ಕಲಬುರಗಿ ಟ್ರಾಮ್ ಸೆಂಟರ್ ಉದ್ಘಾಟನೆ ಫೆ. 1೦ ರಂದು: ಸಚಿವ ಡಾ.ಶರಣಪ್ರಕಾಶ ಪಾಟೀಲ್ ಘೋಷಣೆ

IMG-20240204-WA0027
Published on

ಜಿಮ್ಸ್ ಆವರಣದಲ್ಲಿ ಇರುವ ಟ್ರಾಮಾ ಸೆಂಟರ್ ಪರಿಶೀಲನೆ


ಕಲಬುರಗಿ : ಅಪಘಾತ, ದೈಹಿಕ ಗಾಯ ಮತ್ತು ತುರ್ತು ಚಿಕಿತ್ಸಾ ಘಟಕಗಳ ಕೇಂದ್ರ (ಟ್ರಾಮಾ ಸೆಂಟರ್) ಫೆಬ್ರುವರಿ ೧೦ ರಂದು ಲೋಕಾರ್ಪಣೆಗೊಳ್ಳಲಿದೆ. ಇದಕ್ಕಾಗಿ ಭರದ ಸಿದ್ಧತೆ ಸಹ ನಡೆದಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.

ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣಗೊಂಡಿರುವ ಸುಸಜ್ಜಿತ ಟ್ರಾಮ್ ಸೆಂಟರ್‌ನಲ್ಲಿ ಭಾನುವಾರ ವೈದ್ಯಾಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೧೦ ಹಾಸಿಗೆವುಳ್ಳ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಅತ್ಯಾಧುನಿಕ ಸುಸಜ್ಜಿತ ವೈದ್ಯ ಉಪಕರಣಗಳು, ಸಲಕರಣೆಗಳನ್ನು ಒದಗಿಸಿಕೊಡಲಾಗಿದೆ. ಬಿಪಿಎಲ್ ಕುಟುಂಬದಾರರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ. ಅಲ್ಲದೆ, ಕೆಲವೊಂದು ನಿಗದಿತ ಶುಲ್ಕ ಭರಿಸಿದರೆ ಉಳಿದವರಿಗೂ ಚಿಕಿತ್ಸಾ ಸೌಲಭ್ಯ ಸಿಗಲಿದೆ. ಸುತ್ತಮುತ್ತಲಿನ ಜಿಲ್ಲೆಗಳ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಆಂಬುಲೆನ್ಸ್ ಮೇಲೆ ನಿಗಾ
ಅಪಘಾತಕ್ಕೊಳಗಾದ ರೋಗಿಗಳಿಗೆ ತಪ್ಪು ಮಾಹಿತಿ ನೀಡಿ ಬೇರೆ ಖಾಸಗಿ ಆಸ್ಪತ್ರೆಗಳಿಗೆ ಕರದೊಯ್ದರೆ ಅಂಬುಲೆನ್ಸ್ ಚಾಲಕರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು. ಸಾರ್ವಜನಿಕರು ಅಂಬುಲೆನ್ಸ್ ಚಾಲಕರ ಮಾತಿಗೆ ಕಿವಿಗೊಡದೆ ನೇರವಾಗಿ ಟ್ರಾಮ್ ಸೆಂಟರ್‌ಗೆ ಬಂದು ದಾಖಲಾಗಬೇಕು. ಸಾರ್ವಜನಿಕರು ಮತ್ತು ರೋಗಿಗಳಿಂದ ದೂರು ಬಂದರೆ ತಪಿತಸ್ಥ ಚಾಲಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಹಿಂದೇಟು ಹಾಕುವಂತಿಲ್ಲ. ಈ ಬಗ್ಗೆ ಜಿಮ್ಸ್ ನಿರ್ದೇಶಕರು ಮತ್ತು ಸಂಬಂಧಿಸಿದ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಲಾಗಿದೆ ಎಂದು ಸಚಿವರು ಎಚ್ಚರಿಸಿದರು.
ಆಸ್ಪತ್ರೆಯಲ್ಲಿ ಏನೇನಿದೆ ನರರೋಗ ವಿಭಾಗ, ಕೀಲು, ಮೂಳೆ ವಿಭಾಗ, ತಲಾ ೩೦ ಹಾಸಿಗೆಯುಳ್ಳ ರೆಡ್ ಝೋನ್, ಯೆಲ್ಲೋ ಝೋನ್ ಮತ್ತು ಗ್ರೀನ್ ಝೋನ್ ಮೂರು ಪ್ರತ್ಯೇಕ ವಾರ್ಡಗಳನ್ನಾಗಿ ವಿಂಗಡಿಸಲಾಗಿದೆ. ಒಂದು ೧೨೪ ಸಾಮರ್ಥ್ಯದ ಸಿಟಿ ಸ್ಕ್ಯಾನ್ ಸಲಕರಣೆ, ೧.೫ ಎಂಆರ್‌ಐ ಯಂತ್ರೋಪಕರಣ, ಸುಸಜ್ಜಿತ ಐಸಿಯು ಘಟಕ, ನಾಲ್ಕು ಮೆಜರ್ ಓಟಿ ಥಿಯೇಟರ್, ಒಂದು ಮೈನಾರ್ ಓಟಿ ಥಿಯೇಟರ್, ಸುಸಜ್ಜಿತ ಐದು ಅಂಬುಲೆನ್ಸ್ ವಾಹನಗಳು ಸಿದ್ಧವಾಗಿವೆ ಎಂದು ಸಚಿವರು ಮಾಹಿತಿ ನೀಡಿದರ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ನಗರದಲ್ಲಿ ೪೦ ಕೋಟಿ ರೂ. ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ಮಾರ್ಚ್ ತಿಂಗಳಲ್ಲಿ ಅಡಿಗಲ್ಲು ಹಾಕಲು ಮುಹೂರ್ತನಿಗದಿಪಡಿಸಲಾಗಿದೆಎಂದರು.

ಜಿಮ್ಸ್ ನಿರ್ದೇಶಕ ಡಾ. ಉಮೇಶ, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಶಿವಕುಮಾರ ಸಿ.ಆರ್, ಡಾ. ಸತೀಶ ಮೇಳಕುಂದಿ, ಜಿಲ್ಲಾ ಶಸ್ತ್ರಜ್ಞ ಡಾ. ಅಂಬಾರಾಯ ರುದ್ರವಾಡಿ, ಸಹಾಯಕ ಆಡಳಿತಾಧಿಕಾರಿ ವೀರಣ್ಣ ಶಿವಪುರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net