371(ಜೆ) ಪ್ರಮಾಣ ಪತ್ರಕ್ಕಾಗಿ ಮಧ್ಯವರ್ತಿಗಳ ಅವಲಂಬನೆ ಸಲ್ಲ

020922 Kampli CDPO Meeting
ಕಂಪ್ಲಿಯ ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪಿಯೂ ಕಾಲೇಜಿನಲ್ಲಿ ಜರುಗಿದ ಸಿಡಿಸಿ ಸಭೆಯಲ್ಲಿ ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿದರು.
Published on

ಕಂಪ್ಲಿ: 371(ಜೆ) ಪ್ರಮಾಣ ಪತ್ರಕ್ಕಾಗಿ ಮದ್ಯವರ್ತಿಗಳ ಅವಲಂಬನೆ ಬೇಡ. ಕಾಲೇಜಿನ ಮುಖ್ಯಸ್ಥರು ದಾಖಲೆಗಳನ್ನು ಸಂಗ್ರಹಿಸಿ ನಾಡಕಚೇರಿಗೆ ನೀಡಿದಲ್ಲಿ ಪ್ರಮಾಣ ಪತ್ರ ಒದಗಿಸಲಾಗುವುದು ಎಂದು ತಹಸೀಲ್ದಾರ್ ಗೌಸಿಯಾಬೇಗಂ ಹೇಳಿದರು.

ಎಸ್‌ಜಿವಿಎಸ್‌ಎಸ್ ಬಾಲಕಿಯರ ಸರ್ಕಾರಿ ಪಿಯೂ ಕಾಲೇಜಿನಲ್ಲಿ ಶುಕ್ರವಾರ ಕಾಲೇಜು ಆಡಳಿತ ಮಂಡಳಿ ಸದಸ್ಯರು ಮತ್ತು ಪಾಲಕರ ಸಭೆಯಲ್ಲಿ ಮಾತನಾಡಿದರು. ಈಗಾಗಲೇ 545 ಅರ್ಜಿ ಸ್ವೀಕರಿಸಿದ್ದು, ಅರ್ಹರು ದಾಖಲೆಗಳನ್ನು ಒದಗಿಸಿದಲ್ಲಿ ಹೈಕ ವಿಮೋಚನಾ ದಿನದಂದು 371(ಜೆ)ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು. ಪ್ರಭಾರ ಪ್ರಾಚಾರ್ಯ ಡಾ.ಎಂ.ಆರ್.ವಾಗೀಶ್ ಮಾತನಾಡಿ, ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಸಕಾಲದಲ್ಲಿ ಒದಗಿಸಿದಲ್ಲಿ ಸರಳವಾಗಿ ಪ್ರಮಾಣ ಪತ್ರ ದೊರಕಲಿದೆ ಎಂದರು. ಸಿಡಿಸಿ ಅಧ್ಯಕ್ಷೆ ಹೇಮಾವತಿ ಪೂರ್ಣಚಂದ್ರ, ಉಪತಹಸೀಲ್ದಾರ್ ಬಿ.ರವೀಂದ್ರ, ಪಾಲಕರಾದ ಮಮತಾ, ತಿಪ್ಪಣ್ಣ, ನಂದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net