More

  ಈ 2 ರಾಜ್ಯಗಳಲ್ಲಿ ದುಬಾರಿಯಾಗಲಿದೆ ‘ಕಲ್ಕಿ 2898 ಎಡಿ’ ಚಿತ್ರದ ಟಿಕೆಟ್ ದರ! ಕಂಗಾಲಾದ ಪ್ರಭಾಸ್ ಫ್ಯಾನ್ಸ್

  ಈ ಹಿಂದಿನಿಂದಲೂ ಸಿನಿಪ್ರೇಕ್ಷಕರಲ್ಲಿ ಭಾರೀ ಕುತೂಹಲ ಕೆರಳಿಸಿರುವ ಟಾಲಿವುಡ್​ನ​ ರೆಬೆಲ್ ಸ್ಟಾರ್​ ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ‘ಕಲ್ಕಿ 2898 ಎಡಿ’ ಸಿನಿಮಾದ ಚಿತ್ರೀಕರಣ ಇದೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಇದೇ ಜೂನ್​ 27ರಂದು ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಇದರ ಮಧ್ಯೆ ಇತ್ತೀಚೆಗಷ್ಟೇ ಚಿತ್ರತಂಡ ಬುಜ್ಜಿ ಕಾರನ್ನು ಪರಿಚಯಿಸಿದ ರೀತಿ ಹಾಗೂ ರಿಲೀಸ್​ ಮಾಡಿದ ಟ್ರೇಲರ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದರು. ಆದರೆ, ಟಿಕೆಟ್ ದರ ಕೇಳಿ ಇದೀಗ ಭಾರೀ ಬೇಸರ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: ಕೊಲೆ ಪ್ರಕರಣದಲ್ಲಿ 13 ಮಂದಿ ಅರೆಸ್ಟ್‌; ದರ್ಶನ್-ಪವಿತ್ರ ಗೌಡ ಬಿಪಿ, ಶುಗರ್, ಹಾರ್ಟ್ ಬೀಟ್ ಚೆಕಪ್

  ಬಹುನಿರೀಕ್ಷಿತ ಸೈನ್ಸ್​-ಫಿಕ್ಷನ್ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದು, ಪ್ರಭಾಸ್​ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ಸೇರಿದಂತೆ ಮುಂತಾದವರ ತಾರಾಗಣ ಚಿತ್ರಕ್ಕಿದೆ. ವೈಜಯಂತಿ ಮೂವೀಸ್ ಅಡಿಯಲ್ಲಿ ಅಶ್ವಿನಿ ದತ್ ಚಿತ್ರವನ್ನು ನಿರ್ಮಿಸಿದ್ದು, ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ದೊಡ್ಡ ಪರದೆಯ ಮೇಲೆ ತಮ್ಮ ನೆಚ್ಚಿನ ನಟನ ಸಿನಿಮಾ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ಚಿತ್ರತಂಡ ಹೊಸ ಶಾಕ್ ನೀಡಿದೆ.

  ಟ್ರೇಲರ್​ ನೋಡಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿರುವ ಸಿನಿಪ್ರೇಕ್ಷಕರು, ಟಿಕೆಟ್​ಗಾಗಿ ಈಗಾಗಲೇ ಮುಂಗಡ ಬುಕ್ಕಿಂಗ್​ ಮೊರೆ ಹೋಗಿದ್ದಾರೆ. ಇನ್ನು ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಚಿತ್ರಮಂದಿರಗಳಲ್ಲಿ ‘ಕಲ್ಕಿ 2898 ಎಡಿ’ ಚಿತ್ರದ ಸಿಂಗಲ್​ ಸ್ಕ್ರೀನ್ ಟಿಕೆಟ್​ ದರ​ 236 ರೂ. ಏರಿಕೆಯಾದರೆ, ಮಲ್ಟಿಪ್ಲೆಕ್ಸ್​ಗಳಲ್ಲಿ 413 ರೂ. ಆಗಲಿದೆ ಎಂದು ವರದಿಯಾಗಿದೆ. ಈ ಕುರಿತು ಚಿತ್ರಮಂದಿರದ ಮಾಲೀಕರ ಮಧ್ಯೆ ಭಾರೀ ಚರ್ಚೆಯಾಗುತ್ತಿದ್ದು, ಮಧ್ಯರಾತ್ರಿ 1 ಗಂಟೆ ಶೋ ಆಯೋಜಿಸಲು ಕೂಡ ಒತ್ತಾಯಿಸಲಾಗಿದೆ,(ಏಜೆನ್ಸೀಸ್). 

  ಪತ್ನಿ ಮತ್ತು ಪುತ್ರನೊಂದಿಗೆ ಮಾತನಾಡಿದ ದರ್ಶನ್​! ಫೋನ್ ಕರೆಯಲ್ಲಿ ವಿಜಯಲಕ್ಷ್ಮಿ ಬಳಿ ಹೇಳಿದ್ದಿಷ್ಟು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts