ಕಾಮಣ ಮರಕ್ಕಡ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಳು ನೇಮೋತ್ಸವ

New Project (15)
Published on

ಕಡಬ: ಕಾಮಣ ಗ್ರಾಮದ ಮರಕ್ಕಡ ಕಲ್ಲಮಾಡದಲ್ಲಿ ಶ್ರೀ ಉಳ್ಳಾಕುಳು ನೇಮೋತ್ಸವ ನಡೆಯಿತು. ಚಾಮುಂಡಿ ದೈವದ ಭಂಡಾರ ತೆಗೆಯುವುದು, ಬಳಿಕ ಅನ್ನಸಂತರ್ಪಣೆ ನಡೆದು, ಶ್ರೀ ಚಾಮುಂಡಿ ದೈವದ ನೇಮೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಆನುವಂಶಿಕ ಅರ್ಚಕ ಗೋಪಾಲಕೃಷ್ಣ ಭಟ್ ನಾರ್ಯ, ಮೊಕ್ತೇಸರ ಕೇಶವ ಗೌಡ ಸಜಂಕು, ಉತ್ಸವ ಸಮಿತಿಯ ಅಧ್ಯಕ್ಷ ಪದ್ಮಯ್ಯ ಗೌಡ ಕರಂದ್ಲಾಜೆ, ಕಾರ್ಯದರ್ಶಿ ಪುರುಷೋತ್ತಮ ಗೌಡ ಬೈತಡ್ಕ, ನಾಲ್ಕು ಮನೆಯವರಾದ ಎಲ್ಯಣ್ಣ ಗೌಡ ಮರಕ್ಕಡ, ಸುಂದರ ಗೌಡ ಸಜಂಕು, ದಾಮೋದರ ಗೌಡ ಬೊಮ್ಮೋಡಿ, ಭರತ್ ಗೌಡ ಬೈತಡ್ಕ ಹಾಗೂ ಕೂಡುಕಟ್ಟಿನವರು, ಊರ-ಪರವೂರ ಭಕ್ತರು ಭಾಗವಹಿಸಿದ್ದರು. ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net