ಅಮೆಜಾನ್​ ಪ್ರೈಮ್​ಗೆ ಬರಲಿದೆ ಆಸ್ಕರ್​ ಪ್ರಶಸ್ತಿ ಗಿಟ್ಟಿಸಿಕೊಂಡ 'ಜೋಕರ್'.. ಯಾವಾಗ ಗೊತ್ತ?

jocker
Published on

ಜೋಕರ್, ಕಳೆದ ವರ್ಷ ಹಾಲಿವುಡ್​ನಲ್ಲಿ ದೊಡ್ಡ ಮಟ್ಟದ ಸಂಚಲನ ಸೃಷ್ಟಿಸಿದ ಸಿನಿಮಾ. ಅಷ್ಟೇ ಅಲ್ಲ ಆಸ್ಕರ್​ ಸಮಾರಂಭದಲ್ಲೂ ಎಲ್ಲರಿಂದ ಪ್ರಶಂಸೆ ಪಡೆದುಕೊಂಡ ಸಿನಿಮಾ. ಚಿತ್ರದಲ್ಲಿನ ನಟನೆಗಾಗಿ ನಟ ಜೋಕಿನ ಫೋನಿಕ್ಸ್​ಗೆ ಅತ್ಯುತ್ತಮ ನಟ ಆಸ್ಕರ್​ ಪ್ರಶಸ್ತಿಯೂ ಈ ಚಿತ್ರಕ್ಕೆ ಲಭ್ಯವಾಗಿತ್ತು. ಇದೀಗ ಇದೇ ಸಿನಿಮಾ ಅಮೆಜಾನ್​ ಪ್ರೈಮ್​ನಲ್ಲಿ ಬಿಡುಗಡೆ ಆಗಲು ದಿನಾಂಕ ಘೋಷಿಸಿಕೊಂಡಿದೆ. ಹೌದು, ಭಾರತದಲ್ಲಿ ಏ. 20ರಂದು ಅಮೆಜಾನ್​ನಲ್ಲಿ ಜೋಕರ್​ ಲಭ್ಯವಾಗಲಿದೆ. ಈಗಾಗಲೇ ವಿದೇಶಗಳಲ್ಲಿನ ಅಮೆಜಾನ್ ಬಳಕೆದಾರರಿಗೆ ಲಭ್ಯವಿರುವ ಈ ಚಿತ್ರ ಭಾರತದ ಬಳಕೆದಾರರಿಗೆ ಲಭ್ಯವಾಗಿರಲಿಲ್ಲ. ಇದೀಗ ಅದಕ್ಕೂ ಸಮಯ ಕೂಡಿಬಂದಿದ್ದು, ಮೊಬೈಲ್​ ಫೋನ್​ನಲ್ಲೇ ಸಿನಿಮಾ ಕಣ್ತುಂಬಿಕೊಳ್ಳಬಹುದಾಗಿದೆ. ಜೋಕಿನ್​ ಫೋನಿಕ್ಸ್ ಜೋಕರ್​ ಆಗಿ ಕಾಣಿಸಿಕೊಂಡಿರುವ ಸೈಕಲಾಜಿಕಲ್​ ಥ್ರಿಲ್ಲರ್​ ಶೈಲಿಯ ಈ ಚಿತ್ರಕ್ಕೆ ತೊಡ್​ ಫಿಲ್ಲಿಪ್ಸ್​ ನಿರ್ದೇಶನ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net