More

    ಝೂಮ್​ಗೆ ಟಕ್ಕರ್​ ಕೊಡಲಿದೆ ಅಂಬಾನಿಯ ‘ಜಿಯೋ ಮೀಟ್​’

    ನವದೆಹಲಿ: ಇದು ವಿಡಿಯೋ ಸಂವಾದಗಳ ಕಾಲ. ಕೋವಿಡ್​ ಕಾರಣದಿಂದಾಗಿ ಮನೆಯಲ್ಲೇ ಬಂಧಿಯಾಗಿರುವ ಜನರು ತಮ್ಮವರೊಂದಿಗೆ ಬೆರೆಯಲು ವಿಡಿಯೋ ಕಾಲ್​​ಗಳನ್ನು ಮಾಡುತ್ತಿದ್ದಾರೆ. ಕಚೇರಿ ಕೆಲಸಗಳಿಗಾಗಿ ವಿಡಿಯೋ ಕಾನ್ಫರೆನ್ಸ್​ ನಡೆಸುತ್ತಿದ್ದಾರೆ.

    ಸದ್ಯ ಭಾರತದಲ್ಲಿ ಝೂಮ್​, ಗೂಗಲ್​ ಮೀಟ್​, ಟಿಸಿಎಸ್​ ಹಾಗೂ ಇತರ ಕೆಲ ಆ್ಯಪ್​ಗಳಿಗೆ ಭಾರಿ ಬೇಡಿಕೆ ಬಂದಿದೆ. ಆದರೆ, ಝೂಮ್​ನಲ್ಲಿ ಸುರಕ್ಷತಾ ಸಂಬಂಧಿ ಆತಂಕಗಳಿವೆ ಎಂದು ಕೇಂದ್ರ ಸರ್ಕಾರದ ಸೈಬರ್​ ಸೆಕ್ಯುರಿಟಿ ವಿಭಾಗ ಇತ್ತೀಚೆಗಷ್ಟೇ ಎಚ್ಚರಿಸಿತ್ತು. ಸರ್ಕಾರಿ ಉದ್ದೇಶಗಳಿಗಾಗಿ ಬಳಸದಿರುವುದೇ ಕ್ಷೇಮ ಎಂದು ಹೇಳಿತ್ತು. ಇಷ್ಟಾದರೂ ಝೂಮ್​ ಜನಪ್ರಿಯತೆ ಕುಗ್ಗಿಲ್ಲ.

    ಇದನ್ನೂ ಓದಿ; ಫೇರ್​ ಆ್ಯಂಡ್​ ಲವ್ಲೀ ಹೆಸರು ಬದಲಾಯಿಸಿದ ಹಿಂದುಸ್ತಾನ್​ ಯುನಿಲೀವರ್​ 

    ಇದೀಗ ಝೂಮ್​ಗೆ ಟಕ್ಕರ್​ ಕೊಡಲು ಜಿಯೋ ಫ್ಲಾಟ್​ಫಾರ್ಮ್ಸ್​ ಮೂಲಕ ‘ಜಿಯೋ ಮೀಟ್​’ ಆ್ಯಪ್​ ಬಿಡುಗಡೆ ಮಾಡಿದ್ದಾರೆ ಮುಖೇಶ್​ ಅಂಬಾನಿ. ಇತರ ವಿಡಿಯೋ ಆ್ಯಪ್​ಗಳಂತೆ ಇದರಿಂದಲೂ ಅನಿಯಮಿತ ಎಚ್​ಡಿ ಗುಣಮಟ್ಟದ ವಿಡಿಯೋ ಕಾಲ್​ಗಳನ್ನು ಮಾಡಬಹುದು. ಒಂದೇ ಕರೆಯಲ್ಲಿ 100 ಜನರನ್ನು ಸೇರಿಸಿಕೊಳ್ಳಬಹುದು.

    ಇನ್ನೊಂದು ವಿಷಯವೆಂದರೆ ಕರೆ ಅವಧಿಯ ಮೇಲೆ ಯಾವುದೇ ನಿರ್ಬಂಧವಿಲ್ಲ. 24 ತಾಸು ನಿರಂತರವಾಗಿ ಮಾತನಾಡಬಹುದು. ಸದ್ಯ ಇದರಲ್ಲಿನ ಸೇವೆಗಳು ಉಚಿತವಾಗಿವೆ ಹಾಗೂ ಶುಲ್ಕ ವಿಧಿಸುವ ಪ್ರಸ್ತಾಪಗಳು ಇದ್ದಂತಿಲ್ಲ.

    ಇದನ್ನೂ ಓದಿ; ಒಂದೂವರೆ ದಿನದಲ್ಲಿ ಒಂದೂವರೆ ಕೋಟಿ ಜನರು ಫಿದಾ ಆದ್ರು; ಜಗದಗಲ ಬೆಳಗಿದ ಬೆಂಗಳೂರಿನ ಕೀರ್ತಿ

    ವಿಡಿಯೋ ಕಾನ್ಫರೆನ್ಸ್​ ಸೇವೆಗಳಿಗೆ ಎಂಟರ್​ಪ್ರೈಸ್​ ಗ್ರೇಡ್​ ನಿಯಂತ್ರಣ ಮಾನಕಗಳಿರಲಿವೆ. ಪ್ರತಿ ಕರೆಗೂ ಪಾಸ್​ವರ್ಡ್ ಪ್ರೊಟೆಕ್ಷನ್​​, ಮಲ್ಟಿ ಡಿವೈಸ್​ ಲಾಗಿನ್​ ಸಪೋರ್ಟ್​, ಸ್ಕ್ರೀನ್​ ಶೇರಿಂಗ್​ ಹಾಗೂ ಕೊಲಾಬರೇಟ್​ ಸೌಲಭ್ಯವಿದೆ. ಇದರಲ್ಲಿ ಸೇಫ್​ ಡ್ರೈವಿಂಗ್​ ಮೋಡ್​ ಕೂಡ ಇದೆ.
    ವೈದ್ಯರು, ಶಿಕ್ಷಕರ ಅಗತ್ಯಗಳನ್ನು ಮನಗಂಡು ವಿಶೇಷ ಫೀಚರ್​ಗಳನ್ನು ನೀಡಲಾಗಿದೆ.

    ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts