ಹೆಡ್ಡಿಂಗ್​ ಮಾಸ್ತಾರ ನಾಡಿಗೇರ್​

journalist vasant nadiger died sad condolence koppal media club
Published on

ಕೊಪ್ಪಳ: ಹಿರಿಯ ಪತ್ರಕರ್ತ ವಸಂತ ನಾಡಿಗೇರ್​ ನಿಧನ ಹಿನ್ನೆಲೆ ನಗರದ ಮೀಡಿಯಾ ಕ್ಲಬ್​ನಲ್ಲಿ ಸೋಮವಾರ ಸಂತಾಪ ಸೂಚಿಸಲಾಯಿತು.

ಪತ್ರಕರ್ತ ಪ್ರಮೋದ ಜಿ.ಕೆ. ಮಾತನಾಡಿ, ವಸಂತ ನಾಡಿಗೇರ್​ ಅವರು ಹೆಡ್ಡಿಂಗ್​ ಮಾಸ್ತಾರ ಎಂದೇ ಪತ್ರಿಕೋದ್ಯಮದಲ್ಲಿ ಚಿರಪಚಿತರು. ಅವರ ಅಗಲಿಕೆ ವೃತ್ತಿಗೆ ಆದ ನಷ್ಟ. ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದರು.

ಪತ್ರಕರ್ತ ಶರಣಬಸವ ಹುಲಿಹೈದರ ಮಾತನಾಡಿ, ನಾಡಿಗೇರ್​ ತಲೆ ಬರಹ ಪ್ರಯೋಗ ಕನ್ನಡ ಪತ್ರಿಕೋದ್ಯಮದ ಹೊಸತನಕ್ಕೆ ಸಾಕ್ಷಿ ಆಗಿತ್ತು. ವಿಶ್ವೇಶ್ವರ ಭಟ್​ ಅವರು ಬರೆದ "ತಲೆಬರಹ ಪತ್ರಿಕೆಗಳ ಹಣೆಬರಹ' ಎನ್ನುವ ಪುಸ್ತಕದಲ್ಲಿ ವಸಂತ್​ ನಾಡಗೇರ್​ ಬಗ್ಗೆ ಬರೆದಿದ್ದಾರೆ. ಅತ್ಯಂತ ಸೌಮ್ಯ ಸ್ವಭಾವದ ವ್ಯಕ್ತಿತ್ವ. ಅವರ ಅಗಲಿಕೆ ಕನ್ನಡ ಪತ್ರಿಕಾ ರಂಗಕ್ಕೆ ತುಂಬಲಾರದ ನಷ್ಟ ಎಂದರು.

ಕ್ಲಬ್​ ಖಜಾಂಚಿ ಅನಿಲ ಬಾಚನಳ್ಳಿ ಮಾತನಾಡಿದರು. ಹಿರಿಯ ಪತ್ರಕರ್ತರಾದ ಸೋಮರಡ್ಡಿ ಅಳವಂಡಿ, ಹುಸೇನ್​ ಪಾಷಾ, ದೇವಪ್ಪ ನಾಗನೂರು, ಸಂತೋಷ ದೇಶಪಾಂಡೆ, ಪತ್ರಕರ್ತರಾದ ದತ್ತು ಕಮ್ಮಾರ, ಶ್ರೀನಾಥ ಮರಕುಂಬಿ, ಪರಮೇಶ ರಡ್ಡಿ ಹ್ಯಾಟಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net