ಹಾಲಾಡಿಯಲ್ಲಿ ಕ್ಲಸ್ಟರ್ ಮಟ್ಟದ ಕಬಡ್ಡಿ ಟೂರ್ನಿ

kabaddi
ಹಾಲಾಡಿ ಶಾಲೆಯಲ್ಲಿ ಕ್ಲಸ್ಟರ್‌ಮಟ್ಟದ ಕಬಡ್ಡಿ ಪಂದ್ಯಾಟ ಇತ್ತೀಚೆಗೆ ನಡೆಯಿತು. ಅಶೋಕ್‌ಕುಮಾರ್ ಶೆಟ್ಟಿ, ಜಾನಕಿ, ಸದಸ್ಯರಾದ ಜನಾರ್ದನ, ಗುರುರಾಜ್ ಶೆಟ್ಟಿ ಮೊದಲಾದವರಿದ್ದರು
Published on

ಜನ್ನಾಡಿ; ಹಾಲಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆದ ಐದು ಕ್ಲಸ್ಟರ್ ಮಟ್ಟದ ಕಬಡ್ಡಿ ಟೂರ್ನಿ ಬಾಲಕರ ವಿಭಾಗದಲ್ಲಿ ಬಿದ್ಕಲ್‌ಕಟ್ಟೆ ಶಾಲೆ ಪ್ರಥಮ, ಅಮಾಸೆಬೈಲು ಶಾಲೆ ದ್ವಿತೀಯ ಸ್ಥಾನಿಯಾಗಿದೆ. ಬಾಲಕಿಯರ ವಿಭಾಗದಲ್ಲಿ ಯಡಾಡಿ-ಮತ್ಯಾಡಿಯ ಮುರಾರ್ಜಿ ದೇಸಾಯಿ ಶಾಲೆ ಪ್ರಥಮ ಸ್ಥಾನ ಪಡೆದಿದ್ದು, ಅಮಾಸೆಬೈಲು ಶಾಲೆ ದ್ವಿತೀಯ ಸ್ಥಾನ ಪಡೆದಿದೆ.

ಸಮಾರೋಪ ಸಮಾರಂಭದಲ್ಲಿ ಹಾಲಾಡಿ ಗ್ರಾಪಂ ಅಧ್ಯಕ್ಷ ಅಶೋಕ್‌ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಜಾನಕಿ, ಸದಸ್ಯರಾದ ಜನಾರ್ದನ, ಗುರುರಾಜ್ ಶೆಟ್ಟಿ, ಹಾಲಾಡಿ ವೃತ್ತದ ಶಿಕ್ಷಣ ಸಂಯೋಜಕ ಶೇಖರ ಯು, ರೋಶನ್ ಬೇಬಿ, ಸುಕನ್ಯಾ, ಹನುಮಂತ ಶೆಣೈ, ಕಿಶನ್‌ರಾಜ್ ಶೆಟ್ಟಿ, ಶಶಿಧರ ಶೆಟ್ಟಿ, ನಿವೃತ್ತ ಶಿಕ್ಷಕ ಚಂದ್ರಶೇಖರ ಶೆಟ್ಟಿ, ಅನೂಪ್‌ಕುಮಾರ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ರಾಘವೇಂದ್ರ ಆಚಾರ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಲೀಲಾವತಿ ಸ್ವಾಗತಿಸಿದರು. ವತ್ಸಲಾ ವಂದಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net