

ಕಳಸ: ದಕ್ಷಿಣ ಕಾಶಿ ಅಗಸ್ತ್ಯ ಕ್ಷೇತ್ರ ಶ್ರೀಕಲಶೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಫೆ
3ರಿಂದ 11ರ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ
ಎಸ್.ಪ್ರೇಮಲತಾ ತಿಳಿಸಿದ್ದಾರೆ.
ಫೆ 3 ರಂದು ಗಣಪತಿ ಪೂಜೆ, ಅಂಕುರಾರ್ಪಣ, 4ಕ್ಕೆ ಧ್ವಜಾರೋಹಣ, ಹಸಿರುವಾಣಿ
ಸಮರ್ಪಣೆ, ರಾತ್ರಿ ಕೌತುಕೋತ್ಸವ, ವೃಷಭಾರೋಹಣ, ಯಾಗಶಾಲಾ ಪ್ರವೇಶ,
ಮಂಟಪ ಪ್ರತಿಷ್ಠೆ, ಅಗ್ನಿ ಜನನ ಸಂಜೆ ಸಿಂಹರೋಹಣ,ಪೆ 6 ರಂದು
ಶಾಂತಿಪ್ರಾಶ್ಚಿತ್ತಹೋಮ ಸಂಜೆ ಮಯೂರಾರೋಹಣ,ಪೆ 7 ರಂದು
ಪಂಚಬ್ರಹ್ಮಹೋಮ ಸಂಜೆ ಹಂಸಾರೋಹಣ,ಪೆ 8 ರಂದು ಆವಾಸ ಹೋಮ ಸಂಜೆ
ಗಜರೋಹಣ ನಡೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೆ 9 ರಂದು ಹಗಲು ಬ್ರಹ್ಮ ರಥೋತ್ಸವ ರಾತ್ರಿ ಶ್ರೀಮನ್ ಮಹಾರಥೋತ್ಸವ
ನಡೆಯಲಿದೆ ಆ ದಿನ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ ಗಂಟೆ 8 ರಿಂದ
ಕಲಶೇಶ್ವರ ಸ್ವಾಮಿ ದೇವಾಲಯದ ರಂಗಮಂದಿರದಲ್ಲಿ ಹೊಳ್ಳಸ್ ಶ್ರೀಚನ್ನಕೇಶವ
ಯಕ್ಷಗಾನ ಕಲಾ ಪ್ರತಿಷ್ಠಾನ ಗೊರಸುಕುಡಿಗೆ ಬಾಳೆಹೊಳೆ ಇವರಿಂದ ಭಸ್ಮಾಸುರ
ಮೋಹಿನಿ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಹೇಳಿದ್ದಾರೆ.
10ರಂದು ಕುಂಕುಮೋತ್ಸವ, ಮೃಗಯಾತ್ರೆ, ಯಾತ್ರಾ ನಿವಾಸ ಹೋಮ,
ರುದ್ರತೀರ್ಥದಲ್ಲಿ ಅವಬೃತ ಸ್ನಾನ, ರಾತ್ರಿ ಇಡಿಗಾಯಿ ಸೇವೆ, ಧ್ವಜಾವರೋಹಣ,
11ಕ್ಕೆ ಮಹಾ ಸಂಪ್ರೋಕ್ಷಣೆ,ಲಮಂತ್ರಾಕ್ಷತೆಯೊಂದಿಗೆ 9 ದಿನ ನಡೆಯುವ ಜಾತ್ರೆಗೆ
ತೆರೆಬೀಳಲಿದೆ ಎಂದು ತಿಳಿಸಿದ್ದಾರೆ.