ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ ತೇಜಸ್ವಿನಿ ಬಾಯಿ ಪತಿ ಕೋವಿಡ್‌ಗೆ ಬಲಿ

tejaswini kabaddi web
Published on

ಬೆಂಗಳೂರು: ಭಾರತ ಕಬಡ್ಡಿ ತಂಡದ ಮಾಜಿ ನಾಯಕಿ ತೇಜಸ್ವಿನಿ ಬಾಯಿ ಅವರ ಪತಿ ನವೀನ್ ಕರೊನಾ ಸೋಂಕಿನಿಂದ ಮಂಗಳವಾರ ಬೆಳಗ್ಗೆ ನಿಧನರಾದರು. ಮೃತರಿಗೆ 35 ವರ್ಷ ವಯಸ್ಸಾಗಿತ್ತು. ವಿಶ್ವಕಪ್ ಮತ್ತು ಏಷ್ಯನ್ ಗೇಮ್ಸ್ ಸ್ವರ್ಣ ಪದಕ ವಿಜೇತೆ ತೇಜಸ್ವಿನಿ ಬಾಯಿ ಅವರು ಕೂಡ ಸದ್ಯ ಕರೊನಾ ಸೋಂಕಿತೆಯಾಗಿದ್ದು, 4 ತಿಂಗಳ ಹಸುಗೂಸನ್ನು ಹೊಂದಿದ್ದಾರೆ.

ಭಾರತೀಯ ರೈಲ್ವೇಸ್ ಉದ್ಯೋಗಿಯಾಗಿರುವ ತೇಜಸ್ವಿನಿ ಅವರ ಪತಿ ನವೀನ್ ಉದ್ಯಮಿಯಾಗಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ತೇಜಸ್ವಿನಿ-ನವೀನ್ ವಿವಾಹವಾಗಿದ್ದರು. ತೇಜಸ್ವಿನಿ ಸದ್ಯ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

2010ರಲ್ಲಿ ಭಾರತ ತಂಡದ ಆಟಗಾರ್ತಿಯಾಗಿ ಗ್ವಾಂಗ್‌ರೆೌ ಏಷ್ಯಾಡ್ ಸ್ವರ್ಣ ಜಯಿಸಿದ್ದ ತೇಜಸ್ವಿನಿ, 2014ರಲ್ಲಿ ತಮ್ಮ ಸಾರಥ್ಯದಲ್ಲೇ ಏಷ್ಯಾಡ್ ಸ್ವರ್ಣ ಗೆದ್ದುಕೊಟ್ಟಿದ್ದರು. ವಿವಾಹದ ನಂತರ ಕಬಡ್ಡಿಯಿಂದ ನಿವೃತ್ತಿ ಹೊಂದಿದ್ದ ತೇಜಸ್ವಿನಿ, 2018ರಲ್ಲಿ ಭಾರತ ಮಹಿಳಾ ಕಬಡ್ಡಿ ತಂಡದ ಕೋಚ್ ಕೂಡ ಆಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net