ಇದೇನು ಗೂಂಡಾ ರಾಜ್ಯನಾ? ಟೀಮ್​ ಕಂಗನಾ ಪ್ರಶ್ನೆ

Sushant Singh and Kangana Final
Published on

ಸುಶಾಂತ್​ ಸಿಂಗ್​ ಸಾವಿನ ನಂತರ ಬಾಲಿವುಡ್​ನಲ್ಲಿ ಅತ್ತಂತ ವ್ಯಘ್ರವಾಗಿರುವವರು ಕಂಗನಾ ರಣಾವತ್​ ಮಾತ್ರ. ಮೊದಲ ದಿನದಿಂದ ಅವರು ಸುಶಾಂತ್​ ಸಿಂಗ್​ ಪ್ರಕರಣದ ಬಗ್ಗೆ ಸರಿಯಾದ ತನಿಖೆ ಆಗಬೇಕು ಎಂದು ಹೇಳುತ್ತಲೇ ಬಂದಿದ್ದಾರೆ ಮತ್ತು ಸಿಬಿಐಗೆ ಈ ಪ್ರಕರಣವನ್ನು ವರ್ಗಾಯಿಸುವುದಕ್ಕೂ ಅವರು ಹೇಳಿದ್ದಾರೆ.

ಈಗ ಕಂಗನಾ ಮತ್ತೊಮ್ಮೆ ಸಿಟ್ಟಾಗಿದ್ದಾರೆ. ಅದಕ್ಕೆ ಕಾರಣ ಬಿಹಾರದಿಂದ ತನಿಖೆಗೆಂದು ಬಂದಿರುವ ಐಪಿಎಸ್​ ಅಧಿಕಾರಿ ವಿನಯ್​ ತಿವಾರಿ ಅವರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿರುವುದು. ಸುಶಾಂತ್​ ಸಾವಿನ ಕುರಿತು ದೂರು ಸ್ವೀಕರಿಸಿದ್ದ ಬಿಹಾರದ ಪೊಲೀಸರು, ತನಿಖೆಗೆಂದು ಕಳೆದ ವಾರ ಮುಂಬೈಗೆ ಬಂದಿದ್ದರು. ಮುಂಬೈಗೆ ಬಂದರೂ ಅವರಿಗೆ ಸರಿಯಾದ ರೀತಿ ತನಿಖೆ ಮಾಡುವುದಕ್ಕೆ ಸಾಧ್ಯವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ತಂಡವನ್ನು ಮುನ್ನಡೆಸುವುದಕ್ಕೆ ವಿನಯ್​ ತಿವಾರಿ ಅವರು ಮುಂಬೈಗೆ ಬಂದರು. ಆದರೆ, ಮುಂಬೈ ಕಾರ್ಪೋರೇಶನ್​ನವರು ವಿನಯ್​ ತಿವಾರಿ ಅವರನ್ನು ಕ್ವಾರಂಟೈನ್​ಗೆ ಒಳಪಡಿಸಿದ್ದಾರೆ. ಅವರನ್ನು ಗೋರೆಗಾಂವ್​ನ ಗೆಸ್ಟ್​ ಹೌಸ್​ವೊಂದರಲ್ಲಿ ಇರಿಸಿದ್ದಾರೆ.

ಈ ವಿಷಯವಾಗಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ತನಿಖೆಗೆಂದು ಬಂದು ಪೊಲೀಸ್​ ಅಧಿಕಾರಿಯನ್ನು ಹಾಗೆ ಅನುಮಾನಾಸ್ಪದವಾಗಿ ಕೂರಿಸಿರುವುದೇಕೆ ಎಂದು ಹಲವರು ಪ್ರಶ್ನಿಸಿದ್ದಾರೆ. ಈ ವಿಷಯವಾಗಿ ಟೀಂ ಕಂಗನಾ ಸಹ ಟ್ವೀಟ್​ ಮಾಡಿದೆ.

'ಏನಾಗುತ್ತಿದೆ ಇಲ್ಲಿ? ಇದೇನು ಗೂಂಡಾ ರಾಜ್ಯನಾ? ಸುಶಾಂತ್ ಸಿಂಗ್​ ಅವರಿಗೆ ಕಾರಣರಾದವರಿಗೆ ಶಿಕ್ಷೆಯಾಗದಿದ್ದರೆ, ಮುಂದೆ ಹೊರಗಿನಿಂದ ಬಂದ ಯಾರೊಬ್ಬರೂ ಸುರಾಕ್ಷಿತವಾಗಿ ಇರುವುದಕ್ಕೆ ಸಾಧ್ಯವಾಗುವುದಿಲ್ಲ. ಕ್ರಿಮಿನಲ್​ಗಳ ಶಕ್ತಿ ಹೆಚ್ಚಾಗುತ್ತಿದೆ. ಈ ವಿಷಯದಲ್ಲಿ ಪ್ರಧಾನ ಮಂತ್ರಿಯವರು ಮಧ್ಯಸ್ತಿಕೆ ವಹಿಸಿ, ಈ ಪ್ರಕರಣವನ್ನು ಟೇಕ್​ಓವರ್​ ಮಾಡಬೇಕು' ಎಂದು ಹೇಳಿದೆ.

ಅಷ್ಟೇ ಅಲ್ಲ, ಈ ವಿಷಯವಾಗಿ ಮಹಾರಾಷ್ಟ್ರದ ಉದ್ಧವ್​ ಠಾಕ್ರೆ ಸರ್ಕಾರವನ್ನು ಟೀಕಿಸಿರುವ ಅವರು, 'ಐಪಿಎಸ್ ಅಧಿಕಾರಿ ವಿನಯ್​ ತಿವಾರಿಯವರನ್ನು ಬಲವಂತವಾಗಿ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಏಕೆಂದರೆ, ಮುಂಬೈನಲ್ಲೀಗ ಪಪ್ಪು ರಾಜ್ಯ ನಡೆಯುತ್ತಿದೆ. ಸ್ವಜನಪಕ್ಷಪಾತಿ ಮಾಫಿಯಾದವರು ಮಾತ್ರ ಹೀಗೆ ಮಾಡುವುದಕ್ಕೆ ಸಾಧ್ಯ. ಮುಖ್ಯಂತ್ರಿಗಳಿಗೆ ನಾಚಿಕೆ ಆಗಬೇಕು' ಎಂದು ಟೀಂ ಕಂಗನಾ ಟ್ವೀಟ್​ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net