

ಉಡುಪಿ: ಕಲ್ಸಂಕ ಜಂಕ್ಷನ್ನಲ್ಲಿ ಟ್ರಾಫಿಕ್ ನಿಯಂತ್ರಣ ಮಾಡಲು ಪೊಲೀಸ್ ಇಲಾಖೆ ವಿಲವಾಗಿದ್ದು, ಸಮಸ್ಯೆಯನ್ನು ಸಿಟಿ ಬಸ್ ನಿಲ್ದಾಣ ಮತ್ತು ಕಡಿಯಾಳಿಯಾಗಿ ವರ್ಗಾಯಿಸಿದ್ದಾರೆ. ಜಂಕ್ಷನ್ನಲ್ಲಿ ಅರ್ನಿದಿಷ್ಟಾವಧಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿದೆ.
ಮಕರ ಸಂಕ್ರಾಂತಿ ರಜೆ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರವಾಸಿಗರು ಉಡುಪಿಗೆ ಆಗಮಿಸಲಿದ್ದಾರೆ ಎಂಬುದಾಗಿ ಭಾವಿಸಿದ್ದ ಪೊಲೀಸರು 1 ವಾರ ಜಂಕ್ಷನ್ನಲ್ಲಿ ಬ್ಯಾರಿಕೇಡ್ ಅಳವಡಿಸಿ ಗುಂಡಿಬೈಲಿನವರು ಕಡಿಯಾಳಿಯಲ್ಲಿ ಹಾಗೂ ಕೃಷ್ಣ ಮಠದಿಂದ ಬರುವವರು ಸಿಟಿ ಬಸ್ ನಿಲ್ದಾಣದಲ್ಲಿ ಟೂರ್ಟನ್ ತೆಗೆದುಕೊಂಡು ಬರುವಂತೆ ಸೂಚಿಸಿದ್ದರು. ಆದರೆ 1 ವಾರದ ಬಳಿಕವೂ ಬ್ಯಾರಿಕೇಡ್ ತೆರವುಗೊಳಿಸಿಲ್ಲ. ಮಕ್ಕಳಿಗೆ ಪರೀೆಗಳು ಪ್ರಾರಂಭವಾಗಿರುವುದರಿಂದ ನಗರಕ್ಕೆ ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಇನ್ನು ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಸಂಚಾರ ದಟ್ಟಣೆ ಎದುರಾಗಲಿದೆ. 2 ತಿಂಗಳ ಮುನ್ನವೇ ಬ್ಯಾರಿಕೇಡ್ ಅಳವಡಿಸಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟ್ರಾಫಿಕ್ ಕಂಬವಿದೆ ಲೈಟಿಲ್ಲ
ಕಲ್ಸಂಕದಲ್ಲಿ 2 ವರ್ಷದ ಹಿಂದೆ ನಗರಸಭೆಯಲ್ಲಿ ರ್ನಿಣಯಕೈಗೊಂಡು ಟ್ರಾಫಿಕ್ ಸಿಗ್ನಲ್ಗಾಗಿ ಬೃಹತ್ ಕಂಬಗಳನ್ನು ನಿರ್ಮಿಸಲಾಗಿದೆ. ಕಾರಣಾಂತರಗಳಿಂದ ಇನ್ನೂ ಲೈಟ್ ಅಳವಡಿಕೆ ಮಾಡಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಉದಾಸೀನ ಧೋರಣೆ ಅನುಸರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಗ್ನಲ್ ಅಳವಡಿಕೆ ಸಮಂಜಸವಲ್ಲ ಎಂಬುದು ಅಧಿಕಾರಿಗಳ ವಾದ. ವಾಸ್ತವದಲ್ಲಿ ನಗರದೊಳಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಲೈಟ್ ಅಳವಡಿಸಲು ಕಾನೂನಿನಲ್ಲಿ ಅವಕಾಶವಿದೆ. ಅದಕ್ಕಿಂತಲೂ ಹೆಚ್ಚಾಗಿ ಕಡಿಯಾಳಿಯಿಂದ ಕರಾವಳಿ ಜಂಕ್ಷನ್ವರೆಗಿನ ರಸ್ತೆ ರಾಷ್ಟ್ರೀಯ ಹೆದ್ದಾರಿ ಮಾನದಂಡದ ಪ್ರಕಾರ ನಿರ್ಮಾಣವಾಗಿಲ್ಲ.
ಆ್ಯಂಬುಲೆನ್ಸ್ ಚಾಲಕರ ಪರದಾಟ ಅಂಬಲಪಾಡಿ ್ಲೆ$ ಓವರ್ ಕಾಮಗಾರಿ ನಡೆಯುತ್ತಿರುವುದರಿಂದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯಲ್ಲಿ ವಾಹನ ದಟ್ಟಣೆ ಇದೆ. ಹೀಗಾಗಿ ಕುಂದಾಪುರ, ಕೋಟ, ಬ್ರಹ್ಮಾವರ ಮುಂತಾದ ಕಡೆಗಳಿಂದ ನಗರದ ಆಸ್ಪತ್ರೆಗಳಿಗೆ ರೋಗಿಗಳನ್ನು ಕರೆತರುವ ಆ್ಯಂಬುಲೆನ್ಸ್ಗಳು ಅಂಬಾಗಿಲಿನಲ್ಲಿ ತಿರುವು ಪಡೆದು ಕಲ್ಸಂಕ ಮೂಲಕ ಸಿಟಿ ಬಸ್ ನಿಲ್ದಾಣಕ್ಕೆ ತೆರಳವುತ್ತಿದ್ದವು. ಇದೀಗ ಬ್ಯಾರಿಕೇಡ್ ಅಳವಡಿಸಿರುವುದರಿಂದ ಬೇರೆ ದಾರಿಯಿಲ್ಲದೆ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ.
ನನ್ನ ಅವಧಿಯಲ್ಲಿ ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್ ಜಂಕ್ಷನ್ ಯೋಜನೆ ರೂಪಿಸಲಾಗಿತ್ತು. ಇದರಿಂದ ನಗರಸಭೆಗೆ ಯಾವುದೇ ಖರ್ಚಿಲ್ಲದೆ ಪ್ರತಿ ತಿಂಗಳು 20 ಸಾವಿರ ಜಾಹೀರಾತು ತೆರಿಗೆ ಬರುವಂತೆ ಕ್ರಮ ವಹಿಸಲಾಗಿತ್ತು. ಕಾನೂನುಬದ್ಧವಾಗಿ ಟೆಂಡರ್ ಮಾಡಿ ಕಾರ್ಯಾದೇಶವನ್ನು ನೀಡಲಾಗಿದೆ. ಆದರೆ ಕೆಲವು ಜನಪ್ರತಿನಿಧಿಗಳ ಆಕ್ಷೇಪಣೆಗಳಿಂದಾಗಿ ಲೈಟ್ ಅಳವಡಿಕೆ ಬಾಕಿಯಾಗಿದೆ. ಕಲ್ಸಂಕ ಜಂಕ್ಷನ್ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಸರಿಯಲ್ಲ. ಸಿಗ್ನಲ್ ಹಾಕುವುದೇ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪರಿಹಾರ. ಕೆ. ರುಪತಿ ಭಟ್, ಮಾಜಿ ಶಾಸಕರು, ಉಡುಪಿ