

ಮುಂಬೈ: ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಕೆಲವೇ ಸಿನಿಮಾಗಳಲ್ಲಿ ಚುಂಬನದ ದೃಶ್ಯಗಳಲ್ಲಿ ನಟಿಸಿ, 23 ವರ್ಷಗಳ ಕಾಲ ಚುಂಬನದ ದೃಶ್ಯಗಳಿಂದ ಅಂತರ ಕಾಯ್ದುಕೊಂಡಿದ್ದ ನಟಿ ಕಾಜೋಲ್, ಇದೀಗ ಲಿಪ್ಲಾಕ್ ದೃಶ್ಯದಲ್ಲಿ ನಟಿಸುವ ಮೂಲಕ ಬಾಲಿವುಡ್ ಮಂದಿಯ ಹುಬ್ಬೇರಿಸಿದ್ದಾರೆ.
ಇತ್ತೀಚೆಗಷ್ಟೇ ಡಿಸ್ನಿ ಹಾಟ್ಸ್ಟಾರ್ನಲ್ಲಿ ಬಿಡಗಡೆಯಾಗಿರುವ “ದಿ ಟ್ರಯಲ್” ಹೆಸರಿನ ವೆಬ್ ಸರಣಿಯಲ್ಲಿ ಕಾಜೋಲ್ ಲಿಪ್ಲಾಕ್ ದೃಶ್ಯದಲ್ಲಿ ನಟಿಸಿದ್ದು, 23 ವರ್ಷಗಳ ನೋ ಕಿಸ್ಸಿಂಗ್ ಪಾಲಿಸಿಯನ್ನು ಇದೀಗ ಮುರಿದಿದ್ದಾರೆ. ಒಂದೇ ಸರಣಿಯಲ್ಲಿ ಎರಡು ಬಾರಿ ಲಿಪ್ಲಾಕ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ ಈ ಟ್ರಯಲ್ ವೆಬ್ಸರಣಿಯನ್ನು ಸ್ವತಃ ಕಾಜೋಲ್ ಪತಿ ನಟ ಅಜಯ್ ದೇವಗನ್ ಅವರೇ ನಿರ್ಮಾಣ ಮಾಡಿದ್ದಾರೆ. 48ನೇ ವಯಸ್ಸಿನಲ್ಲಿ ಅನಗತ್ಯವಾಗಿ ಲಿಪ್ಲಾಕ್ ಮಾಡಿದ್ದಾರೆ ಎಂದು ಅಜಯ್ ದೇವಗನ್ ಅಭಿಮಾನಿಗಳು ಕಾಜೋಲ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದರೆ, ಕೆಲವು ವರದಿಗಳ ಪ್ರಕಾರ ಪತಿ ಅಜಯ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಕಾಜೋಲ್ ಲಿಪ್ಲಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಅಜಯ್ ಅವರು ಅನೇಕ ಸಿನಿಮಾಗಳಲ್ಲಿ ನಟಿಯರಾದ ಟಬು, ರಾಕುಲ್ ಪ್ರೀತ್ ಸಿಂಗ್ ಮತ್ತು ಎರಿಕಾ ಕಾರ್ ಜತೆ ಲಿಪ್ಲಾಕ್ ಮಾಡಿದ್ದಾರೆ.
ಕಾಜೋಲ್ ಜತೆ ಲಿಪ್ ಲಾಕ್ ಮಾಡಿದ ಸಹ ನಟ ಅಲಿ ಖಾನ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಕಾಜೋಲ್ ಮೇಲೆ ದಿನದಿಂದಲೂ ಕ್ರಶ್ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ದಿ ಟ್ರಯಲ್ ವೆಬ್ ಸರಣಿಯಲ್ಲಿ ಕಾಜೋಲ್ ಜತೆ ನಟಿಸುವ ಅವಕಾಶ ಸಿಕ್ಕಿದಾಗ ಒಂದು ಕ್ಷಣ ನಂಬಲಾಗಲಿಲ್ಲ ಎಂದಿದ್ದಾರೆ. ಲಿಪ್ಲಾಕ್ ದೃಶ್ಯ ಸೆರೆಹಿಡಿಯುವಾಗ ಹಲವು ಬಾರಿ ಪೂರ್ವಾಭ್ಯಾಸ ಮಾಡಿರುವುದಾಗಿ ತಿಳಿಸಿದ್ದಾರೆ. ದೃಶ್ಯವನ್ನು ಶೂಟ್ ಮಾಡುವಾಗ ಅಜಯ್ ದೇವಗನ್ ಸೆಟ್‌ನಲ್ಲಿ ಇರಲಿಲ್ಲ ಎಂದು ತಿಳಿಸಿದ್ದಾರೆ.
ಅಂದಹಾಗೆ ಈ ವೆಬ್ ಸರಣಿಯಲ್ಲಿ ಕಾಜೋಲ್ ವಕೀಲೆ ನೊಯೊನಿಕಾ ಸೆಂಗುಪ್ತ ಪಾತ್ರವನ್ನು ನಿರ್ವಹಿಸಿದ್ದಾರೆ. ಸಹ ಪಾತ್ರಧಾರಿಗಳಾದ ಅಲಿ ಖಾನ್ ಮತ್ತು ಜಿಶು ಸೆಂಗುಪ್ತ ಜತೆ ಎರಡು ವಿಭಿನ್ನ ಎಪಿಸೋಡ್ಗಳಲ್ಲಿ ಲಿಪ್ಲಾಕ್ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ಕೆಲವರು ಕಾಜೋಲ್ ಮತ್ತು ಸಹ-ನಟರ ನಡುವಿನ ಕೆಮಿಸ್ಟ್ರಿಯನ್ನು ಶ್ಲಾಘಿಸಿದ್ದಾರೆ.
ಈ ವೆಬ್ ಸರಣಿಯಲ್ಲಿ ಕಾಜೋಲ್ ಹೆಂಡತಿ ಮತ್ತು ಇಬ್ಬರು ಮಕ್ಕಳ ತಾಯಿಯ ಪಾತ್ರವನ್ನು ನಿರ್ವಹಿಸಿದ್ದು, ಭಾವನಾತ್ಮಕ ಕ್ಷಣಗಳಲ್ಲಿ ನಡೆಯುವ ಎರಡು ಲಿಪ್-ಲಾಕ್ ದೃಶ್ಯಗಳು ಯಾವುದೇ ಮಿತಿಯನ್ನು ಮೀರದೆ, ಕತೆಗೆ ಪೂರಕವಾಗಿರುವುದರಿಂದ ಕಾಜೋಲ್ ಅವರ ಪಾತ್ರದ ಬಗ್ಗೆ ಯಾವುದೇ ದ್ವೇಷ ಅಥವಾ ತಕಾರರು ಕಂಡುಬಂದಿಲ್ಲ.
ಅಂದಹಾಗೆ ಈ ವೆಬ್ ಸರಣಿ ಅಮೆರಿಕದ ದಿ ಗುಡ್ ವೈಫ್ ಸರಣಿಯ ರಿಮೇಕ್ ಆಗಿದೆ. ಪತಿಯು ಭ್ರಷ್ಟಾಚಾರ ಮತ್ತು ಲೈಂಗಿಕ ಹಗರಣದಲ್ಲಿ ಜೈಲು ಪಾಲಾದ ನಂತರ ಗೃಹಿಣಿ ತನ್ನ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಹೊರಲು ಒತ್ತಾಯಿಸುವ ಕತೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. (ಏಜೆನ್ಸೀಸ್)