ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಮಕ್ಕಳಿಗೆ ತಿಳಿಸಿ

17 HBD 1
ಹುಮನಾಬಾದ್‌ನಲ್ಲಿ ಮಂಗಳವಾರ ತಾಲೂಕು ಆಡಳಿತ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಮಾತನಾಡಿದರು. ಶ್ರೀ ಶ್ರೀನಿವಾಸ ಸ್ವಾಮೀಜಿ, ಅಂಜುಂ ತಬಸ್ಸುಮ್, ದೀಪಿಕಾ ನಾಯ್ಕರ್, ನಾಗಶೆಟ್ಟಿ ಡುಮಣೆ ಇತರರಿದ್ದರು.
Published on

ಹುಮನಾಬಾದ್: ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಹಿರಿಯರು ಹಾಗೂ ಸೇನಾನಿಗಳ ಬಗ್ಗೆ ಮಕ್ಕಳಿಗೆ ತಿಳಿಹೇಳುವ ಅಗತ್ಯವಿದೆ ಎಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಹೇಳಿದರು.

ತಹಸಿಲ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ಹಾಗೂ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅವರು, ಸ್ವತಂತ್ರ ಸೇನಾನಿಗಳಿಗೆ ಗೌರವಿಸುವ ಕಾರ್ಯ ತಾಲೂಕು ಆಡಳಿತದಿಂದ ನಿರಂತರ ನಡೆಯಬೇಕೆಂದು ಸೂಚಿಸಿದರು.

ಕಕಕ್ಕೆ ಸ್ವಾತಂತ್ರ್ಯದೊರಕಿಸಿಕೊಡುವುದರಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪಾತ್ರ ಮಹತ್ವದ್ದಾಗಿದೆ ಎಂದ ಅವರು, ಭಗವಾನ್ ವಿಶ್ವಕರ್ಮರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಯಾದಗಿರಿ ವಿಶ್ವಕರ್ಮ ಏಕದಂಡಿಗಿ ಮಠ ಹಾಗೂ ಹುಮನಾಬಾದ್‌ನ ಶ್ರೀ ಶ್ರೀನಿವಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಹಿತಿ ವೀರಂತರೆಡ್ಡಿ ಜಂಪಾ ಉಪನ್ಯಾಸ ನೀಡಿದರು.

ತಹಸೀಲ್ದಾರ್ ಅಂಜುಂ ತಬಸ್ಸುಮ್, ತಾಪಂ ಇಒ ದೀಪಿಕಾ ನಾಯ್ಕರ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ನಾಗಶೆಟ್ಟಿ ಡುಮಣಿ, ಪುರಸಭೆ ಮುಖ್ಯಾಧಿಕಾರಿ ಅನೀಲಕುಮಾರ ಕುಲಕರ್ಣಿ, ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗ ನಿರ್ಣಾ ಇತರರಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ವಿಶ್ವಕರ್ಮ ಸಮಾಜಕ್ಕೆ ಧುಮ್ಮನಸೂರ ಹತ್ತಿರ ಸಿಎ ಸೈಟï ಮಂಜೂರಾಗಿದ್ದು, ತಮ್ಮ ೨೫ ಲಕ್ಷ ರೂ. ಅನುದಾನದಲ್ಲಿ ವಿಶ್ವಕರ್ಮ ಭವನ ನಿರ್ಮಾಣ ಮಾಡಲಾಗುವುದು.
| ಡಾ.ಸಿದ್ದಲಿಂಗಪ್ಪ ಪಾಟೀಲ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net