ಪಾಕಿಸ್ತಾನ ಪರ ಬೇಹುಗಾರಿಕೆ! 12 ಟಿಬಿ ಡೇಟಾ ಡಿಲೀಟ್​, ಐಎಸ್‌ಐ ಏಜೆಂಟ್‌ಗಳ ಜೊತೆ ಮಾತುಕತೆ | Jyoti Malhotra

ವಿಜಯವಾಣಿ - 2025-05-27T180220.111
Published on

Jyoti Malhotra: ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇತ್ತೀಚೆಗೆ ಬಂಧಿಸಲ್ಪಟ್ಟ ಹರಿಯಾಣ ಮೂಲದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳ ಪಾಕ್​ ನಂಟು ಸದ್ಯ ಇಡೀ ದೇಶದ ಜನತೆಯನ್ನೇ ಬೆಚ್ಚಿಬೀಳಿಸಿದೆ. ಪಾಕಿಸ್ತಾನದ ಪರ ಬೇಹುಗಾರಿಕೆ ಆರೋಪ ಎದುರಿಸುತ್ತಿರುವ ಹರಿಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಪ್ರಕರಣದಲ್ಲಿ ಆಘಾತಕಾರಿ ಹಾಗೂ ಅಚ್ಚರಿ ಸಂಗತಿಗಳು ಇದೀಗ ಹೊರಬಿದ್ದಿವೆ.

ಕಿರಾತಕಿ ಜ್ಯೋತಿ

ಪಾಕಿಸ್ತಾನದ ಕುಖ್ಯಾತ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಅಧಿಕಾರಿಗಳೊಂದಿಗೆ ಆಕೆಗೆ ನೇರ ಸಂಪರ್ಕವಿದೆ ಎಂದು ಪೊಲೀಸರು ತೀರ್ಮಾನಿಸಿದ್ದಾರೆ. 33 ವರ್ಷದ ಜ್ಯೋತಿ ಮಲ್ಹೋತ್ರಾ ಯಾವುದೇ ಭಯವಿಲ್ಲದೆ ಅವರೊಂದಿಗೆ ಸಂಪರ್ಕ ಬೆಳೆಸಿಕೊಂಡಿರುವುದು ತನಿಖೆಯಲ್ಲಿ ಮತ್ತಷ್ಟು ಸ್ಪಷ್ಟವಾಗಿದೆ. ಅವರ ಜೊತೆಗೆ ನಿರಂತರವಾಗಿ ಸಂಪರ್ಕ ಹೊಂದಿದ್ದರು. ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ಗೆ ಭೇಟಿ ನೀಡಿದಾಗ ಆಕೆ ಅವರನ್ನು ಭೇಟಿಯಾಗಿದ್ದಾರೆ. ಆದಾಗ್ಯೂ, ತನಿಖಾಧಿಕಾರಿಗಳು ಐಎಸ್‌ಐನಲ್ಲಿ ಜ್ಯೋತಿ ಏನು ಮಾಡುತ್ತಿದ್ದಾರೆಂದು ಪತ್ತೆಹಚ್ಚಲು ತನಿಖೆ ಕೈಗೊಂಡಿದ್ದಾರೆ ಎಂದು ವರದಿ ಹೇಳಿದೆ.

12 ಟಿಬಿ ಡೇಟಾ ಡಿಲೀಟ್​

ಪೊಲೀಸರು ಜ್ಯೋತಿ ಬಳಿಯಿದ್ದ ಫೋನ್‌ಗಳು, ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆಕೆಯ ವಸ್ತುಗಳಲ್ಲಿದ್ದ ಹೆಚ್ಚಿನ ಪ್ರಮಾಣದ ಸಂದೇಶಗಳು ಮತ್ತು ಡೇಟಾ ಡಿಲೀಟ್​ ಆಗಿರುವುದನ್ನು ಅರಿತಿದ್ದಾರೆ. 12 ಟೆರಾಬೈಟ್‌ನಷ್ಟು ಡೇಟಾ ಅದರಲ್ಲಿತ್ತು ಎಂದು ಅಂದಾಜಿಸಲಾಗಿದೆ. ಸದ್ಯ ಅದರಲ್ಲಿದ್ದ ಡೇಟಾವನ್ನು ರಿಕವರಿ ಮಾಡಿರುವ ಅಧಿಕಾರಿಗಳು, ಮಾಹಿತಿಯನ್ನು ಮರು ಕಲೆಹಾಕಲು ಪ್ರಯತ್ನಿಸುತ್ತಿದ್ದಾರೆ. ದಾಖಲೆಗಳು ವಾಪಾಸ್​ ಸಿಕ್ಕಿದ್ರೆ, ಪ್ರಕರಣ ಬೇಧಿಸುವುದು ಮತ್ತಷ್ಟು ಸುಲಭವಾಗಲಿದೆ ಎಂದು ತನಿಖಾಧಿಕಾರಿಗಳು ನಂಬಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net