕ್ರಿಶ್ ಬೇರೆ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ನಾನು ಅನಿವಾರ್ಯವಾಗಿ ನಿರ್ದೇಶಕಿಯಾಗಬೇಕಾಯಿತು. ಯಾವಾಗ ಚಿತ್ರ ಸೂಪರ್ ಹಿಟ್ ಆಯಿತೋ ಮತ್ತು ಮೂರೇ ದಿನಗಳಲ್ಲಿ 35 ಕೋಟಿ ಕಲೆಕ್ಷನ್ ಆಯಿತೋ, ಆಗ ಒಂದೊಂದೇ ವಿವಾದ ಶುರುವಾಯಿತು. ಈ ವಿವಾದಕ್ಕೆ ‘ಮಾಫಿಯಾ’ದವರ ಎಂಟ್ರಿಯಾಗಿ ಇನ್ನಷ್ಟು ದೊಡ್ಡದಾಯಿತು.

    ಚಿತ್ರದಲ್ಲಿನ ಯುದ್ಧದ ಸನ್ನಿವೇಶಕ್ಕಾಗಿ ಯಾಂತ್ರಿಕ ಕುದುರೆ ಮೇಲೆ ನಾನು ಕೂತು ಸವಾರಿ ಮಾಡುವ ದೃಶ್ಯವನ್ನು ಮುಂದಿಟ್ಟು ಕೊಂಡು ತಮಾಷೆ ಮಾಡಲಾಯಿತು. ಇದೆಲ್ಲದರ ಹಿಂದೆ ನನ್ನನ್ನು ತುಳಿಯುವ ದೊಡ್ಡ ಹುನ್ನಾರವೇ ಇದೆ’ ಎನ್ನುತ್ತಾರೆ ಕಂಗನಾ. -ಏಜನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts