ನಮ್ಮ ಜತೆ ಬೆಡ್​ರೂಮ್​ಗೂ ಬಂದು ಬಿಡಿ… ಕರೀನಾ ಎದುರೇ ಹೀಗಂದಿದ್ಯಾಕೆ ನಟ ಸೈಫ್​ ಅಲಿ ಖಾನ್​?

Saif ali Khan with Kareena Kapoor
ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ದಂಪತಿ
Published on

ಮುಂಬೈ: ಬಾಲಿವುಡ್​ನಲ್ಲಿ ಸೆಲೆಬ್ರಿಟಿಗಳನ್ನು ಕಾಡುವ ಪ್ರಮುಖರಲ್ಲಿ ಒಬ್ಬರೆಂದರೆ ಅದು ಪಾಪರಾಜಿಗಳು. ಸೆಲೆಬ್ರಿಟಿಗಳಿಗೂ ವೈಯಕ್ತಿಕ ಜೀವನ ಇದೆ ಎಂಬುದನ್ನು ಮರೆತು ಕೆಲವೊಮ್ಮೆ ತುಂಬಾ ಅತಿರೇಕದ ವರ್ತನೆ ತೋರುತ್ತಾರೆ. ಎಲ್ಲೆಂದರಲ್ಲಿ ಫೋಟೋಗಾಗಿ ಮುಗಿ ಬೀಳುತ್ತಾರೆ. ಇನ್ನು ಕೆಲವೊಮ್ಮೆ ಸೆಲೆಬ್ರಿಟಿಗಳ ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸುತ್ತಾರೆ. ಇಂತಹ ಘಟನೆಗಳು ಅನೇಕ ಸೆಲೆಬ್ರಿಗಳನ್ನು ಮುಜುಗರಕ್ಕೆ ದೂಡುತ್ತದೆ.

ಇತ್ತೀಚೆಗೆ ನಟಿ ಮಲೈಕಾ ಅರೋರಾ ತಮ್ಮ ತಾಯಿ ಜೋಯ್ಸ್​ ಪಾಲಿಕಾರ್ಪ್​ ಹುಟ್ಟುಹಬ್ಬದ ಪಾರ್ಟಿಗೆ ಬಾಲಿವುಡ್​ ಮಂದಿಯನ್ನು ಆಹ್ವಾನಿಸಿದ್ದರು. ಪಾರ್ಟಿಗೆ ಬಂದವರಿಗಾಗಿಯೇ ಪಾಪರಾಜಿಗಳು ಎಂದಿನಂತೆ ಕಾದು ಕುಳಿತಿದ್ದರು. ಆಗನಿಸಿದ ನಟ-ನಟಿಯರು ಪಾಪರಾಜಿಗಳತ್ತ ಸಣ್ಣ ಕಿರುನಗೆಗಳನ್ನು ಬೀರಿ ಪೋಸ್​​ ನೀಡಿದರು. ಆದರೆ, ಈ ಸಂದರ್ಭದಲ್ಲಿ ಪಾಪರಾಜಿಗಳ ನಡೆ ಬಾಲಿವುಡ್ ಸ್ಟಾರ್ ದಂಪತಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್​ರನ್ನು ಮುಜುಗರಕ್ಕೀಡು ಮಾಡಿತು. ಇದರಿಂದ ಆಕ್ರೋಶಗೊಂಡ ಸೈಫ್​ ಅಲಿ ಖಾನ್​, ಪಾಪರಾಜಿಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಸೈಫ್​ ಮತ್ತು ಕರೀನಾ ಕ್ಯಾಮೆರಾಗೆ ಪೋಸ್​ ನೀಡಿ, ಗೌಪ್ಯತೆ ಕಾಪಾಡುವಂತೆ ಮನವಿ ಮಾಡಿದರು. ಆದರೂ ಸುಮ್ಮನಾಗದ ಪಾಪರಾಜಿಗಳು ದಂಪತಿಯನ್ನು ಹಿಂಬಾಲಿಸಿಕೊಂಡೇ ಹೋದರು. ಇದರಿಂದ ಆಕ್ರೋಶಗೊಂಡ ಸೈಫ್​ ಅಲಿ ಖಾನ್​, ನಮ್ಮ ಬೆಡ್​ರೂಮ್​ಗೂ ಬಂದು ಬಿಡಿ ಎಂದು ಗದರಿದರು.

ಸೈಫ್​ ಮಾತು ಕೇಳಿದ ಕೆಲ ಪಾಪರಾಜಿಗಳು ಸಣ್ಣ ನಗು ಬೀರಿದರು. ಬಳಿಕ ಕರೀನಾ ಅವರ ತೋಳುಗಳನ್ನು ಆವರಿಸಿದ ಸೈಫ್, ನಗುವಿನ ಸನ್ನೆ ಮಾಡಿ, ಎಲ್ಲ ಸಂಭಾಷಣೆಗೆ ಅಂತ್ಯವನ್ನು ಸೂಚಿಸಿದರು. ಈ ವೇಳೆ ಪಾಪರಾಜಿಯೊಬ್ಬ ವಿ ಲವ್ ಯೂ ಸೈಫ್ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ನಾವು ನಿನ್ನನ್ನೂ ಪ್ರೀತಿಸುತ್ತೇನೆ ಎಂದು ಸೈಫ್​ ಉತ್ತರಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net