ರಾಘವೇಂದ್ರ ಗಣಪತಿ, ಶೃಂಗೇರಿ, ಸತ್ಯನಾರಾಯಣ ಸೇರಿ ವಿಜಯವಾಣಿಯ ಮೂವರಿಗೆ ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ *ಕೊಪ್ಪಳದಲ್ಲಿ ಮಾ.9ಕ್ಕೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

KUWJ awards
Published on

ಬೆಂಗಳೂರು:

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಕೊಡ ಮಾಡುವ ಕೆಯುಡಬ್ಲೂಜೆ ದತ್ತಿನಿಧಿ ಪ್ರಶಸ್ತಿಗಳನ್ನು ಪ್ರಕಟ ಮಾಡಲಾಗಿದ್ದು, ವಿಜಯವಾಣಿಯ ಮೂವರಿಗೆ ಪ್ರಶಸ್ತಿ ದೊರೆತಿದೆ.

ಡೆಪ್ಯುಟಿ ಎಡಿಟರ್ ರಾಘವೇಂದ್ರ ಗಣಪತಿ ಅವರಿಗೆ ಡಿವಿಜಿ ಪ್ರಶಸ್ತಿ, ಶಿವಮೊಗ್ಗ ಆವೃತ್ತಿ ಸ್ಥಾನಿಕ ಸಂಪಾದಕ ಚಂದ್ರಶೇಖರ ಶೃಂಗೇರಿ ಅವರಿಗೆ ಮಿಂಚು ಶ್ರೀನಿವಾಸ್ ಪ್ರಶಸ್ತಿ, ಮೈಸೂರು ಆವೃತ್ತಿ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಅವರಿಗೆ ಕೆಯುಡಬ್ಲ್ಯೂಜೆ ದತ್ತಿ ಪ್ರಶಸ್ತಿ ದೊರೆತಿದೆ.

ವೃತ್ತಿ ಸೇವೆ, ಸಾಮಾಜಿಕ ಬದ್ದತೆ ಮತ್ತು ಸಾಧನೆಗಳಿಗಾಗಿ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೊಪ್ಪಳದಲ್ಲಿ ಮಾ.9ರಂದು ನಡೆಯಲಿರುವ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ತಿಳಿಸಿದ್ದಾರೆ.

ಪ್ರಶಸ್ತಿಗಳ ವಿವರ ಇಂತಿದೆ.

ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿ: ಸುಬ್ಬು ಹೊಲೆಯಾರ್

ಡಿ.ವಿ.ಜಿ.ಪ್ರಶಸ್ತಿ :ರಾಘವೇಂದ್ರ ಗಣಪತಿ, ಡೆಪ್ಯೂಟಿ ಎಡಿಟರ್, ವಿಜಯವಾಣಿ, ಬೆಂಗಳೂರು

ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿ: ಜಿ.ಯು.ಭಟ್, ಹಿರಿಯ ವರದಿಗಾರರು, ಉದಯವಾಣಿ, ಹೊನ್ನಾವರ.

ಎಸ್.ವಿ. ಜಯಶೀಲರಾವ್ ಪ್ರಶಸ್ತಿ: ಅನು ಶಾಂತರಾಜು, ಹಿರಿಯ ಪೋಟೋ ಜರ್ನಲಿಸ್ಟ್, ತುಮಕೂರು

ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ: ಸುಭಾಷ್ ಹೂಗಾರ, ಹಿರಿಯ ಪತ್ರಕರ್ತರು.

ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಂ.ಆರ್.ಸತ್ಯನಾರಾಯಣ, ಬ್ಯೂರೋ ಮುಖ್ಯಸ್ಥರು, ವಿಜಯವಾಣಿ, ಮೈಸೂರು.

ಸಿ.ಆರ್.ಕೃಷ್ಣರಾವ್ ಪ್ರಶಸ್ತಿ: ಉಗಮ ಶ್ರೀನಿವಾಸ್, ಹಿರಿಯ ವರದಿಗಾರರು, ಕನ್ನಡಪ್ರಭ, ತುಮಕೂರು

ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ: ಮಂಜುಶ್ರೀ ಎಂ ಕಡಕೊಳ, ಹಿರಿಯ ಪತ್ರಕರ್ತರು, ಪ್ರಜಾವಾಣಿ.

ಬದರಿನಾಥ ಹೊಂಬಾಳೆ ಪ್ರಶಸ್ತಿ : ಗಂಗಹನುಮಯ್ಯ, ಸಂಪಾದಕರು, ಅಮೃತವಾಣಿ, ತುಮಕೂರು

ಡಾ.ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ: ಡಾ.ಸಿದ್ಧನಗೌಡ ಪಾಟೀಲ್, ಸಂಪಾದಕರು, ಹೊಸತು, ಬೆಂಗಳೂರು.

ಕಿಡಿಶೇಷಪ್ಪ ಪ್ರಶಸ್ತಿ: ಮು.ವೆಂಕಟೇಶಯ್ಯ, ಸಿಂಹ ಬೆಂಗಳೂರು

ರವಿ ಬೆಳಗೆರೆ ಪ್ರಶಸ್ತಿ:

ಎಂ.ಕೆ.ಹೆಗಡೆ, ಹಿರಿಯ ಪತ್ರಕರ್ತರು, ಬೆಳಗಾವಿ

ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ: ಎಂ.ಯೂಸುಫ್ ಪಟೇಲ್, ಹಿರಿಯ ಪತ್ರಕರ್ತರು. ಚಿಕ್ಕಮಗಳೂರು.

ಹೆಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ: ಬಸವರಾಜ ಹೆಗ್ಗಡೆ, ಸಂಜೆ ಮಿತ್ರ, ಮಂಡ್ಯ

ರಾಜಶೇಖರ ಕೋಟಿ ಪ್ರಶಸ್ತಿ:

ಕೆ.ಕೆ.ಬೋಪಣ್ಣ, ಹಿರಿಯ ವರದಿಗಾರರ, ಆಂದೋಲನ, ಕೊಡಗು

ಪಿ.ರಾಮಯ್ಯ ಪ್ರಶಸ್ತಿ: ಎಸ್.ಟಿ.ರವಿಕುಮಾರ್, ಮುಖ್ಯ ವರದಿಗಾರರು, ಸ್ಟಾರ್ ಆಪ್ ಮೈಸೂರು. ಮೈಸೂರು.

ಮಾ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ: ತಾ.ನಂ. ಕುಮಾರಸ್ವಾಮಿ, ಹಿರಿಯ ಪತ್ರಕರ್ತರು, ಆನೆಕಲ್

ಮಹದೇವ ಪ್ರಕಾಶ್ ಪ್ರಶಸ್ತಿ: ಪ್ರಭುಲಿಂಗ ನಿಲೂರೆ, ಹಿರಿಯ ವರದಿಗಾರರು, ವಿಜಯ ಕರ್ನಾಟಕ, ಕಲಬುರ್ಗಿ

ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ: ಚಂದ್ರಶೇಖರ ಶೃಂಗೇರಿ, ಬ್ಯೂರೋ ಮುಖ್ಯಸ್ಥರು, ವಿಜಯವಾಣಿ, ಶಿವಮೊಗ್ಗ

ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ: ಗಿರೀಶ್ ಉಮರಾಯ್, ಶಿವಮೊಗ್ಗ

ಎಂ.ನಾಗೇಂದ್ರ ರಾವ್ ಪ್ರಶಸ್ತಿ: ಕೆ.ಬಿ.ಜಗದೀಶ್, ಸಂಜೆವಾಣಿ, ಕೋಲಾರ

ಶ್ರೀಮತಿ ಗಿರಿಜಮ್ಮ, ರುದ್ರಪ್ಪ ತಾಳಿಕೋಟಿ ಪ್ರಶಸ್ತಿ: ಕವಿತ, ಸಂಯುಕ್ತ ಕರ್ನಾಟಕ. ಶಿವಮೊಗ್ಗ

ಅಪ್ಪಾಜಿಗೌಡ (ಸಿನಿ)ಪ್ರಶಸ್ತಿ: ಗಣೇಶ್ ಕಾಸರಗೋಡು, ಹಿರಿಯ ಪತ್ರಕರ್ತರು

ಮೂಡಣ, ಹಾವೇರಿ ಪ್ರಶಸ್ತಿ: ಎಂ.ಚಿರಂಜೀವಿ, ಹಿರಿಯ ಪತ್ರಕರ್ತರು, ಹಾವೇರಿ

ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿಗಳು:

ರಂಗನಾಥ್ ಎಸ್ ಭಾರದ್ವಾಜ್, ಟಿವಿ9

ರಮಾಕಾಂತ್, ಸಂಪಾದಕರು, ಟಿವಿ5 ಬೆಂಗಳೂರು.

ಶ್ರೀನಿವಾಸ್-ಹಿರಿಯ ಪತ್ರಕರ್ತ, ಬೆಂಗಳೂರು.

ಬಿ.ಪಿಳ್ಳರಾಜು, ಕನ್ನಡ ಪ್ರಭ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ.

ಬಾಸ್ಕರ ರೈ ಕಟ್ಟ, ಸುದ್ದಿ ಬಿಡುಗಡೆ, ಮಂಗಳೂರು

ಗುರುಶಾಂತ.ಎನ್., ಸಾಕ್ಷಿ ದಿನಪತ್ರಿಕೆ, ಬಳ್ಳಾರಿ

ಎಸ್.ಎಂ.ಮನೋಹರ, ಹೊಸಪೇಟೆ, ವಿಜಯನಗರ ಜಿಲ್ಲೆ

ಸಿ.ಬಿ.ಸುಬೇದಾರ್, ವಿಜಯ ಕರ್ನಾಟಕ, ನರಗುಂದ, ಗದಗ ಜಿಲ್ಲೆ

ನಾಗೇಂದ್ರ, ಪ್ರಜಾವಾಣಿ, ಶಹಾಪುರ, ಯಾದಗಿರಿ ಜಿಲ್ಲೆ

ಡಿ.ಜಿ.ರಾಜಗೋಪಾಲ್, ಜ್ವಾನದೀಪ, ಹಾಸನ ಜಿಲ್ಲೆ

ಮಂಜುನಾಥ್ ಜೆ,ವಿಜಯ ಕರ್ನಾಟಕ, ಚಳ್ಳಕೆರೆ, ಚಿತ್ರದುರ್ಗ ಜಿಲ್ಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net