

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ಶ್ರೀಚಕ್ರ ಪೂಜೆಯ ಮೂಲಕ ಅಮ್ಮನವರ ಆರಾಧನೆ. ಇದರಿಂದಾಗಿ ಎಲ್ಲರಿಗೂ ಸಂಪತ್ತು, ಸದ್ಬುದ್ಧಿ, ಸನ್ಮಾರ್ಗ ಮತ್ತು ಸತ್ ಚಿಂತನೆಯ ಮಾರ್ಗದರ್ಶನ ಸಿಗಲಿದೆ ಎಂದು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ ಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಕಟಪಾಡಿ ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠದ ಶ್ರೀಗಳ ಚಾತುರ್ಮಾಸ್ಯ ಪ್ರಯುಕ್ತ ಶ್ರೀ ನಾಗಧರ್ಮೇಂದ್ರ ಸರಸ್ವತಿ ಸಂಸ್ಕೃತ ವೇದ ಸಂಜೀವಿನಿ ಪಾಠಶಾಲೆಯ ಶ್ರೀ ಸರಸ್ವತಿ ಪೂರ್ವ ಛಾತ್ರ ಸಂಘ ಹಾಗೂ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿ ಸಂಯುಕ್ತವಾಗಿ ಪಡುಕುತ್ಯಾರಿನಲ್ಲಿ ಶುಕ್ರವಾರ ಶ್ರೀಚಕ್ರ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಪ್ರಧಾನ ಅರ್ಚಕ ಕೆ.ರಾಮಚಂದ್ರ ಅಡಿಗ, ವಿದ್ವಾನ್ ಹಿರಣ್ಯ ವೆಂಕಟೇಶ್ ಭಟ್ ಬಾಯಾರು ವಿಶೇಷ ಉಪನ್ಯಾಸ ನೀಡಿದರು. ಕಟಪಾಡಿ ಪಡುಕುತ್ಯಾರು ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ ಅಧ್ಯಕ್ಷ ವಿ.ಶ್ರೀಧರ ಆಚಾರ್ಯ ವಡೇರಹೋಬಳಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಆಸ್ಥಾನ ವಿದ್ವಾಂಸ ಉಮೇಶ್ ಆಚಾರ್ಯ ಪಡೀಲು, ಮನೋಜ್ ಅಕ್ಷಯ್ ಶರ್ಮ, ಸುಬ್ಬಣ್ಣ ಆಚಾರ್ಯ, ಹರಿಶ್ವಂದ್ರ ಎನ್.ಆಚಾರ್ಯ ಬೆಂಗಳೂರು, ಭವಾನಿ ನಾರಾಯಣ ಆಚಾರ್ಯ, ಪಿ.ವಿ ಗಂಗಾಧರ ಆಚಾರ್ಯ, ಬಿ.ಸೂರ್ಯಕುಮಾರ್ ಹಳೆಯಂಗಡಿ, ಗಣೇಶ್ ಆಚಾರ್ಯ ಕೆಮ್ಮಣ್ಣು, ಸುಂದರ ಆಚಾರ್ಯ ಬೆಳವಾಯಿ, ಸಂಧ್ಯಾಲಕ್ಷ್ಮಣ ಆಚಾರ್ಯ ಉಡುಪಿ, ಕೇಶವ ಶರ್ಮ, ದಿನೇಶ್ ಆಚಾರ್ಯ ಪಡುಬಿದ್ರಿ, ಬಿ.ಎಂ ಯದುನಂದನ ಆಚಾರ್ಯ, ಜಗದೀಶ್ ಆಚಾರ್ಯ, ಜಯಕರ ಆಚಾರ್ಯ, ಪ್ರಭಾಕರ್ ಆಚಾರ್ಯ, ಜನಾರ್ದನ ಆಚಾರ್ಯ, ಕಳಿ ಚಂದ್ರಯ್ಯ ಆಚಾರ್ಯ ಉಪಸ್ಥಿತರಿದ್ದರು. ಲೋಕೇಶ್ ಎಂ.ಬಿ ಆಚಾರ್ ಕಂಬಾರು ಸ್ವಾಗತಿಸಿದರು. ಅರವಿಂದ ವೈ.ಆಚಾರ್ಯ ಬೆಳುವಾಯಿ ವಂದಿಸಿದರು. ಕೆ.ಎಂ.ಗಂಗಾಧರ್ ಆಚಾರ್ಯ, ಗೀತಾಚಂದ್ರ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.
ಸುಖ, ಶಾಂತಿ, ನೆಮ್ಮದಿ, ಅಹಿಂಸೆಯ ಜೀವನಕ್ಕೆ ದೇವರ ಆಶೀರ್ವಾದದೊಂದಿಗೆ ಗುರುಗಳ ಮಾರ್ಗದರ್ಶನ ಅತ್ಯಗತ್ಯ. ಆನೆಗುಂದಿ ಶ್ರೀಗಳು ನಡೆಸುತ್ತಿರುವ ಧರ್ಮ ಕಾರ್ಯಗಳು ನಮಗೆಲ್ಲರಿಗೂ ಶ್ರೀರಕ್ಷೆಯಾಗಿದೆ.-ಕೆ.ಅಭಯಚಂದ್ರ ಜೈನ್, ಮಾಜಿ ಸಚಿವ