ಕಡಬ ಪಟ್ಟಣ ಪಂಚಾಯಿತಿ ಮೀನು ಮಾರಾಟ ಹಕ್ಕು ಏಲಂ : ಮೂರು ಸ್ಟಾಲ್‌ಗಳಿಗೆ 24 ಲಕ್ಷ ರೂ.

elam
ಪಟ್ಟಣ ಪಂಚಾಯಿತಿ ಸಿಬ್ಬಂದಿ ಹರೀಶ್ ಹರಾಜು ಪ್ರಕ್ರಿಯೆ ನಡೆಸಿಕೊಟ್ಟರು.
Published on

ಕಡಬ: ತೀವ್ರ ಕುತೂಹಲ ಕೆರಳಿಸಿದ್ದ ಕಡಬ ಪಟ್ಟಣ ಪಂಚಾಯಿತಿ ಮೀನು ಮಾರಾಟದ ಹಕ್ಕನ್ನು ಜು.20ರಂದು ಏಲಂ ಮಾಡಲಾಗಿದ್ದು ತೀವ್ರ ಪೈಪೋಟಿಯಲ್ಲಿ ಮೂರು ಸ್ಟಾಲ್‌ಗಳು ಬರೋಬ್ಬರಿ 24 ಲಕ್ಷ ರೂ.ಗೆ ಏಲಂ ಆಗಿದೆ.

ಕನಿಷ್ಠ ಬಿಡ್ಡುಗಳು 2.20 ಲಕ್ಷ ರೂ.ಗೆ ಇದ್ದು ತೀವ್ರ ಪೈಪೋಟಿಯಿಂದ ಗರಿಷ್ಠ ಮೊತ್ತಕ್ಕೆ ಏಲಂ ಆಗಿದೆ. ಏಲಂ ಪ್ರಕ್ರಿಯೆಯಲ್ಲಿ 48 ಮಂದಿ ಪಾಲ್ಗೋಂಡಿರುವುದು ಕೂಡ ವಿಶೇಷವಾಗಿತ್ತು.

ಏಲಂ ಪ್ರಕ್ರಿಯೆಯಲ್ಲಿ ಪಂಚಾಯಿತಿ ಆಡಳಿತಾಧಿಕಾರಿ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಹಾಗೂ ಪಟ್ಟಣ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

2 ವರ್ಷಗಳಿಂದ ಏಲಂ ಆಗಿಲ್ಲ

ಎರಡು ವರ್ಷಗಳಿಂದ ಮೀನು ಮಾರಾಟದ ಹಕ್ಕನ್ನು ಏಲಂ ಮಾಡಿರಲಿಲ್ಲ, ಬದಲಾಗಿ ಪಟ್ಟಣ ಪಂಚಾಯಿತಿ ಈ ಹಿಂದೆ ಮೀನು ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ಶೇಖಡವಾರು ಹಣ ಹೆಚ್ಚು ಮಾಡಿ ಮುಂದುವರಿಸಿತ್ತು. ಈ ವಿಚಾರವನ್ನು ಆಕ್ಷೇಪಿಸಿ ಮಂಗಳೂರು ಹರೇಕಳ ನಿವಾಸಿ ಜಾಕೀರ್ ಹುಸೈನ್, ರಶೀದ್ ಹಳೇ ಸ್ಟೇಷನ್, ಮಂಗಳೂರು ಕೊಣಾಜೆಯ ಅಮೀರ್ ಪಿ. ಜಿಲ್ಲಾಧಿಕಾರಿಗೆ ಕಡಬ ಪಟ್ಟಣ ಪಂಚಾಯಿತಿ ವಿರುದ್ಧ ದೂರು ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ನಿಯಾಮನುಸಾರ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಡಬ ಪಟ್ಟಣ ಪಂಚಾಯಿತಿ ಜು.20ರಂದು ಏಲಂಗೆ ದಿನ ನಿಗದಿ ಮಾಡಿತ್ತು.

ಸಂತೆ ಬಿಡ್ ಮೊತ್ತಕ್ಕೆ ತಕರಾರು

ಕಡಬದಲ್ಲಿ ನಡೆಯುವ ವಾರದ ಸಂತೆಯ ಸುಂಕ ವಸೂಲಿ ಹಕ್ಕಿನ ಏಲಂಗೆ 1.5 ಲಕ್ಷ ಬಿಡ್ಡು ಪಂಚಾಯತಿ ನಿಗದಿ ಪಡಿಸಿದು,್ದ ಇದಕ್ಕೆ ಸುಮಾರು 40 ಜನ ಇ.ಎಂ.ಡಿ. ಪಾವತಿಸಿ ಏಲಂನಲ್ಲಿ ಭಾಗವಹಿಸಿದ್ದರು, ಆದರೆ ಏಲಂ ಪ್ರಕ್ರಿಯೆ ಪ್ರಾರಂಭವಾದ ಕೂಡಲೇ ಏಲಂದಾರರು 1.5 ಲಕ್ಷ ಬಿಡ್ ಇಟ್ಟರೆ ನಮಗೆ ನಷ್ಟವಾಗುತ್ತದೆ ಅದನ್ನು ಕಡಿಮೆ ಮಾಡುವಂತೆ ಆಗ್ರಹಿಸಿದರು. ಆದರೆ ನಿಯಮದಂತೆ ಈಗಲೇ ಕಡಿಮೆ ಮಾಡಲು ಸಾಧ್ಯವಿಲ್ಲದ ಕಾರಣ ಅಧಿಕಾರಿಗಳು ಸಾಧ್ಯವಿಲ್ಲ ಎಂದು ಹೇಳಿದರು. ಆದರೆ ಯಾರೂ ಏಲಂನಲ್ಲಿ ಭಾಗವಹಿಸದೆ ಪಂಚಾಯಿತಿ ಬಳಿಯೇ ವಸೂಲಿ ಹಕ್ಕು ಇಟ್ಟುಕೊಳ್ಳಲಾಯಿತು.

ಸಂತೆ ಮಾರುಕಟ್ಟೆ ಸರಿಯಾಗಿಲ್ಲ

ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಿದವರು ಮಾತನಾಡಿ, ಸಂತೆ ಏಲಂ ಮಾಡುತ್ತಿರಿ ಸಂತೆ ನಡೆಯುವುದು ರಾಜ್ಯ ಹೆದ್ದಾರಿಯಲ್ಲಿ ನಾವು ಪಂಚಾಯಿತಿಗೆ ತೆರಿಗೆ ಕಟ್ಟಿ ವ್ಯಾಪಾರ ಮಾಡುತ್ತೇವೆ, ನಮ್ಮ ಅಂಗಡಿಗಳ ಎದುರು ಸಂತೆ ವ್ಯಾಪಾರ ನಡೆಯುತ್ತದೆ, ಸರಿಯಾದ ಸಂತೆ ಮಾರುಕಟ್ಟೆಯೂ ಇಲ್ಲ, ಮೊದಲು ಅದನ್ನು ಸರಿ ಮಾಡಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net