ಕಪ್ಪಾಗಿ ದಪ್ಪಗಿದ್ದೀಯ..ಯಾರು ಆಫರ್ ಕೊಡ್ತಾರೆ? ಅವಮಾನಗಳನ್ನು ಮೆಟ್ಟಿನಿಂತ ಈಕೆ ಸ್ಟಾರ್ ಹೀರೋಯಿನ್

ಮುಂಬೈ: ಸಿನಿಮಾ ಒಂದು ಮಾಯಾಲೋಕ ಇಲ್ಲಿ ಅವಮಾನಗಳನ್ನು ಸಹಿಸಿಕೊಂಡು ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದ ಹುಡುಗಿ ಇಂದು ಸ್ಟಾರ್ ಹೀರೋಯಿನ್ ಆಗಿದ್ದಾಳೆ. ಈಕೆ ಎಲ್ಲಾ ನಾಯಕರ ಜೊತೆ ಜೋಡಿಯಾಗಿ ಕಾಣಿಸಿಕೊಳ್ಳುವ ಮೂಲಕವಾಗಿ ಹಿಟ್​​ ಸಿನಿಮಾ ನೀಡಿದ್ದಾರೆ.

ಬಾಲಿವುಡ್ ಬೆಡಗಿ ಕಾಜೋಲ್ ಇಂದು 5 ಆಗಸ್ಟ್ 2024 ರಂದು ತಮ್ಮ 50 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕಾಜೋಲ್ ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ಬಹಳ ಜನಪ್ರಿಯರಾಗಿದ್ದರು. ವೃತ್ತಿಬದುಕಿನ ಆರಂಭದ ದಿನಗಳಲ್ಲಿ ಕಾಲೋಲ್​ ಚಿತ್ರಕ್ಕಾಗಿ ಸಾಕಷ್ಟು ಶ್ರಮಪಡಬೇಕಾಯಿತು. ಇದರಿಂದ ಸಾಕಷ್ಟು ಸಿನಿಮಾ ಅವಕಾಶಗಳು ಕೈತಪ್ಪಿ ಹೋಗಿವೆ.

ಕಾಜೋಲ್  5 ಆಗಸ್ಟ್ 1974 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು, ದಿವಂಗತ ನಿರ್ಮಾಪಕ-ನಿರ್ದೇಶಕ ಸೋಮು ಮುಖರ್ಜಿ ಮತ್ತು ನಟಿ ತನುಜಾ ಅವರ ಪುತ್ರಿ. ಕಾಜೋಲ್ 32 ವರ್ಷಗಳ ಹಿಂದೆ 1992 ರಲ್ಲಿ ‘ಬೇಕುದಿ’ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಚೊಚ್ಚಲ ಪ್ರವೇಶದ ಸಮಯದಲ್ಲಿ ಆಕೆಗೆ 17 ವರ್ಷ. ಕಾಜೋಲ್ ಅವರ ಮೊದಲ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಫ್ಲಾಪ್ ಆಗಿತ್ತು. ಬಾಜಿಗರ್ ಕಾಜೋಲ್ ಅವರ ಎರಡನೇ ಚಿತ್ರ. 1993ರಲ್ಲಿ ಈ ಚಿತ್ರ ಭಾರಿ ಹಿಟ್ ಆಗಿತ್ತು. ಆ ನಂತರ ಕಾಜೋಲ್ ಹಿಂತಿರುಗಿ ನೋಡಲೇ ಇಲ್ಲ.ತನ್ನ ವೃತ್ತಿಜೀವನದ ಹೋರಾಟದ ಬಗ್ಗೆ ಕಾಜೋಲ್ ಹಲವು ಬಾರಿ ಮಾತನಾಡಿದ್ದಾರೆ. ಸಿನಿಮಾಗಳಲ್ಲಿನ ಬಣ್ಣ ಮತ್ತು ತೂಕದ ಕಾರಣದಿಂದ ನಾನು ತುಂಬಾ ಕೇಳಿಸಿಕೊಳ್ಳಬೇಕಾಗಿತ್ತು  ಎಂದು ಈ ಹಿಂದೆ ಅನೇಕ ಬಾರಿ ಹೇಳಿಕೊಂಡಿದ್ದಾರೆ.

2022 ರಲ್ಲಿ ಸಂದರ್ಶನವೊಂದರಲ್ಲಿ, ಕಾಜೋಲ್ ಅವರು ಕಪ್ಪು ಮತ್ತು ದಪ್ಪಗಿದ್ದಕ್ಕಾಗಿ ಜನರು ಗೇಲಿ ಮಾಡುತ್ತಿದ್ದರು . ಹಾಗೆ ಅವಮಾನಿಸಿದಾಗ ಜನರ ಅಪಹಾಸ್ಯ ಕೇಳಿ ತುಂಬಾ ನೋವಾಯಿತು. ಆ ಸಮಯದಲ್ಲಿ ಅವಳು ತನ್ನ ಆತ್ಮಸ್ಥೈರ್ಯವನ್ನೂ ಕಳೆದುಕೊಂಡೆ. ಅಪಹಾಸ್ಯಗಳಿಂದ ಬೇಸತ್ತಾಗ, ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳಲು ಪ್ರಾರಂಭಿಸಿದೆ ಮತ್ತು ತಾನು ಸುಂದರವಾಗಿದ್ದೇನೆ ಎಂದು ಮನವರಿಕೆ ಮಾಡಿಕೊಂಡೆ ಎಂದು ಕಾಜೋಲ್ ಚಾಟ್ ಶೋನಲ್ಲಿ ಹೇಳಿದ್ದಾರೆ.

50 ವರ್ಷದ ಕಾಜೋಲ್ ಅಜಯ್ ದೇವಗನ್ ಅವರ ಪತ್ನಿ . ಈ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಕಾಜೋಲ್ ಆಗಾಗ್ಗೆ ತನ್ನ ಫೋಟೋಗಳನ್ನು ತನ್ನ ಕುಟುಂಬದೊಂದಿಗೆ ಹಂಚಿಕೊಳ್ಳುತ್ತಾಳೆ. ಇಂದು ಕಡಿಮೆ ಸಿನಿಮಾ ಮಾಡಿದರೂ ಉದ್ಯಮಿಯಾಗಿ ಕೋಟಿ ಗಳಿಸುತ್ತಿದ್ದಾಳೆ.

 ಕಾಜೋಲ್ ತನ್ನದೇ ಆದ ಮೇಕಪ್ ಬ್ರಾಂಡ್ ಅನ್ನು ಹೊಂದಿದ್ದಾಳೆ. ಇದಲ್ಲದೆ, ಅವರು ಅಜಯ್ ದೇವಗನ್ ಅವರ ನಿರ್ಮಾಣ ಸಂಸ್ಥೆಯ ಪಾಲುದಾರರಾಗಿದ್ದಾರೆ.  ಕಾಜೋಲ್ ಅವರ ನಿವ್ವಳ ಮೌಲ್ಯ ರೂ. 250 ಕೋಟಿ.  ಎನ್ನಲಾಗಿದೆ.

TAGGED:
Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…