ಸಾರ್ವಜನಿಕ ಗ್ರಂಥಾಲಯದಲ್ಲಿ ಕನಕದಾಸರ ಜಯಂತ್ಯುತ್ಸವ

ಸರಗೂರು ಪಟ್ಟಣದ ಗ್ರಂಥಾಲಯದಲ್ಲಿ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಸರಗೂರು ಪಟ್ಟಣದ ಗ್ರಂಥಾಲಯದಲ್ಲಿ ಕನಕದಾಸರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
Published on

 ಸರಗೂರು: ಪಟ್ಟಣದ ಸರ್ಕಾರಿ ಸಾರ್ವಜನಿಕ ಗ್ರಂಥಾಲಯದಲ್ಲಿ ಸೋಮವಾರ ಕನಕದಾಸರ ಜಯಂತ್ಯುತ್ಸವನ್ನು ಸರಳವಾಗಿ ಆಚರಿಸಲಾಯಿತು.

ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಗ್ರಂಥಾಲಯ ಮೇಲ್ವಿಚಾರಕ ಬಿಡಗಲು ಶಿವಣ್ಣ, ದಾಸ ಸಾಹಿತ್ಯದ ಸಂತ ಕವಿಗಳಲ್ಲಿ ಕನಕದಾಸರು ಒಬ್ಬರು ಎಂದರು.

ಎಲ್ಲರೂ ಮಾಡುವುದು ಹೊಟ್ಟೆಗಾಗಿ.. ಗೇಣು ಬಟ್ಟೆಗಾಗಿ ಎಂದು ಜೀವನದ ಅವಶ್ಯಕತೆ ಕುರಿತು ಕನಕದಾಸರು ಹೇಳಿದ್ದನ್ನು ಎಲ್ಲರೂ ಸ್ಮರಿಸಬೇಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ. ಗ್ರಂಥಾಲಯ ಸಹಾಯಕಿ ವರ್ಷಾ, ಸಿಬ್ಬಂದಿ ಸೋಮು, ಶಿಕ್ಷಕ ನಾಗರಾಜು, ಆರೋಗ್ಯ ಇಲಾಖೆಯ ಹರೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net