

ಬೆಂಗಳೂರು: ನಟಿ ಜ್ಯೋತಿ ರೈ ಬಗ್ಗೆ ಕನ್ನಡಿಗರಿಗೆ ಪರಿಚಯಿಸುವ ಅಗತ್ಯವಿಲ್ಲ. ಕಿರುತೆರೆ ಲೋಕದ ಪ್ರಸಿದ್ಧ ನಟಿ ಈಕೆ. ಜೋಗುಳ, ಕನ್ಯಾದಾನ, ಅನುರಾಗ ಸಂಗಮ, ಗೆಜ್ಜೆಪೂಜೆ, ಲವಲವಿಕೆ, ಪ್ರೇರಣಾ, ಕಿನ್ನರಿ, ಮೂರು ಗಂಟು, ಕಸ್ತೂರಿ ನಿವಾಸ ಸೇರಿದಂತೆ 15ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡಕ್ಕೆ ಮಾತ್ರ ಸೀಮಿತವಾಗದ ಜ್ಯೋತಿ ರೈ, ತೆಲುಗು ಕಿರುತೆರೆ ಪ್ರೇಕ್ಷಕರಿಗೂ ಚಿರಪರಿಚಿತ. ಜನಪ್ರಿಯ ಧಾರಾವಾಹಿ ಗುಪ್ಪೆದಂತ ಮನಸು ಧಾರಾವಾಹಿಯಲ್ಲಿ ‘ಜಗತಿ ಮೇಡಂ’ ಪಾತ್ರವನ್ನು ತುಂಬಾ ಚೆನ್ನಾಗಿ ನಿರ್ವಹಿಸಿದ್ದಾರೆ.
ಸದ್ಯ ಯಾವುದೇ ಅವಕಾಶಗಳು ಇಲ್ಲದಿರುವ ಕಾರಣ ಬಣ್ಣದ ಲೋಕದಿಂದ ಜ್ಯೋತಿ ರೈ ಅಂತರ ಕಾಯ್ದುಕೊಂಡಿದ್ದಾರೆ. ಹಾಗಂತ ಪ್ರೇಕ್ಷರಿಂದ ದೂರ ಉಳಿದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ಜ್ಯೋತಿ ರೈ ತಮ್ಮ ಬೋಲ್ಡ್ ಫೋಟೋಗಳನ್ನು ಹರಿಬಿಡುವ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುತ್ತಾರೆ. ಇದೀಗ ಮತ್ತಷ್ಟು ಹಾಟ್ ಫೋಟೋಗಳನ್ನು ಜ್ಯೋತಿ ರೈ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಚಿನ್ನದ ಬಣ್ಣದ ಉಡುಗೆ ಧರಿಸಿ ಕ್ಯಾಮೆರಾಗೆ ಮಾದಕ ನೋಟ ಬೀರಿರುವ ಫೋಟೋಗಳನ್ನು ಜ್ಯೋತಿ ರೈ ಪೋಸ್ಟ್ ಮಾಡಿದ್ದಾರೆ. ಫೋಟೋಗಳಿಗೆ ಮಿನುಗುವ ಸೊಬಗು ಎಂದು ಬರೆದುಕೊಂಡಿದ್ದಾರೆ. ಒಟ್ಟು 6 ಫೋಟೋಗಳನ್ನು ಜ್ಯೋತಿ ರೈ ಪೋಸ್ಟ್ ಮಾಡಿದ್ದು, ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೋ ಶೇರ್ ಮಾಡಿ 6 ಫೋಟೋಗಳಲ್ಲಿ ಉತ್ತಮ ಯಾವುದು ಎಂದು ಜ್ಯೋತಿ ರೈ ಪ್ರಶ್ನೆ ಮಾಡಿದ್ದಾರೆ.
ಜ್ಯೋತಿ ರೈ ಅವರ ಮೈಮಾಟಕ್ಕೆ ಫಿದಾ ಆಗಿರುವ ಅಭಿಮಾನಿಗಳು ನಿಮ್ಮ ಸೌಂದರ್ಯಕ್ಕೆ ಸಲಾಂ ಎನ್ನುತ್ತಿದ್ದಾರೆ. 40ರ ಆಸುಪಾಸಿನಲ್ಲೂ ಎಷ್ಟೊಂದು ಮಾದಕವಾಗಿ ಕಾಣುತ್ತಿದ್ದೀರಾ? ನಿಜಕ್ಕೂ ನೀವು ಸಖತ್ ಹಾಟ್ ಎಂದೆಲ್ಲ ನೆಟ್ಟಿಗರು ಜ್ಯೋತಿ ರೈ ಫೋಟೋಗಳಿಗೆ ಕಾಮೆಂಟ್ಗಳ ಸುರಿಮಳೆಗೈಯುತ್ತಿದ್ದಾರೆ.
ಅಂದಹಾಗೆ ಜ್ಯೋತಿ ರೈ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದವರು. ತಮ್ಮ 20ನೇ ವಯಸ್ಸಿಗೆ ಮದುವೆಯಾಗಿದ್ದು, ನೆಟ್‌ವರ್ಕಿಂಗ್ ಇಂಜಿನಿಯರ್ ಪದ್ಮನಾಭ ಎಂಬುವವರ ಕೈ ಹಿಡಿದಿದ್ದರು. ದಂಪತಿಗೆ ಒಬ್ಬ ಮಗ ಕೂಡ ಇದ್ದಾನೆ. ಇನ್ನೂ ವೈಯಕ್ತಿಕ ಕಾರಣಾಂತರಗಳಿಂದ ವಿಚ್ಛೇದನದ ಮೂಲಕ ಮೊದಲ ಮದುವೆ ಅಂತ್ಯವಾಗಿದೆ. ನಂತರ ನಟಿ ಟಾಲಿವುಡ್ನ ಖ್ಯಾತ ಚಿತ್ರ ನಿರ್ದೇಶಕರಾದ ಸುರೇಶ್ ಕುಮಾರ್ ಅಲಿಯಾಸ್ ಸುಕು ಪುರ್ವಜ್ ಅವರನ್ನು ವರಿಸಿ, ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಟಾಲಿವುಡ್ನಲ್ಲಿ ಸೀರಿಯಲ್ಸ್, ವೆಬ್ ಸೀರಿಸ್ ಹಾಗೂ ಸಿನಿಮಾಗಳಿಗೂ ನಾಯಕ ನಟಿಯಾಗುವಷ್ಟರ ಮಟ್ಟಕ್ಕೆ ತಮ್ಮ ಹೆಸರನ್ನು ಜ್ಯೋತಿ ರೈ ಬೆಳೆಸಿಕೊಂಡಿದ್ದಾರೆ. ಇತ್ತೀಚೆಗೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಜ್ಯೋತಿ ರೈ ಹೆಸರು ಹೆಚ್ಚಾಗಿ ಕೇಳಿಬಂದಿತ್ತು. ಜ್ಯೋತಿ ರೈ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು ಮತ್ತು ಈ ಬಗ್ಗೆ ನಟಿ ದೂರು ಸಹ ನೀಡಿದ್ದರು. (ಏಜೆನ್ಸೀಸ್)