ಒಟ್ಟಾವಾ: ಕೆನಡಾವು ಅಮೆರಿಕದ 51ನೇ ರಾಜ್ಯವಾಗಬಹುದೆಂದು ಈ ಹಿಂದೆ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಗೆ ಜಸ್ಟಿನ್ ಟ್ರುಡೊ( Justin Trudeau) ಪ್ರತಿಕ್ರಿಯಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಈ ಕಾಮೆಂಟ್ಗಳು ಕೇವಲ ಗಮನ ಬೇರೆಡೆ ಸೆಳೆಯುವ ತಂತ್ರ ಎಂದು ಹೇಳಿದ್ದಾರೆ.
![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಅವರು ಹೇಳಿದ ರೀತಿ ಆಗುವುದಿಲ್ಲ. ಕೆನಡಿಯನ್ನರು ಕೆನಡಿಯನ್ನರು ಎಂದು ಹೇಳಲು ಬಹಳ ಹೆಮ್ಮೆಪಡುತ್ತಾರೆ. ನಾವು ನಮ್ಮನ್ನು ಅಮೆರಿಕನ್ನರಲ್ಲ ಎಂದು ಸುಲಭವಾಗಿ ವ್ಯಾಖ್ಯಾನಿಸುತ್ತೇವೆ. ಡೊನಾಲ್ಡ್ ಟ್ರಂಪ್ ಒಬ್ಬ ನುರಿತ ಸಂಧಾನಕಾರ, ಅವರ ಈ ಹೇಳಿಕೆಗಳ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.
ಇತ್ತೀಚೆಗೆ ಡೊನಾಲ್ಡ್ ಟ್ರಂಪ್, ಕೆನಡಾ ಒಟ್ಟಾವಾದ ಗಡಿ ಭದ್ರತೆಯನ್ನು ಬಲಪಡಿಸುವವರೆಗೆ ಕೆನಡಾದಿಂದ ಎಲ್ಲಾ ಆಮದುಗಳ ಮೇಲೆ 25 ಪ್ರತಿಶತ ಸುಂಕವನ್ನು ವಿಧಿಸುವುದಾಗಿ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಸ್ಟಿನ್ ಟ್ರುಡೊ ಅವರು ಈ ಕ್ರಮವು ಎರಡೂ ದೇಶಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದ್ದಾರೆ.
ಸುಂಕಗಳು ಹೆಚ್ಚಾದರೆ ಅಮೆರಿಕನ್ ಗ್ರಾಹಕರು ಹೆಚ್ಚಿದ ಬೆಲೆಗಳನ್ನು ಎದುರಿಸಬೇಕಾಗುತ್ತದೆ. ಅಮೆರಿಕ ಸುಂಕಗಳನ್ನು ಹೆಚ್ಚಿಸಿದರೆ, ತೈಲ, ಅನಿಲ, ವಿದ್ಯುತ್, ಉಕ್ಕು, ಅಲ್ಯೂಮಿನಿಯಂ, ಮರದ ದಿಮ್ಮಿ, ಕಾಂಕ್ರೀಟ್ ಮತ್ತು ಕೆನಡಾದಿಂದ ಯುಎಸ್‌ಗೆ ಹೋಗುವ ಎಲ್ಲವೂ ಇದ್ದಕ್ಕಿದ್ದಂತೆ ಹೆಚ್ಚು ದುಬಾರಿಯಾಗುತ್ತವೆ ಎಂದು ಟ್ರೂಡೊ ಹೇಳಿದರು.
![blank](https://www.vijayavani.net/wp-content/plugins/wp-fastest-cache-premium/pro/images/blank.gif)
ಇದೇ ಸಂದರ್ಭದಲ್ಲಿ ಜಸ್ಟಿನ್ ಟ್ರುಡೊ 2018ರಲ್ಲಿ ವ್ಯಾಪಾರ ವಿವಾದದ ಸಮಯದಲ್ಲಿ ವಿಧಿಸಲಾದ ಕೌಂಟರ್-ಟ್ಯಾರಿಫ್ ಅನ್ನು ಉಲ್ಲೇಖಿಸಿದರು. ಹೈಂಜ್ ಕೆಚಪ್, ಪ್ಲೇಯಿಂಗ್ ಕಾರ್ಡ್‌ಗಳು, ಬೌರ್ಬನ್ ಮತ್ತು ಹಾರ್ಲೆ-ಡೇವಿಡ್‌ಸನ್ ಬೈಕ್‌ಗಳಂತಹ ಅಮೆರಿಕನ್ ಸರಕುಗಳ ಮೇಲೆ ಇದನ್ನು ವಿಧಿಸಲಾಯಿತು. ನಾವು ಅದನ್ನು ಮಾಡಲು ಬಯಸುವುದಿಲ್ಲ ಏಕೆಂದರೆ ಇದು ಕೆನಡಿಯನ್ನರಿಗೆ ಬೆಲೆಗಳನ್ನು ಹೆಚ್ಚಿಸುತ್ತದೆ. ಮತ್ತು ಇದು ನಮ್ಮ ಹತ್ತಿರದ ವ್ಯಾಪಾರ ಪಾಲುದಾರರನ್ನು ನೋಯಿಸುತ್ತದೆ ಎಂದು ಟ್ರೂಡೊ ಹೇಳಿದರು. ಡೊನಾಲ್ಡ್ ಟ್ರಂಪ್ ಅವರ ಪ್ರಸ್ತಾಪವನ್ನು ಜಸ್ಟಿನ್ ಟ್ರುಡೊ ತಿರಸ್ಕರಿಸಿದ್ದು, ಕೆನಡಾವು ಅಮೆರಿಕದ 51ನೇ ರಾಜ್ಯವಾಗಲು ಯಾವುದೇ ಸಾಧ್ಯತೆಯಿಲ್ಲ. ಕೆನಡಾ ಎಂದಿಗೂ ಅಮೆರಿಕದ ಭಾಗವಾಗುವುದಿಲ್ಲ ಎಂದು ಹೇಳಿದರು. (ಏಜೆನ್ಸೀಸ್)