ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಐಶಾರಾಮಿ ಜೀವನ

IMG-20241014-WA0017
Published on

ಹಣ ನೀಡಿದರೆ ಗಾಂಜಾ ಲಭ್ಯ : ಜೈಲಿಂದ ಸ್ನೇಹಿತರಿಗೆ ವಿಡಿಯೋ ಕಾಲ್ ಮಾಡಿದ ಪೋಟೋಗಳು ವೈರಲ್

ಕಲಬುರಗಿ: ನಗರದ ಹೊರವಲಯದಲ್ಲಿರುವ ಕೇಂದ್ರ ಕಾರಾಗೃಹದ ಕೈದಿಗಳ ಐಶಾರಾಮಿ ಜೀವನದ ಹಲವು ಫೋಟೋ ವೀಡಿಯೋ ವೈರಲ್ ಆಗಿವೆ.

ಸ್ಮಾಟ್೯ ಫೋನ್ ಬಳಸಿ ಸ್ನೇಹಿತರಿಗೆ ಕೈದಿಗಳಿಂದ ವೀಡಿಯೋ ಕಾಲ್ ಮಾಡಿ ಜೈಲಿನಲ್ಲಿ ಗಾಂಜಾ ಸೇದುತ್ತಾ ಸೆಲ್ಫಿಗೆ ಪೋಸ್ ನೀಡಿರುವ ಫೋಟೋಗಳು ಎಲ್ಲಡೆ ಹರಿದಾಡುತ್ತಿವೆ.

ಕೈದಿಗಳಾದ ವಿಶಾಲ, ಸಾಗರ ಹಾಗೂ ಸೋನು ಎಂಬ ಕೈದಿಗಳ ಐಶಾರಾಮಿ ಜೀವನ ಬಯಲಾಗಿದೆ.ಬೇರೆ ಬೇರೆ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರಿರುವ ವಿಚಾರಣಾಧಿನ ಕೈದಿಗಳಾ ಗಿದ್ದಾರೆ.

ಪರಪ್ಪನ ಅಗ್ರಹಾರ ನಟ ದರ್ಶನಗೆ ಜೈಲಿನಲ್ಲಿ ರಾಜ್ಯತಿಥ್ಯ ಪ್ರಕರಣ ಹಿನ್ನಲೆಯಲ್ಲಿ ದರ್ಶನ ಆಪ್ತ ಸಹಾಯಕ ನಾಗರಾಜ್ ಕಲಬುರಗಿ ಜೈಲಿಗೆ ಶೀಫ್ಟ್ ಮಾಡಲಾಗಿದೆ.

ಈಗಾಗಲೇ ಸಾಮಾನ್ಯ ಕೈದಿಗಳಿಗೆ ರಾಜ್ಯತಿಥ್ಯ ನೀಡುತ್ತಿರುವ ಜೈಲು ಸಿಬ್ಬಂದಿ. ಹಾಗಾದ್ರೆ ದರ್ಶನ ಆಪ್ತ ನಾಗರಾಜ್ ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಐಶಾರಾಮಿ ಜೀವನ ನಡೆಸುತ್ತಿರಬಹುದು ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net