ಫೈರಿಂಗ್ ಮಾಡಿ ಕಲಬುರಗಿ ಎಂಟಿಎಂ ದರೋಡೆಕೋರರನ್ನು ವಶಕ್ಕೆ ಪಡೆದ ಪೊಲೀಸರು

IMG-20250426-WA0002
Published on

ಕಲಬುರಗಿ: ರಾಜ್ಯದೆಲ್ಲಡೆ ಸದ್ದು ಮಾಡಿದ್ದ ಕಲಬುರಗಿ ಎಟಿಎಂ ದರೋಡೆಕೋರರ ಮೇಲೆ ಫೈರಿಂಗ್ ನಗರ‌ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮೂಲಕ ಖಾಕಿಪಡೆ ಸವಾಲಾಗಿದ್ದ ಪ್ರಕರಣ ಬೇಧಿಸಿದೆ.

ಇದೇ ತಿಂಗಳು 9 ರಂದು ನಗರದ ರಿಂಗ್ ರೋಡಿನ ಪೂಜಾರಿ ರಿ ಚೌಕ್ ಬಳಿಯ ಎಸ್ ಬಿಐ ಬ್ಯಾಂಕಿನ ಎಟಿಎಂ ಯಂತ್ರ ಕೊರೆದು ದರೋಡೆ ಮಾಡಿದ ಆರೋಪಿಗಳನ್ನು ಅರೆಸ್ಟ್ ಮಾಡಲು ಹೋಗಿದ್ದ ಪೊಲೀಸರ ಮೇಲೆ ದಾಳಿ ಮಾಡಿದಾಗ ಆತ್ಮ ರಕ್ಷಣೆ ಗೆ ಫೈರಿಂಗ ಮಾಡಿದ ಘಟನೆ ಶನಿವಾರ ಬೆಳ್ಳಂ ಬೆಳಗ್ಗೆ ಪೊಲೀಸರು ತಕ್ಕ ಉತ್ತರ ನೀಡಿದ್ದಾರೆ.

ಹರಿಯಾಣ ಮೂಲದ ಆರೋಪಿಗಳಾದ ತಸ್ಲೀಮ್ @ ತಸ್ಸಿ (28) , ಶರೀಫ್ ( 22) ಪೊಲೀಸ್ ಫೈರಿಂಗ್ ನಲ್ಲಿ ಗಾಯಗೊಂಡು ಬಂಧಿತರಾದ ಎಟಿಎಂ ದರೋಡೆಕೋರರು.

ಕಲಬುರಗಿ ಹೊರವಲಯದ ಬೇಲೂರ ಕ್ರಾಸ್ ಇಂಡಸ್ಟ್ರಿಯಲ್ ಏರಿಯಾ ಬಳಿ ದರೋಡೆಕೋರರು ಇದ್ದಾರೆ ಎಂಬ ಮಾಹಿತಿಯಂತೆ ಬಂಧನ ಮಾಡಲು ತೆರಳಿದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ ನಡೆಸಿದ್ದಾರೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ‌ಫೈರಿಂಗ್ ಮಾಡಿದ್ದು, ಕಾಲಿಗೆ ಗುಂಡು ತಗುಲಿದೆ.

ಪಿಎಸ್ ಐ ಬಸವರಾಜ ಅವರು ಫೈರಿಂಗ್ ಮಾಡಿದ್ದಾರೆ. ಘಟನೆಯಲ್ಲಿ ಪೊಲೀಸ್ ಕಾನ್ಟೇಬಲ್ ಗಳಾದ ಮಂಜು, ಫಿರೋಜ್, ರಾಜಕುಮಾರ್ ಅವರಿಗೂ ಗಾಯ

ಗಾಯಾಳು ಪೊಲೀಸ್ ಕಾನ್ಸಟೇಬಲ್ ಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡೆಟು ತಿಂದ ದರೊಡೆಕೋರರನ್ನು ಕಲಬುರಗಿಯ ಜಿಮ್ಸಗೆ ದಾಖಲು ಮಾಡಲಾಗಿದೆ.

ಕಲಬುರಗಿಯಲ್ಲಿ ಇದೆ ತಿಂಗಳು 9 ರಂದು ಪೂಜಾರಿ ಚೌಕ್ ಬಳಿ SBIಎಟಿಎಂ ಕೊರೆದು 18 ಲಕ್ಷ ರೂ. ದೋಚಿಕೊಂಡು ಹೋಗಿದ್ದರು. ಸ್ಥಳಕ್ಕೆ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಡಿಸಿಗಳಾದ ಕನ್ನಿಕಾ ಸಿಕ್ರಿವಾಲ್, ಪ್ರವೀಣ ನಾಯಕ, ಎಸಿಪಿ ರಾಜಣ್ಣ, ಇನ್ ಸ್ಪೆಕ್ಟರ್ ಸಂತೋಷ ತಟ್ಟೆಪಳ್ಳಿ ಇತರರು ಭೇಟಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net