

ಬೆಂಗಳೂರು: ಪ್ರಭಾಸ್ ಅಭಿನಯ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898 ಎಡಿ ಜೂನ್ 28 ರಂದು ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರು, ವಿಮರ್ಶಕರು ಮತ್ತು ಖ್ಯಾತ ನಟ-ನಟಿಯರು, ಸೆಲಬ್ರಿಟಿಗಳು ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಸಹ ಹರತಾಗಿಲ್ಲ. ಚಿತ್ರದ ಬಗ್ಗೆ ಯಶ್ ಶ್ಲಾಘಿಸಿದ್ದು, ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಹಾಕಿದ್ದಾರೆ.
ಚಿತ್ರವು ಅದ್ಭುತವಾಗಿ ಮೂಡಿ ಬಂದಿದೆ. ನಾಗ್ ಅಶ್ವಿನ್ ಚಮತ್ಕಾರ ಮಾಡಿದಂತೆ ತೋರುತ್ತದೆ. ಅತಿಥಿ ಪಾತ್ರಗಳ ತಾರಾಗಣ ಸಂಯೋಜನೆಯು ಮರೆಯಲಾಗದ ಸಿನಿಮೀಯ ಅನುಭವವನ್ನು ಸೃಷ್ಟಿಸುತ್ತದೆ. ಇಡೀ ಚಿತ್ರ ತಂಡ ಅದ್ಭುತವಾದ ಚಮತ್ಕಾರವನ್ನು ಸೃಷ್ಟಿಸಿದಕ್ಕಾಗಿ ಪ್ರಶಂಸೆಗಳು. ಈ ಚಿತ್ರವು ಮತ್ತಷ್ಟು ಸೃಜನಶೀಲ ಕಥೆಗಳನ್ನು ಸೃಷ್ಟಿಸಲು ದಾರಿ ಮಾಡಿಕೊಡುತ್ತದೆ. ನಾಗ್ ಅಶ್ವಿನ್ ಮತ್ತು ವೈಜಯಂತಿ ಫಿಲ್ಮ್ಸ್ ನ ದೃಷ್ಟಿ ಮತ್ತು ಧೈರ್ಯವು ಅನೇಕರು ದೊಡ್ಡ ಹೆಜ್ಜೆಗಳನ್ನು ಇಡಲು ಪ್ರೇರೇಪಿಸುತ್ತದೆ ಎಂದು ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಬರೆದುಕೊಂಡಿದ್ದಾರೆ.
ಚಿತ್ರವನ್ನು ನೋಡಿದ ಮೇಲೆ ವೀಕ್ಷಣಾ ಅನುಭವವನ್ನು ಶ್ರೀಮಂತಗೊಳಿಸಿತು.ಈ ಚಿತ್ರವನ್ನು ಒಟ್ಟಿಗೆ ತರಲು ತೊಡಗಿರುವ ಎಲ್ಲರಿಗೂ ಅಭಿನಂದನೆಗಳು. ಇದು ನಿಜವಾಗಿಯೂ ಬೆಳ್ಳಿತೆರೆಯನ್ನು ಬೆಳಗಿಸುತ್ತದೆ ಎಂದು ಯಶ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡ ನಟರ ಬಗ್ಗೆ ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.