ಕಿರಿಯ ಕುಸುಮ ಮಿಷನ್ ಲೀಗ್ ಸಾಂಸ್ಕೃತಿಕ ಸ್ಪರ್ಧೆ

udane
Published on

ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಹದಿನೈದು ವರ್ಷದೊಳಗಿನ ಬಾಲಕ-ಬಾಲಕಿಯರ ಕಿರಿಯ ಕುಸುಮ ಮಿಷನ್ ಲೀಗ್‌ನ ದ್ವೈವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆ ನೆಲ್ಯಾಡಿಯಲ್ಲಿ ನಡೆಯಿತು.

ನೆಲ್ಯಾಡಿ ಅಲ್ಫೋನ್ಸ ಪುಣ್ಯಕ್ಷೇತ್ರದ ಮಕ್ಕಳು ಗುಂಪು ವಿಭಾಗದ ಸ್ಕಿಟ್‌ನಲ್ಲಿ ಪ್ರಥಮ, ಸಮೂಹ ಗಾಯನದಲ್ಲಿ ಪ್ರಥಮ, ವ್ಯಕ್ತಿಗತ ವಿಭಾಗದ ನೃತ್ಯ ಪ್ರಥಮ, ಸೋಲೋ ಗಾಯನದಲ್ಲಿ ಪ್ರಥಮ, ಬೈಬಲ್ ವಾಚನದಲ್ಲಿ ಪ್ರಥಮ, ಭಾಷಣದಲ್ಲಿ ಪ್ರಥಮ, ವಚನ ಮಾಲೆಯಲ್ಲಿ ಪ್ರಥಮ ಸ್ಥಾನ ಪಡೆದು ಗ್ರೂಪ್ ಚಾಂಪಿಯನ್ಸ್ ಆಗಿ ಹೊರಹೊಮ್ಮಿದರು. ಸಂತ ಮೇರಿಸ್ ಆರ್ಲ ದ್ವಿತೀಯ ಸ್ಥಾನ ಪಡೆಯಿತು.

ಉದನೆ ಸೇಂಟ್ ತೋಮಸ್ ಫೋರೆನ್ ಚರ್ಚ್‌ನ ಧರ್ಮಗುರು ಸಿಬಿ ತೋಮಸ್ ಪನಚಿಕ್ಕಲ್, ಜೋಸೆಫ್ ಪೂದಕ್ಕುಯಿ, ಶಿರಾಡಿ ಶ್ರಿರೊಯ್ ನೆಲ್ಯಾಡಿ ಮುಖ್ಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದರು. ಜೋಸೆಫ್ ಪುದುಕ್ಕುಯಿ, ರಾಯ್ ಶಿರಾಡಿ, ಟೋಮಿ ಮಟ್ಟಯಿ ಉಪಸ್ಥಿತರಿದ್ದರು. ನೆಲ್ಯಾಡಿ ಅಲ್ಫೋನ್ಸ ಚರ್ಚ್ ಧರ್ಮಗುರು ಶಾಜಿ ಮ್ಯಾಥ್ಯೂ ವಿಜೇತರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net