ತಾರಕ್​ ರಾಮ್​ಗೆ ತಾತನ, ಅಭಿಮಾನಿಗಳ ಆಶೀರ್ವಾದವಿದೆ ಎಂದ ಜ್ಯೂನಿಯರ್​ ಎನ್​.ಟಿ.ಆರ್​

Junior NTR - Sudhakar 1
Published on

ಆನೇಕಲ್​: 'ತಾರಕ್​ ರಾಮ್​ ಗುಣಮುಖರಾಗುವುದಕ್ಕೆ ನಾರಾಯಣ ಹೃದಯಾಲಯ ವೈದ್ಯರು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಅದರ‌ ಜತೆಗೆ ಅವರಿಗೆ ತಾತನ ಮತ್ತು ಅಭಿಮಾನಿಗಳ ಆಶಿರ್ವಾದ ಇದೆ. ತಾರಕ್​ ಆದಷ್ಟು ಬೇಗ ಗುಣಮುಖರಾಗಿ ಬರಲಿ ಎಂದು ದೇವರಿಗೆ ಬೇಡಿಕೊಳ್ಳುತ್ತೇನೆ' ಎಂದು ಟಾಲಿವುಡ್​ ನಟ ಜ್ಯೂನಿಯರ್​ ಎನ್​.ಟಿ.ಆರ್​ ಹೇಳಿದ್ದಾರೆ.

ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ತೆಲುಗು ನಟ ಮತ್ತು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್​.ಟಿ. ರಾಮರಾವ್ ಅವರ ಮೊಮ್ಮಗ ತಾರಕ್​ ರತ್ನ ಅವರ ಆರೋಗ್ಯ ವಿಚಾರಿಸಲು ಟಾಲಿವುಡ್​ ನಟ ಜ್ಯೂನಿಯರ್​ ಎನ್​.ಟಿ.ಆರ್​ ಮತ್ತು ಡಾ.ಕೆ. ಸುಧಾಕರ್​ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ ಡಾ. ಸುಧಾಕರ್​ ಅವರಿಗೆ ಧನ್ಯವಾದ ಹೇಳಿದ ಜ್ಯೂನಿಯರ್​ ಎನ್​.ಟಿ.ಆ್​, 'ಡಾ. ಸುಧಾಕರರವರಿಗೂ ಧನ್ಯವಾದ ಹೇಳುತ್ತೇನೆ. ಅವರು ನಮ್ಮ ಕಷ್ಟಕಾಲದಲ್ಲಿ ಸಹಾಯ ಮಾಡುತ್ತಿದ್ದಾರೆ' ಎಂದರು.

ನಂತರ ಮಾತನಾಡಿದ ಸಚಿವ ಕೆ. ಸುಧಾಕರ್​, 'ಜನವರಿ 27ರಂದು ತಾರಕ್​ ರಾಮ್​ ಅವರಿಗೆ ಲಘು ಹೃದಯಘಾತ ಆಗಿತ್ತು. ಅವರಿಗೆ ನಾರಾಯಣ ಹೃದಯಾಲಯದ ಖ್ಯಾತ ವೈದ್ಯರು ಹೆಚ್ಚಿನ ಚಿಕಿತ್ಸೆ ಕೊಡುತ್ತಿದ್ದಾರೆ. ನಿಮ್ಹಾನ್ಸ್​ನಿಂದ ಮೆದಳು ತಜ್ಞರು ಕೂಡ ಬಂದು ವಿಚಾರಸಿದ್ದಾರೆ. ಆದರೆ, ಅವರು ಅಪಾಯದಿಂದ ಪಾರಾಗಿಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರು ಶೀಘ್ರ ಅವರು ಗುಣಮುಖರಾಗಿ ಬರಲಿ ಅಂತ ಆಶಿಸೋಣ' ಎಂದು ಹೇಳಿದರು.

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ಶುಕ್ರವಾರ ನಡೆದ ರಾಜಕೀಯ ಪಾದಯಾತ್ರೆಯಲ್ಲಿ ತಾರಕ್​ ರತ್ನ ಹೃದಯಾಘಾತದಿಂದ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net