ಭಾರತದಲ್ಲಿ 5ಜಿ ಅನುಷ್ಠಾನದ ವಿರುದ್ಧ ಕೇಸ್​ ಹಾಕಿದ ಜೂಹಿ ಚಾವ್ಲಾ

5G - Juhi Chawla - Final
Published on

ಮುಂಬೈ: ಜಗತ್ತಿನಾದ್ಯಂತ ಫೋನ್​ ಕಂಪೆನಿಗಳು, 5ಜಿ ನೆಟ್​ವರ್ಕ್​ ಅನುಷ್ಠಾನಗೊಳಿಸುವುದಕ್ಕೆ ಪ್ರಯತ್ನ ನಡೆಸುತ್ತಿವೆ. ಭಾರತ ಸಹ ಈ 5ಜಿ ರೇಸ್​ನಿಂದ ಹಿಂದೆ ಬಿದ್ದಿಲ್ಲ. ಆದರೆ, ಇದರಿಂದ ಮುಂದಿನ ತಲೆಮಾರಿನ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಎದುರಾಗುವ ಸಾಧ್ಯತೆ ಇದೆ ಎಂಬ ಭಯ ಹಲವರಲ್ಲಿದೆ.

ಈಗ ಇದೇ ವಿಷಯವಾಗಿ ನಟಿ ಜೂಹಿ ಚಾವ್ಲಾ ಸಿಡಿದೆದ್ದಿದಾರೆ. ಇತ್ತೀಚಿನ ದಿನಗಳಲ್ಲಿ ಪರಿಸರ ಹೋರಾಟದಲ್ಲಿ ಗುರುತಿಸಿಕೊಂಡಿರುವ ಅವರು, 5ಜಿ ಅನುಷ್ಠಾನದ ವಿರುದ್ಧ ಕೇಸ್​ ಹಾಕಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ನಾನು ತಾಂತ್ರಿಕ ಪ್ರಗತಿಯ ವಿರುದ್ಧವಲ್ಲ. ನಾವು ಸಹ ಹೊಸಹೊಸ ತಂತ್ರಜ್ನಾನವನ್ನು ಬಳಸಬೇಕೆಂಬ ಆಸೆ ಇದ್ದೇ ಇದೆ. ಆದರೆ, ಇದರಿಂದ ಆಗುವ ಪರಿಣಾಮಗಳ ಕುರಿತು ಯೋಚಿಸಬೇಕಿದೆ. 5ಜಿ ಅನುಷ್ಠಾನದಿಂದಾಗುವ ರೇಡಿಯೇಷನ್​ ಅತ್ಯಂತ ಹಾನಿಕಾರಕವಷ್ಟೇ ಅಲ್ಲ, ಇದರಿಂದ ಜನರ ಆರೋಗ್ಯ ಮತ್ತು ಸುರಕ್ಷತೆಗೆ ಸಾಕಷ್ಟು ಸಮಸ್ಯೆಯಾಗಲಿದೆ ಎಂದು ತಿಳಿದುಬಂದಿದೆ. ಹಾಗಾಗಿ, ಅನುಷ್ಠಾನಕ್ಕೂ ಮುನ್ನ ಈ ತಂತ್ರಜ್ನಾನ ಸುರಕ್ಷಿತ ಮತ್ತು ಇದರಿಂದ ಮನುಷ್ಯರು ಮತ್ತು ಪ್ರಾಣಿ-ಪಕ್ಷಿಗಳಿಗೆ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಪ್ರಮಾಣೀಕರಿಸಬೇಕಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯವು ಸಂಬಂಧಪಟ್ಟ ಇಲಾಖೆಗೆ ನಿರ್ದೇಶಿಸಬೇಕಿದೆ' ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net