

ಕೋಟ: ಕಾಳಿಂಗ ನಾವಡರ ಹೆಸರೇ ಯಕ್ಷ ಪ್ರಪಂಚದಲ್ಲಿ ರೋವಾಂಚನ. ಸರಿಸಾಟಿಯಿಲ್ಲದ ಕಂಠ ಸಿರಿಯನ್ನು ಹೊಂದಿದ ಕಾಳಿಂಗ ನಾವಡರು ಎಳೆ ವಯಸ್ಸಿನಲ್ಲೇ ಅದ್ಭುತ ಸಾಧನೆಗೈದು ಇಹಲೋಕ ತ್ಯಜಿಸಿ ಅಜರಾಮರರಾದರು, ಗಾನಗಾರುಡಿಗರಾಗಿ ಯಕ್ಷ ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು ಸಂಸ್ಮರಣಾ ನುಡಿಗಳನ್ನಾಡಿದರು.
ತೆಕ್ಕಟ್ಟೆ ಹಯಗ್ರೀವದಲ್ಲಿ ಶನಿವಾರ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಆಶ್ರಯದಲ್ಲಿ ಗಂಪು ಪೈ ಸಾಲಿಗ್ರಾಮ ಸಹಕಾರದಲ್ಲಿ ಕಾಳಿಂಗ ನಾವಡರ ಸಂಸ್ಮರಣೆಯಾಗಿ ಯಕ್ಷ ಗಾನ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೈಲಾಸ ಕಲಾಕ್ಷೇತ್ರ ಅಧ್ಯಕ್ಷ ಹೆರಿಯ ವಾಸ್ಟರ್ ಮಾತನಾಡಿದರು. ರಂಗ ನಿರ್ದೇಶಕ ರೋಹಿತ್ ಎಸ್.ಬೈಕಾಡಿ, ಉದ್ಯಮಿ ಗೋಪಾಲ ಪೂಜಾರಿ ಬಾಳೆಹಿತ್ಲು, ಯುವ ಭಾಗವತರಾದ ರಾಜೇಶ್ ಕೋಡಿ, ಹರೀಶ್ ಕಾವಡಿ, ವಿಶ್ವನಾಥ ಐರೋಡಿ, ಸುಕುವಾರ ಶೆಟ್ಟಿ, ಲೋಹಿತ್ ಕೊಮೆ, ರಾಹುಲ್ ಕುಂದರ್, ರಾಹುಲ್ ಅಮೀನ್, ಪವನ್ ಆಚಾರ್ ಉಪಸ್ಥಿತರಿದ್ದರು.