ಜೂ.ಎನ್​ಟಿಆರ್​ ಸೋದರಸಂಬಂಧಿ ನಂದಮೂರಿ ತಾರಕ ರತ್ನಗೆ ಹೃದಯಾಘಾತ: ಬೆಂಗಳೂರು ಆಸ್ಪತ್ರೆಗೆ ಶಿಫ್ಟ್​

Nandamuri Taraka Ratna
Published on

ಆನೇಕಲ್: ತೆಲುಗು ನಟ ನಂದಮೂರಿ ತಾರಕ ರತ್ನ ಅವರಿಗೆ ಹೃದಯಾಘಾತ ಹಿನ್ನೆಲೆ ಪ್ರಾಥಮಿಕ ಚಿಕಿತ್ಸೆಯ ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಸ್ಥಳಾಂತರ ಮಾಡಲಾಗಿದೆ.

ಬೆಂಗಳೂರಿನ ಬೊಮ್ಮಸಂದ್ರದ ನಾರಾಯಣ ಹೃದಯಾಲದ ಆಸ್ಪತ್ರೆಗೆ ನಂದಮೂರಿ ತಾರಕ ರತ್ನ ಅವರನ್ನು ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ಕರೆತರಲಾಗಿದೆ. ಆಂಬ್ಯುಲೆನ್ಸ್​ ಜೊತೆಗೆ ಸುಮಾರು ನಲವತ್ತು ಕಾರುಗಳಲ್ಲಿ ನಂದಮೂರಿ ತಾರಕ ರತ್ನ ಕುಟುಂಬ ಆಗಮಿಸಿದೆ.

ನಾರಾಯಣ ಹೃದಯಾಲಯದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಕೆಲ ಸಮಯದಲ್ಲಿ ವೈದ್ಯರು ಇಸಿಎಂಒ ಚಿಕಿತ್ಸೆ ಕೊಡಲಿದ್ದಾರೆ.

ಶುಕ್ರವಾರ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ನಡೆದ ರಾಜಕೀಯ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು ದಿಢೀರ್​ ಕುಸಿದುಬಿದ್ದಿದ್ದರು. ಅವರಿಗೆ ಭಾರೀ ಹೃದಯಾಘಾತದಿಂದ ಬಳಲಿದ್ದಾರೆ ಎಂದು ಅವರ ಅಂಕಲ್​ ನಂದಮೂರಿ ಬಾಲಕೃಷ್ಣ ತಿಳಿಸಿದ್ದಾರೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ, ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ, ಇದೀಗ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರು ಆರಂಭಿಸಿದ ರಾಜಕೀಯ ಸಮಾವೇಶದಲ್ಲಿ ರತ್ನಾ ಭಾಗವಹಿಸಿದ್ದರು. ವರದಿಯ ಪ್ರಕಾರ, ನಂದಮೂರಿ ತಾರಕ ರತ್ನ ಅವರು ಲಕ್ಷ್ಮಿಪುರಂ ಶ್ರೀ ವರದರಾಜ ಸ್ವಾಮಿ ದೇವಸ್ಥಾನದಲ್ಲಿ ಪೂಜೆಯಲ್ಲಿ ಪಾಲ್ಗೊಂಡರು. ನಂತರ ಅವರು ಮಸೀದಿಯಲ್ಲಿ ಪ್ರಾರ್ಥನೆಗೆ ಸಲ್ಲಿಸಿದರು. ಮಸೀದಿಯಿಂದ ಹೊರಬರುವ ವೇಳೆ ಕುಸಿದು ಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಿದ ವಿಡಿಯೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net